ಅಬಕಾರಿ ದಾಳಿ: ಮದ್ಯ, ಬೈಕ್ ವಶ

ಬೀದರ್:ಎ.5:ಅಬಕಾರಿ ಅಪರ ಆಯುಕ್ತರು,ಕೇಂದ್ರ ಸ್ಥಾನ ಬೆಳಗಾವಿ ರವರ ಹಾಗೂ ಅಬಕಾರಿ ಜಂಟಿ ಆಯುಕ್ತರು (ಜಾರಿ ಮತ್ತು ತನಿಖೆ) ಕಲ್ಬುರ್ಗಿ ವಿಭಾಗ ರವರ ಮಾರ್ಗದರ್ಶನದಲ್ಲಿ ಮತ್ತು ಅಬಕಾರಿ ಉಪ ಆಯುಕ್ತರು, ಬೀದರ ಜಿಲ್ಲೆ ಬೀದರ ರವರ ಆದೇಶದಂತೆ ನಿನ್ನೆ ರಾತ್ರಿ 08:00 ಗಂಟೆಗೆ ಔರಾದ್ ಪಟ್ಟಣದಿಂದ ಚಿಂತಕಿ ಗ್ರಾಮಕ್ಕೆ ಹೋಗುವ ರಸ್ತೆಯ ಅಗ್ನಿ ಶಾಮಕ್ ಎದುರು ರಸ್ತೆಯಲ್ಲಿ ಖಚಿತ ಬಾತ್ಮಿ ಮೇರೆಗೆ ದಾಳಿ ಮಾಡಿ ಒಂದು ದ್ವಿಚಕ್ರ ವಾಹನದ ಮೇಲೆ ನೋಂದಣಿ ಸಂಖ್ಯೆ:ಏಂ 38 ಎ 8542 ನೆದರ್ ಮೇಲೆ ಸುಮಾರು 17. 280 ಲೀ ಮದ್ಯ ಹಾಗೂ ದ್ವಿಚಕ್ರ ವಾಹನ ಜಪ್ತಿ ಪಡಿಸಿಕೊಳ್ಳಲಾಗಿರುತ್ತದೆ. ಇದರ ಒಟ್ಟು ಮೌಲ್ಯ: 56720ಸಾವಿರ ರೂಗಳು ಆಗಿರುತ್ತದೆ.ಸದರಿ ವಾಹನವನ್ನು ವಶಕ್ಕೆ ಪಡೆದು ಆರೋಪಿತನಾದ ಪ್ರಶಾಂತ್ ತಂದೆ ಸೋಪನರಾವ್ ಎರನಾಳೇ ಎಂಬಾತನನ್ನು ದಸ್ತಗಿರಿ ಗೊಳಿಸಿ ಪ್ರಕರಣ ವನ್ನು ದಾಖಲಿಸಿ ಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ತನಿಖೆಯನ್ನು ಮುಂದುವರೆಸ ಲಾಯಿತು