
ಕಲಬುರಗಿ,ಏ 2:ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನಲ್ಲಿ ಎರಡು ಪ್ರತ್ಯೇಕ ಅಬಕಾರಿ ದಾಳಿಯಲ್ಲಿ 4,34,926 ರೂ ಮೌಲ್ಯದ ಅಕ್ರಮ ಮದ್ಯ ವಶಪಡಿಸಿಕೊಳ್ಳಲಾಗಿದೆ.ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿದ್ದು, ಮತ್ತೊಬ್ಬ ಪರಾರಿಯಾಗಿದ್ದಾನೆ.
ಬಸವಕಲ್ಯಾಣ ತಾಲೂಕಿನ ಉಜಳಂಬ ಗ್ರಾಮದಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ ಸುಮಾರು 13 ರಟ್ಟಿನ ಪೆಟ್ಟಿಗೆಳಲ್ಲಿ 3,55,938 ರೂ ಮೌಲ್ಯದ ಒಟ್ಟು 90.72 ಲೀಟರ್ ಮದ್ಯ ಹಾಗೂ 15.720 ಲೀಟರ್ ಬಿಯರ್ ಜಪ್ತು ಮಾಡಿ,ದಾಳಿ ಕಾಲಕ್ಕೆ ಪರಾರಿಯಾದ ಆರೋಪಿ ನಾಗಣ್ಣ ಅಮೃತಪ್ಪ ಭೋಸಗ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಜರುಗಿಸಲಾಗಿದೆ.
ಬಸವಕಲ್ಯಾಣ ತಾಲೂಕಿನ ರಾಜೇಶ್ವರ ಗ್ರಾಮದಿಂದ ಇಸ್ಲಾಂಪುರ್ ಗ್ರಾಮದ ಮಾರ್ಗ ಮಧ್ಯ ಲಿಂಗದಳ್ಳಿ ಕ್ರಾಸನಲ್ಲಿ ನೊಂದಣಿ ಸಂಖ್ಯೆ ಇಲ್ಲದ ದ್ವಿ ಚಕ್ರ ವಾಹನ ದಲ್ಲಿ ಸಾಗಿಸುತ್ತಿದ್ದ 5 ರಟ್ಟಿನ ಪೆಟ್ಟಿಗೆಳಲ್ಲಿ 78,988 ರೂ ಮೌಲ್ಯದ ಒಟ್ಟು 45.360ಲೀಟರ್ ಮದ್ಯ ಜಪ್ತು ಮಾಡಿ,ಆರೋಪಿಗಳಾದ ಗುರುನಾಥ ರಾಜು ರಾಜೇಶ್ವರ ಮತ್ತು ಮಿಥುನ ರೂಪಸಿಂಗ ತಡೋಲ ತಾಂಡಾ ಎಂಬುವರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಜರುಗಿಸಲಾಗಿದೆ. ಬಸವ ಕಲ್ಯಾಣ ವಲಯದ ಅಬಕಾರಿ ಉಪ ನಿರೀಕ್ಷಕರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.