ಅಬಕಾರಿ ದಾಳಿ: ಸ್ವದೇಶಿ ಮದ್ಯ ಜಪ್ತಿ

ಕಲಬುರಗಿ,ಡಿ.9-ಅಬಕಾರಿ ಇಲಾಖೆ ಅಧಿಕಾರಿಗಳು ಮಿಂಚಿನ ದಾಳಿ ನಡೆಸಿ ಕಲಬುರಗಿ ತಾಲ್ಲೂಕಿನ ಹದನೂರ ಗ್ರಾಮದ ರಸ್ತೆಯಲ್ಲಿ ಬೈಕ್ ಮೇಲೆ ಸಾಗಿಸುತ್ತಿದ್ದ ಸ್ವದೇಶಿ ಮದ್ಯ ಜಪ್ತಿ ಮಾಡಿದ್ದಾರೆ.
ಅಬಕಾರಿ ಜಂಟಿ ಆಯುಕ್ತರಾದ ಶಶಿಕಲಾ ಎಸ್.ಒಡೆಯರ್ ಹಾಗೂ ಅಬಕಾರಿ ಉಪ ಆಯುಕ್ತರ ಆದೇಶದ ಮೇರೆಗೆ ಅಬಕಾರಿ ಉಪ ಅಧೀಕ್ಷಕ ಮಹ್ಮದ್ ಇಸ್ಮಾಯಿಲ್ ಇನಾಮದಾರ, ಅಬಕಾರಿ ಉಪ ನಿರೀಕ್ಷಕರಾದ ಶಿವಾನಂದ ಪಾಟೀಲ್, ಶರಣಪ್ಪ ವೈ ಹಾಗೂ ಅಬಕಾರಿ ಹೆಡ್ ಕಾನ್ಸಸ್ಟೇಬಲ್ ಗಳಾದ ಭೀಮಶೇನರಾವ, ಮಹ್ಮದ್ ಸಲೀಮೊದ್ದಿನ್ ಸುನೀಲಕುಮಾರ ಅವರು ದಾಳಿ ನಡೆಸಿ ಬೈಕ್ ಸೇರಿದಂತೆ 60 ಸಾವಿರ ರೂಪಾಯಿ ಮೌಲ್ಯದ ಸ್ವದೇಶಿ ಮದ್ಯ ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.