ಅಬಕಾರಿ ದಾಳಿ: ಅಕ್ರಮ ಸೇಂದಿ ವಶ

ಕೊರಟಗೆರೆ, ಸೆ. ೨೫- ತಾಲ್ಲೂಕಿನ ಹೊಳವನಹಳ್ಳಿ ಹೋಬಳಿಯ ಶಿಕಾರಿಪುರ ಹಕ್ಕಿಪಿಕ್ಕಿ ಕಾಲೋನಿಯಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ೧೨ ಲೀಟರ್ ಸೇಂದಿಯನ್ನು ಅಬಕಾರಿ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಹಕ್ಕಿಪಿಕ್ಕಿ ಕಾಲೋನಿಯ ರಮ್ಯಾ ವಿಜಯೇಂದ್ರ ಎಂಬುವರ ಮನೆಯಲ್ಲಿ ಸುಮಾರು ೧೨ ಲೀಟರ್ ನಷ್ಟು ಸೇಂದಿಯನ್ನು ಅಕ್ರಮವಾಗಿ ದಾಸ್ತಾನು ಮಾಡಲಾಗಿದೆ ಎಂಬ ಖಚಿತ ಮಾಹಿತಿ ಮೇರೆಗೆ ಅಬಕಾರಿ ಸಬ್ ಇನ್ಸ್ಪೆಕ್ಟರ್ ವೈಷ್ಣವಿ ಕುಲಕರ್ಣಿ ಮತ್ತು ಸಿಬ್ಬಂದಿ ದಾಳಿ ನಡೆಸಿ ಅಕ್ರಮ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.
ದಾಳಿಯಲ್ಲಿ ಅಬಕಾರಿ ಸಿಬ್ಬಂದಿಗಳಾದ ಅಮಿತ್, ಮಲ್ಲಿಕಾರ್ಜುನ್, ರಂಗಧಾಮಯ್ಯ ಭಾಗವಹಿಸಿದ್ದರು.