ಅಬಕಾರಿ ದಾಳಿ; ಮದ್ಯ ಜಪ್ತಿ

ಹೊಸನಗರ.ಜೂ.೫; ತಾಲೂಕಿನ ಹೊನ್ನೆತಾಳ್ ಗ್ರಾಮ ಪಂಚಾಯತಿ ವ್ಯಾಪ್ತಿಯ ಚೆಂಗಾರು-ಹೊಸಪೇಟೆ ಎಂಬಲ್ಲಿ ಸತೀಶ್ ಬಿನ್ ದುಗ್ಗಪ್ಪ ಎಂಬುವವರು ಲಾಕ್‌ಡೌನ್ ಹಿನ್ನಲೆಯಲ್ಲಿ ಕೊಪ್ಪ ತಾಲೂಕಿನಿಂದ ಅಕ್ರಮವಾಗಿ ಮದ್ಯ ತಂದು ಮನೆಯಲ್ಲಿ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ತೀರ್ಥಹಳ್ಳಿ ಅಬಕಾರಿ ಪೊಲೀಸರು ದಾಳಿ ಮಾಡಿ ಸಂಗ್ರಹಿಸಿಟ್ಟಿದ್ದ 3.3 ಲೀಟರ್ ಮದ್ಯವನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.ಆರೋಪಿ ಸತೀಶ್ ಪರಾರಿ ಆಗಿದ್ದು, ಆತನ ವಿರುದ್ದ ಕರ್ನಾಟಕ ಅಬಕಾರಿ ಕಾಯ್ದೆ 1965ರ ಕಲಂ 32,34 ಹಾಃ 38(ಎ) ಅಡಿಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಜಿಲ್ಲಾ ಅಬಕಾರಿ ಉಪ ಆಯುಕ್ತ ಕ್ಯಾಪ್ಟನ್ ಅಜಿತ್ ಕುಮಾರ್ ಸೂಚನೆ ಮೇರೆಗೆ, ತೀರ್ಥಹಳ್ಳಿ ಉಪವಿಭಾಗದ ಅಬಕಾರಿ ಉಪ ಅಧೀಕ್ಷಕ ಸಂತೋಷ್ ಕುಮಾರ್ ಎಲ್. ತಿಪ್ಪಣ್ಣನವರ್ ಮಾರ್ಗದರ್ಶನದಲ್ಲಿ, ತೀರ್ಥಹಳ್ಳಿ ಉಪ ವಿಭಾಗದ ಅಬಕಾರಿ ನಿರೀಕ್ಷಕ ಎಸ್.ಎಂ.ಅಮಿತ್ ಕುಮಾರ್ ನೇತೃತ್ವದಲ್ಲಿ ಕಾನ್ಸ್ಟೇಬಲ್‌ಗಳಾದ ಎಂ.ಕೆ.ರಾಕೇಶ್, ರಾಘವೇಂದ್ರ, ಕೆ.ಜಿ.ಮಲ್ಲಿಕ್, ಚಾಲಕ ಪ್ರಸನ್ನ ದಾಳಿಯಲ್ಲಿ ಭಾಗವಹಿಸಿದ್ದರು.