
ಚಾಮರಾಜನಗರ, ಏ.27:- ಅಬಕಾರಿ ಅಧಿಕಾರಿಗಳು ಅಬಕಾರಿ ಅಕ್ರಮಗಳ ವಿರುದ್ದ ಕಾರ್ಯಾಚರಣೆ ಮುಂದುವರೆಸಿದ್ದು ಮಂಗಳವಾರ (ಏ.25)ದಂದು ರಾತ್ರಿ 10 ಗಂಟೆ ಸಮಯದಲ್ಲಿ ಗುಂಡ್ಲುಪೇಟೆ ತಾಲೂಕಿನ ಕೋಟೆಕೆರೆ ಗ್ರಾಮ ರಸ್ತೆಯಲ್ಲಿ ಗಸ್ತು ನಡೆಸುತ್ತಿದ್ದ ವೇಳೆ ದ್ವಿಚಕ್ರ ವಾಹನದಲ್ಲಿ ಸಾಗಿಸುತ್ತಿದ್ದ 5.040 ಲೀಟರ್ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.
ಮದ್ಯ ಹಾಗೂ ವಾಹನದ ಮೌಲ್ಯ 96,967 ರೂ. ಗಳಾಗಿವೆ.
ಯಳಂದೂರು ಪಟ್ಟಣ ವ್ಯಾಪ್ತಿಯಲ್ಲಿ ಮಂಗಳವಾರ (ಏ.25)ದಂದು ರಾತ್ರಿ 8 ಗಂಟೆ ಸಮಯದಲ್ಲಿ ಗಸ್ತು ಸಂದರ್ಭದಲ್ಲಿ ದ್ವಿಚಕ್ರ ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 2.880 ಲೀಟರ್ ಮದ್ಯವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಮದ್ಯ ಮತ್ತು ವಾಹನದ ಮೌಲ್ಯ 61,124 ರೂ. ಗಳಾಗಿವೆ.
ಚಾಮರಾಜನಗರ ತಾಲೂಕಿನ ಕಿಳಲೀಪುರ ಗ್ರಾಮ ವ್ಯಾಪ್ತಿಯಲ್ಲಿ ಭಾನುವಾರ (ಏ.23)ದಂದು ರಾತ್ರಿ 7.30 ಗಂಟೆ ಸಮಯದಲ್ಲಿ ಗಸ್ತು ನಡೆಸುತ್ತಿದ್ದ ವೇಳೆ ದ್ವಿಚಕ್ರ ವಾಹನದಲ್ಲಿ ಸಾಗಿಸುತ್ತಿದ್ದ 6.030 ಲೀಟರ್ ಮದ್ಯವನ್ನು ವಶಕ್ಕೆ ಪಡೆಯಲಾಗಿದೆ. ಮದ್ಯ ಮತ್ತು ವಾಹನದ ಮೌಲ್ಯ 62,353 ರೂ.ಗಳಾಗಿವೆ ಎಂದು ಅಬಕಾರಿ ಇಲಾಖೆ ಪ್ರಕಟಣೆ ತಿಳಿಸಿದೆ.