ಚಿಂಚೋಳಿ,ಮಾ.24- ಕರ್ನಾಟಕ ವಿಧಾನ ಸಭೆ ಸಾರ್ವತ್ರಿಕ ಚುನಾವಣೆ ಘೋಷಣೆಯ ಮುನ್ನ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಚುನಾವಣಾ ಆಯೋಗ ಕೈಗೊಂಡಿದ್ದು, ತಾಲೂಕಿನ ಸುಲೆಪೇಟ ಗ್ರಾಮದಿಂದ ಎಲಕಪಳ್ಳಿ ಗ್ರಾಮದಕಡೆ ಹೋಗುವ ರಸ್ತೆ ಸರಕಾರಿ ಪದವಿ ಕಾಲೇಜು ಹತ್ತಿರ ವಾಹನವನ್ನು ತಡೆದ ಅಬಕಾರಿ ಇಲಾಖೆಯ ತಂಡ, ಅಕ್ರಮವಾಗಿ ಮಾರಾಟ ಮಾಡುವ ಉದ್ದೇಶದಿಂದ ಬೈಕನಲ್ಲಿ ಸಾಗಾಣಿಕೆ ಮಾಡುತಿದ್ದ 43.2 ಲೀಟರ್ ಭಾರತೀಯ ತಯಾರಿಕಾ ಮದ್ಯ ದೊರತಿದ್ದನ್ನು ಜಪ್ತು ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಆರೋಪಿತ ಸಿದ್ದಪ್ಪ್ ತಂದೆ ಸಾಯಿಬಣ್ಣ ಮಡಿವಾಳ ಸಾ: ಸಾಸರಗಾಂವ್ ತಾ: ಕಾಳಗಿ ಎಂಬ ಆರೋಪಿತನ ದಸ್ತಗಿರಿ ಮಾಡಿ ಆತನ ವಿರುದ್ಧ ಅಬಕಾರಿ ಠಾಣೆ ಚಿಂಚೋಳಿ ವಲಯದಲ್ಲಿ ಪ್ರಕರಣವನ್ನು ದಾಖಲಾಗುದ್ದು. ಜಪ್ತು ಮಾಡಿದ ಮುದ್ದೆಮಾಲಿನ ಒಟ್ಟು ಅಂದಾಜು ಮೌಲ್ಯ ರೂ 97280/- ಗಳಾಗಿರುತ್ತದೆ. ಸದರಿ ದಾಳಿಯ ತಂಡದಲ್ಲಿ ಜೆ.ಬಿ ಬೇಲೂರ ಅಬಕಾರಿ ನಿರೀಕ್ಷಕರು, ಶಿವರಾಜ, ಸಿದ್ದಾರೂಢ ಅಬಕಾರಿ ಪೇದೆಗಳು ಮತ್ತು ವಾಹನ ಚಾಲಕ ಗುರುನಾಥ ಇದ್ದರು.