
ಚಾಮರಾಜನಗರ:- ಅಬಕಾರಿ ಇಲಾಖೆ ಅಧಿಕಾರಿಗಳು ವಿವಿಧೆಡೆ ತಪಾಸಣೆ ಕಾರ್ಯ ಮುಂದುವರೆಸಿದ್ದು, ಶುಕ್ರವಾರ(ಏ. 28) ದಂದು ಗುಂಡ್ಲುಪೇಟೆ ತಾಲೂಕಿನ ಹಂಗಳ ಹೋಬಳಿಯ ಬೊಮ್ಮಲಾಪುರ ಗ್ರಾಮದಲ್ಲಿರುವ ಲಕ್ಷ್ಮೀ ವೆಂಕಟೇಶ್ವರ ವೈನ್‍ಶಾಪ್‍ಗೆ ಭೇಟಿ ನೀಡಿ ತಪಾಸಣೆ ನಡೆಸಿದ ವೇಳೆ ಭೌತಿಕ ದಾಸ್ತಾನು ಲೆಕ್ಕದಲ್ಲಿ ವ್ಯತ್ಯಾಸ ಕಂಡುಬಂದಿದ್ದು, ಈ ಹಿನ್ನೆಲೆಯಲ್ಲಿ ಅಂದಾಜು ಒಟ್ಟು 27 ಲಕ್ಷ ರೂ. ಮೌಲ್ಯದ ಮದ್ಯವನ್ನು ವಶಪಡಿಸಿಕೊಂಡಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಕೊಳ್ಳೇಗಾಲ ವಲಯ ವ್ಯಾಪ್ತಿಯ ರಾಮಾಪುರದಲ್ಲಿ ಶನಿವಾರ (ಏ. 29) ದಂದು ಗಸ್ತು ನಡೆಸುತ್ತಿದ್ದ ವೇಳೆ ಮಾಹೀತಿ ಮೇರೆಗೆ ದ್ವಿಚಕ್ರ ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 10434 ರೂ. ಮೌಲ್ಯವನ್ನು ವಶಪಡಿಸಿಕೊಳ್ಳಲಾಗಿದೆ. ವಾಹನದ ಮೌಲ್ಯ 65 ಸಾವಿರ ರೂ. ಗಳಾಗಿವೆ. ಅರೋಪಿಯನ್ನು ಬಂಧಿಸಿ ಮೊಕದ್ದಮೆ ದಾಖಲಿಸಲಾಗಿದೆ ಎಂದು ಅಬಕಾರಿ ಇಲಾಖೆ ಪ್ರಕಟಣೆ ತಿಳಿಸಿದೆ.