ಅಬಕಾರಿ ದಾಳಿ: ಮದ್ಯ ಸಾಗಿಸುತ್ತಿದ್ದ ಮೂವರ ಬಂಧನ

ಚಿಂಚೋಳಿ,ಏ.4- ಚುನಾವಣಾ ನೀತಿ ಸಂಹಿತೆ ಜಾರಿಯ ಹಿನ್ನಲೆಯಲ್ಲಿ ಅಬಕಾರಿ ನಿರೀಕ್ಷಕ ಜೆ.ಬಿ.ಬೆಲೂರ ನೆತೃತ್ವದ ತಂಡ ಕೈಗೊಂಡ ಗಸ್ತು ಕಾರ್ಯಾಚರಣೆಯಲ್ಲಿ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ವಾಹನ ಜಪ್ತಿ ಮಾಡಿ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶ್ವಿಯಾಗಿದೆ.
ಚಿಂಚೋಳಿ ತಹಶೀಲ್ ಹಾಗೂ ಬೀದರ ರಸ್ತೆಯಲ್ಲಿ ಅಕ್ರಮವಾಗಿ ಎರಡು ಬೈಕ್‍ಗಳಲ್ಲಿ ಮತ್ತು ತ್ರಿಚಕ್ರ ವಾಹನದಲ್ಲಿ ಮಾರಾಟದ ಉದ್ದೇಶದಿಂದ ಸಾಗಿಸುತ್ತಿದ್ದ ಮದ್ಯ ಹಾಗೂ ಬೀಯರ್ ವಶಪಡಿಸಿಕೊಂಡ ಈ ತಂಡ, ಮೂರು ಜನ ಆರೋಪಿಗಳನ್ನು ಬಂಧಿಸಿ ಅವರ ವಿರುದ್ದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದೆ.
ಜಪ್ತಿ ಮಾಡಿದ 98.360 ಲೀಟರ್ ಮದ್ಯ ಮತ್ತು 47040 ಲೀಟರ್ ಬೀಯರ್, ವಾಹನ ಸೇರಿ ಒಟ್ಟು ಅಂದಾಜು ಮೌಲ್ಯ 2.77 ಲಕ್ಷ ಎಂದು ಪ್ರಕರಣದಲ್ಲಿ ದಾಖಲಿಸಲಾಗಿದೆ.