ಅಬಕಾರಿ ದಾಳಿ ನಡೆಸಿ 1,50,000 ಮೌಲ್ಯದ ಸ್ವದೇಶಿ ಮದ್ಯ ಬಿಯರ್ ಹಾಗೂ 4 ದ್ವಿ ಚಕ್ರ ವಾಹನಗಳು ಜಪ್ತಿ

ಕಲಬುರಗಿ,ಮೇ.02:ಕಲಬುರಗಿ ಉಪ ವಿಭಾಗ ಅಬಕಾರಿ ಉಪ ಅಧೀಕ್ಷಕರ ನೇತೃತ್ವದಲ್ಲಿ ಇತ್ತೀಚೆಗೆ ಮಿಂಚಿನ ಅಬಕಾರಿ ದಾಳಿ ನಡೆಸಿ 1,50,000 ಮೌಲ್ಯದ ಸ್ವದೇಶಿ ಮದ್ಯ ಬಿಯರ್ ಹಾಗೂ 4 ದ್ವಿ ಚಕ್ರ ವಾಹನಗಳನ್ನು ಜಪ್ತಿಪಡಿಸಲಾಗಿದೆ ಎಂದು ಕಲಬುರಗಿ ವಿಭಾಗದ ಅಬಕಾರಿ ಉಪ ಅಧೀಕ್ಷಕರಾದ ಮಹ್ಮದ ಇಸ್ಮಾಯಿಲ ಇನಾಮದಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಲಬುರಗಿ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕ ಮಹ್ಮದ ಇಸ್ಮಾಯಿಲ ಇನಾಮದಾರ ಹಾಗೂ ಸಿಬ್ಬಂದಿಯವರ ನೇತೃತ್ವದಲ್ಲಿ ದಿನಾಂಕ: 30-04-2021 ರಂದು ಕಲಬುರಗಿ ಹುಮನಾಬಾದ ರಸ್ತೆಯ ಉಪಳಾಂವ ಕ್ರಾಸ ಹತ್ತಿರ ರಸ್ತೆ ಕಾವಲು ಮಾಡುತ್ತಿರುವಾಗ ಅಕ್ರಮವಾಗಿ ಮದ್ಯ ಸಾಗಾಣಿಕೆಗೆ ಬಳಸಿದ ಒಂದು ದ್ವಿಚಕ್ರ ವಾಹನ ಸಂಖ್ಯೆ ಕೆಎ-32, ಇಎನ್-6597, ಎಕ್ಟೀವಾ-12 ಹಾಗೂ 17.280 ಲೀಟರ ಮದ್ಯವನ್ನು ಜಪ್ತಿ ಮಾಡಿಕೊಂಡು ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಅಬಕಾರಿ ಉಪ ನಿರೀಕ್ಷಕ ಸಂತೋಷಕುಮಾರ ಅವರು ನಗರದ ಸ್ಟೇಷನ ಏರಿಯಾದಲ್ಲಿ ಗಸ್ತು ಮಾಡುತ್ತಿರುವಾಗ ಅಕ್ರಮವಾಗಿ 17.280 ಲೀಟರ ಮದ್ಯವನ್ನು ಹೊಂದಿ ಸಾಗಾಣಿಕೆ ಮಾಡುತ್ತಿರುವ ವಾಹನ ಸಂಖ್ಯೆ: ಕೆಎ-32 ಇಅರ್-0162 ಹೊಂಡಾ ಬಿ ಶೈನ್ ದ್ವಿ ಚಕ್ರ ವಾಹನವನ್ನು ಜಪ್ತಿ ಮಾಡಿಕೊಂಡು ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಕಲಬುರಗಿ ವಲಯ ನಂ. 1ರ ಅಬಕಾರಿ ನಿರೀಕ್ಷಕರು ಹಾಗೂ ಸಿಬ್ಬಂದಿಯವರೊಂದಿಗೆ ದಿನಾಂಕ: 30-04-2021 ರಂದು ಕಲಬುರಗಿ ನಗರದ ನೆಹರು ಗಂಜ್ ಏರಿಯಾದಲ್ಲಿ ಗಸ್ತು ಕಾರ್ಯಚರಣೆ ಮಾಡುತ್ತಿರುವಾಗ ಅಕ್ರಮವಾಗಿ ಸಾಗಾಣಿಕೆಗೆ ಬಳಸಿದ್ದ 2 ದ್ವಿಚಕ್ರ ವಾಹನಗಳನ್ನು ಹಾಗೂ 21.600 ಲೀಟರ ಮದ್ಯವನ್ನು ಜಪ್ತಿಪಡಿಸಿ ಕಲಬುರಗಿ ವಲಯ ನಂ.1ರ ಅಬಕಾರಿ ಉಪ ನಿರೀಕ್ಷಕ ಪ್ರವೀಣಕುಮಾರ ಹಾಗೂ ಬಸವರಾಜ ಉಳ್ಳೆಸೂಗೂರು ತಲಾ ಒಂದೊಂದು ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಕಲಬುರಗಿ ವಲಯ ನಂ.2ರ ಅಬಕಾರಿ ನಿರೀಕ್ಷಕರು ಮತ್ತು ಸಿಬ್ಬಂದಿಯವರೊಂದಿಗೆ ದಿನಾಂಕ: 30-04-2021 ರಂದು ಕಲಬುರಗಿ ತಾಲೂಕಿನ ನಂದಿಕೂರ ಗ್ರಾಮದಲ್ಲಿ ಗಸ್ತು ಕಾರ್ಯಚರಣೆ ಮಾಡುತ್ತಿದ್ದಾಗ, ಅಕ್ರಮವಾಗಿ 20.610 ಲೀಟರ ಮದ್ಯವನ್ನು ಜಪ್ತಿ ಮಾಡಿಕೊಂಡು ಅಬಕಾರಿ ನಿರೀಕ್ಷಕರಾದ ಮಲ್ಲಿಕಾರ್ಜುನ ಡಿ ಹಾಗೂ ಅಬಕಾರಿ ಉಪ ನಿರೀಕ್ಷಕ ನರೆಂದ್ರಕುಮಾರ ತಲಾ ಒಂದೊಂದು ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಈಗಸ್ತು ಕಾರ್ಯಚರಣೆ ಅಬಕಾರಿ ದಾಳಿಯಲ್ಲಿ ಕಲಬುರಗಿ ಉಪ ವಿಭಾಗದ ಅಬಕಾರಿ ನಿರೀಕ್ಷಕರಾದ ವಿಠ್ಠಲರಾವ ಎಂ. ವಾಲಿ, ಕಲಬುರಗಿ ವಲಯ ನಂ:2ರ ಮಲ್ಲಿಕಾರ್ಜುನ ಡಿ., ವಲಯ ನಂ. 1ರ ಬಾಲಕೃಷ್ಣ ಮುದಕಣ್ಣ, ಅಬಕಾರಿ ಉಪ ನಿರೀಕ್ಷಕ ಸಂತೋಷ ಕುಮಾರ, ನರೇಂದ್ರ ಕುಮಾರ, ಪ್ರವೀಣಕುಮಾರ, ಬಸವರಾಜ ಉಳ್ಳೆಸೂಗೂರು ಹಾಗೂ ಅಬಕಾರಿ ಮುಖ್ಯ ಪೇದೆಗಳಾದ ಬಸವರಾಜ ಎಂ., ಸಿದ್ದಮಲ್ಲಪ್ಪ ಅಬಕಾರಿ ಪೇದೆಗಳಾದ ರವಿಕುಮಾರ, ಭೀಮಶೇನರಾವ, ರಾಜೇಂದ್ರನಾಥ, ವಸಂತಕುಮಾರ, ಶಿವಪ್ಪಗೌಡ ಸಿಬ್ಬಂದಿ ಹಾಗೂ ವಾಹನ ಚಾಲಕ ಸುನೀಲಕುಮಾರ, ವೆಂಕಟೇಶ ಹಾಗೂ ಸಂತೋಷ ಪಾಲ್ಗೊಂಡಿದರು.
ಅಬಕಾರಿ ಅಪರ ಆಯುಕ್ತ (ಅಪರಾಧ) (ಕೆಂದ್ರಸ್ಥಾನ ಬೆಳಗಾಂವ) ರಾದ ಎಸ್.ಕೆ. ಕುಮಾರ ಹಾಗೂ ಅಬಕಾರಿ ಜಂಟಿ ಆಯುಕ್ತರು (ಜಾರಿ ಮತ್ತು ತನಿಖೆ) ಕಲಬುರಗಿ ವಿಭಾಗ ಹಾಗೂ ಕಲಬುರಗಿ ಅಬಕಾರಿ ಉಪ ಆಯುಕ್ತ ಶಶಿಕಲಾ ಎಸ್.ಒಡೆಯರ್ ಇವರ ಆದೇಶದನ್ವಯ ಹಾಗೂ ಅಬಕಾರಿ ಉಪ ಅಧೀಕ್ಷಕರ ಮಹ್ಮದ ಇಸ್ಮಾಯಿಲ ಇನಾಮದಾರ ರವರ ನೇತೃತ್ವದಲ್ಲಿ ಕೋವಿಡ-19 ವೈರಾಣು 2 ನೇ ಅಲೆ ಹರಡುವಿಕೆಯನ್ನು ನಿಯಂತ್ರಿಸುವ ಹಿನ್ನಲೆಯಲ್ಲಿ ಸನ್ನದು ಮದ್ಯ ವಹಿವಾಟು ಸಮಯ ನಿಗದಿಪಡಿಸಿ ಆದೇಶಿಸಿದ ಪ್ರಯುಕ್ತ ಈಗಾಗಲೇ ಜಿಲ್ಲೆಯ ಎಲ್ಲಾ ಮದ್ಯದ ಸನ್ನದುದಾರರಿಗೆ ಅಕ್ರಮವಾಗಿ ಮದ್ಯ ಸಾಗಾಟ ಮಾಡಬಾರದೆಂದು ಎಲ್ಲಾ ಸನ್ನದುದಾರರ ಸಭೆ ಕರೆದು ತಿಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.