ಅಬಕಾರಿ ತೆರಿಗೆ ಶೇ.೨೦ ಹೆಚ್ಚಳ

ಬೆಂಗಳೂರು, ಜು. ೭- ರಾಜ್ಯದಲ್ಲಿ ಸಂಪನ್ಮೂಲ ಕ್ರೋಢಿಕರಣಕ್ಕೆ ಒತ್ತು ನೀಡಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯರವರು ಅಬಕಾರಿ ತೆರಿಗೆಯನ್ನು ಶೆ. ೨೦ ರಷ್ಟು ಹೆಚ್ಚಳ ಮಾಡುವ ಮೂಲಕ ಮದ್ಯಪ್ರಿಯರ ಜೇಬಿಗೆ ಕತ್ತರಿ ಹಾಕಿದ್ದಾರೆ.೨೦೨೩-೨೪ನೇ ಸಾಲಿನ ಮುಂಗಡ ಪತ್ರದಲ್ಲಿ ಈ ವಿಷಯ ಪ್ರಕಟಿಸಿದ್ದು, ಮಧ್ಯ ಇನ್ನಷ್ಟು ದುಬಾರಿಯಾಗಲಿದ್ದು ಮದ್ಯಪ್ರಿಯರಿಗೆ ಹೆಚ್ಚಿನ ಹೊರೆ ಬೀಳಲಿದೆ.ಕಾಂಗ್ರೆಸ್ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಮೊದಲನೇ ಹಾಗೂ ಇದುವರೆಗೆ ಒಟ್ಟಾರೆ ೧೪ನೇ ಮುಂಗಡ ಪತ್ರವನ್ನು ವಿಧಾನಸಭೆಯಲ್ಲಿ ಮಂಡಿಸಿ, ಅಬಕಾರಿ ತೆರಿಗೆಯನ್ನು ಶೇ. ೨೦ ರಷ್ಟು ಹೆಚ್ಚಿಸಿರುವುದನ್ನು ಅವರು ಘೋಷಿಸಿದ್ದಾರೆ.ಬಿಯರ್ ಮೇಲೆ ಶೇ. ೧೦ರಷ್ಟು ತೆರಿಗೆ ಹೆಚ್ಚಳ ಮಾಡಲಾಗಿದೆ. ಅಲ್ಲದೆ ಇನ್ನಿತರೆ ಮದ್ಯಗಳ ಮೇಲೆ ತೆರಿಗೆಯನ್ನು ವಿಧಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಸಂಪನ್ಮೂಲ ಕ್ರೂಢೀಕರಣ ಆದ್ಯತೆ ನೀಡಿದ್ದಾರೆ.ಕಾಂಗ್ರೆಸ್ ಪಕ್ಷ ಘೋಷಿಸಿರುವ ೫ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವ ಹಿನ್ನೆಲೆಯಲ್ಲಿ ಮದ್ಯ ಸೇರಿದಂತೆ ಇನ್ನಿತರೆ ತೆರಿಗೆಯನ್ನು ಹೆಚ್ಚಳ ಮಾಡಿ ಬಜೆಟ್ ನಲ್ಲಿ ಅವರು ಪ್ರಕಟಿಸಿದ್ದಾರೆ.
ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು ಶೇ. ೧೭೫ ರಿಂದ ೧೮೫ಕ್ಕೆ ಹೆಚ್ಚಿಸಲು ನಿರ್ಧರಿಸಲಾಗಿದೆ. ಅಬಕಾರಿ ಸುಂಕದ ದರ ಹೆಚ್ಚಳದ ನಂತರವೂ ರಾಜ್ಯದಲ್ಲಿ ಮದ್ಯದ ದರ ಇತರೆ ರಾಜ್ಯಗಳಿಗಿಂತ ಕಡಿಮೆ ಇದೆ ಎಂದಿದ್ದಾರೆ.

೩೬ ಸಾವಿರ ಸಂಗ್ರಹ
೨೦೨೩-೨೪ರಲ್ಲಿ ಅನಕಾರಿ ಇಲಾಖೆಗೆ ೩೬ ಸಾವಿರ ಕೋಟಿ ರಾಜಸ್ವ ಸಂಗ್ರಹ ಮಾಡುವ ಗುರಿ ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಪ್ರಕಟಿಸಿದ್ದಾರೆ.