ಅಬಕಾರಿ ದಾಳಿ: ಖಾನಾವಳಿಯಿಂದ 500 ಗ್ರಾಂ ಗಾಂಜಾ ಜಪ್ತಿ

ಕಲಬುರಗಿ,ನ.21- ಜಿಲ್ಲೆಯ ಚಿತ್ತಾಪುರ ವಲಯದ ಟೆಂಗಳಿ ಕ್ರಾಸ್ ನಲ್ಲಿರುವ ಬನದೇಶ್ವರ ಖಾನಾವಳಿಯಲ್ಲಿ ತಪಾಸಣೆ ಮಾಡಿದ ಅಬಕಾರಿ ಪೊಲೀಸರ ತಂಡ 500 ಗ್ರಾಂ ಒಣ ಗಾಂಜಾವನ್ನು ಜಪ್ತಿ ಪಡಿಸಿಕೊಂಡು ಆರೋಪಿ ವೀರಯ್ಯ ಶಿವಕಾಂತಯ್ಯ ಸ್ವಾಮಿ ಎಂಬುವರನ್ನು ದಸ್ತಗಿರಿ ಮಾಡಿಕೊಂಡು ಆತನ ವಿರುದ್ಧ ಡಿ.ಸಿ.ಇ.ಐ.ಬಿ ಅಬಕಾರಿ ನಿರೀಕ್ಷಕರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅಬಕಾರಿ ಜಂಟಿ ಆಯುಕ್ತರು (ಜಾ ಮತ್ತು ತ) ಕಲಬುರಗಿ ವಿಭಾಗರವರ ಹಾಗೂ ಅಬಕಾರಿ ಉಪ ಆಯುಕ್ತರು ಕಲಬುರಗಿ ಜಿಲ್ಲೆರವರ ನಿರ್ದೇಶನದನ್ವಯ ಮತ್ತು ಅಬಕಾರಿ ಉಪ ಅಧೀಕ್ಷಕರು ಉಪ ವಿಭಾಗ ಚಿತ್ತಾಪೂರರವರ ನೇತೃತ್ವದಲ್ಲಿ ತಂಡ ಖಚಿತ ಭಾತ್ಮಿ ಮೇರೆದಾರರ ಮಾಹಿತಿಯ ಮೆರೆಗೆ ದಾಳಿ ಮಾಡಿ ಪಂಚರೊಂರ ಸಮಕ್ಷಮ ಚಿತ್ತಾಪುರ ವಲಯದ ಟೆಂಗಳಿ ಕ್ರಾಸ್ ನಲ್ಲಿರುವ ಬನದೇಶ್ವರ ಖಾನಾವಳಿಯಲ್ಲಿ ತಪಾಸಣೆ ಕೈಗೊಂಡು ಅಲ್ಲಿಂದ 500 ಗ್ರಾಂ ಒಣ ಗಾಂಜಾ ಜಪ್ತಿಮಾಡಿ ಆರೋಪಿಯನ್ನು ಬಂಧಿಸಲಾಯಿತು ಎಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ.