ಅಬಕಾರಿ ದಾಳಿ:ಓರ್ವಳ ಬಂಧನ

ಯಾದಗಿರಿ : ಮಾ.29 : ಭಾರತ ಚುನಾವಣಾ ಆಯೋಗವು ಸಾರ್ವತ್ರಿಕ ಲೋಕಸಭಾ ಚುನಾವಣೆ-2024 ಘೋಷಿಸಿ 2024ರ ಮಾರ್ಚ್ 16 ರಿಂದ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆ ಚುನಾವಣೆ ಶಾಂತಿಯುತವಾಗಿ ನಿಷ್ಪಕ್ಷಪಾತವಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮವಹಿಸಲು ಜಿಲ್ಲೆಯ ವ್ಯಾಪ್ತಿಯಲ್ಲಿ ನಕಲಿ ಮದ್ಯ, ಅಕ್ರಮ ಮದ್ಯ, ಕಲಬೆರಕೆ ಸೇಂದಿ, ಕಳ್ಳಭಟ್ಟಿ ಸಾರಾಯಿ ಹಾಗೂ ಇತರೆ ಅಬಕಾರಿ ಅಕ್ರಮ ಪದಾರ್ಥಗಳ ತಯಾರಿಕೆ ಸಾಗಾಣಿಕೆ ಸಂಗ್ರಹಣೆ ಹಾಗೂ ಮಾರಾಟಗಳಂತಹ ಅಕ್ರಮ ಚಟುವಟಿಕೆಗಳು ನಡೆಯದಂತೆ ಚುನಾವಣಾ ಆಯೋಗದ ನಿರ್ದೇಶನದಂತೆ 2024 ಮಾರ್ಚ್ 27 ರಿಂದ ಪ್ರತಿದಿನ ಕ್ರಮ ಕೈಗೊಂಡಿರುವ ಮಾಹಿತಿಯು ಈ ಕೆಳಗಿನಂತಿದೆ ಇದೆ ಎಂದು ಯಾದಗಿರಿ ಅಬಕಾರಿ ಉಪ ಆಯುಕ್ತೆ ಶಾರದಾ ಸಿ.ಕೋಲಕಾರ ಅವರು ತಿಳಿಸಿದ್ದಾರೆ.

 ಈ ನಿಟ್ಟಿನಲ್ಲಿ ಅಬಕಾರಿ ಜಂಟಿ ಆಯುಕ್ತರು ಕಲಬುರಗಿ ವಿಭಾಗ ಹಾಗೂ ಅಬಕಾರಿ ಉಪ ಆಯುಕ್ತರು ಯಾದಗಿರಿ ಅವರ ನಿರ್ದೇಶನ ಮತ್ತು ಮಾನ್ಯ ಅಬಕಾರಿ ಉಪ ಅಧೀಕ್ಷಕರು, ಉಪ ವಿಭಾಗ ಶಹಾಪುರ ಅವರ ಮಾರ್ಗದರ್ಶನದಲ್ಲಿ ಭಾತ್ಮಿ ಮೇರೆಗೆ 2024 ಮಾರ್ಚ್ 28 ರಂದು ಸುರಪುರ ತಾಲೂಕಿನ ಗೌಡಗೆರಾ ಗ್ರಾಮದ ನಿಂಗಮ್ಮ ಗಂಡ ದ್ಯಾವಪ್ಪ ಸಾ.ಗೌಡಗೆರಾ ಇವರಿಗೆ ಸೇರಿದ ಮನೆ ಮೇಲೆ ಅಬಕಾರಿ ದಾಳಿ ಮಾಡಿ 02 ಲೀಟರ್ ಕಳ್ಳಭಟ್ಟಿ ಸಾರಾಯಿ ಜಪ್ತಿಪಡಿಸಿಕೊಂಡು ಈ ಆರೋಪಿತಳ ವಿರುದ್ದ ಪ್ರಕರಣ ದಾಖಲಾಗಿದ್ದು. ಆರೋಪಿ ಪರಾರಿಯಾಗಿದ್ದು ಪತ್ತೆ ಹಚ್ಚಿ ಬಂದಿಸಬೇಕಾಗಿರುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.