ಅಬಕಾರಿ ದಾಳಿ ಕಲಬೆರೆಕೆ ಸೇಂದಿ-ಬೈಕ್ ಜಪ್ತಿ

ಕಲಬುರಗಿ,ಮಾ.30- ಜಿಲ್ಲೆಯ ಅಬಕಾರಿ ಇಲಾಖೆಯ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಅಬಕಾರಿ ನಿರೀಕ್ಷಕ ಗೋಪಾಳೆ ಪಂಡಿತ, ಸಿಬ್ಬಂದಿಗಳಾದ ಅಣ್ಣಪ್ಪ, ಆನಂದ ಅವರನ್ನೋಳಗೊಂಡ ತಂಡ ನಿಖರ ಮಾಹಿತಿಯ ಮೇರೆಗೆ ದಾಳಿ ಮಾಡಿ ಅಕ್ರಮವಾಗಿ ಸಾಗಿಸುತ್ತಿದ್ದ ಕಲಬೆರೆಕೆ ಸೇಂದಿ ಹಾಗೂ ಬೈಕ್ ಜಪ್ತಿಮಾಡುವಲ್ಲಿ ಯಶಸ್ವಿಯಾಗಿದ್ಧಾರೆ.
ಆಳಂದ ತಾಲೂಕಿನ ಕೋತನ ಹಿಪ್ಪರಗಾ ದಿಂದ ಜಂಬಗಾ ಗ್ರಾಮಕ್ಕೆ ಅಕ್ರಮವಾಗಿ ಬೈಕ್ ಮೇಲೆ ಅಕ್ರಮವಾಗಿ ಸಾಗಿಸುತ್ತಿದ್ದ 20 ಲೀಟರ್ ಕಲಬೆರೆಕೆ ಸೇಂಧಿಯನ್ನು ಜಪ್ತಿಮಾಡಿದ ಅಬಕಾರಿ ಸಿಬ್ಬಂದಿಗಳು, ತಲೆಮರೆಸಿಕೊಂಡಿರುವ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.