ಅಬಕಾರಿ ಇಲಾಖೆ ಕಾರ್ಯಾಚರಣೆ: 39,56,468ರೂ. ಮೌಲ್ಯದ ಮದ್ಯ ವಶ

ಚಾಮರಾಜನಗರ, ಏ.11:- ಕಂಟ್ರೋಲಿಂಗ್ ಅಬಕಾರಿ ಭದ್ರತಾ ಚೀಟಿಗಳು ಇಲ್ಲದಿರುವುದುಕಂಡುಬಂದ ಹಿನ್ನೆಲೆಯಲ್ಲಿ 39,56,468 ರೂ ಮೌಲ್ಯದ 5481 ಲೀಟರ್ ಮದ್ಯವನ್ನುಅಬಕಾರಿ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಕಳೆದ ಶನಿವಾರ (ಏ.8) ದಂದು ಸಂಜೆ 5.15 ಗಂಟೆ ಸಮಯದಲ್ಲಿಚಾಮರಾಜನಗರದ ಕೆ.ಎಸ್.ಬಿ.ಸಿ.ಎಲ್ ಡಿಪೋಗೆ ಚಿಕ್ಕಬಳ್ಳಾಪುರದ ಬ್ಲೂಏಷಿಯನ್ ಬ್ರೆವರೇಜಸ್ ಲಿಮಿಟೆಡ್ ನಿಂದ ಸರಬರಾಜಾದ 630 ಪೆಟ್ಟಿಗೆಗಳಲ್ಲಿ 5 ಪೆಟ್ಟಿಗೆಗಳಲ್ಲಿ ಇನ್ನರ್‍ಕಾರ್ಟನ್ ಬಾಕ್ಸ್ ನ ಕಂಟ್ರೋಲಿಂಗ್‍ಅಬಕಾರಿ ಭದ್ರತಾ ಚೀಟಿಗಳು ಇಲ್ಲದೇಇರುವುದುಕಂಡುಬಂತು ಈ ಹಿನ್ನೆಲೆಯಲ್ಲಿ ಒಟ್ಟಾರೆ 5481 ಲೀಟರ್ ಮದ್ಯವನ್ನು ವಶಕ್ಕೆ ಪಡೆದು ಡಿಸ್ಟಿಲರಿ ಸನ್ನದುದಾರರು ಹಾಗೂ ಚಾಲಕರ ಮೇಲೆ ಮೊಕದ್ದಮೆದಾಖಲಿಸಲಾಗಿದೆ.
ಮೈಸೂರು ವಿಭಾಗದ ಅಬಕಾರಿ ಜಂಟಿ ಆಯುಕ್ತರ (ಜಾರಿ ಮತ್ತುತನಿಖೆ) ನಿರ್ದೆಶನದ ಮೇರೆಗೆ ಕಾರ್ಯಾಚರಣೆ ನಡೆಸಲಾಯಿತು. ಅಬಕಾರಿ ಉಪ ಆಯುಕ್ತಆರ್. ನಾಗಶಯನ, ಅಬಕಾರಿ ಉಪ ಅಧೀಕ್ಷಕ ಎಂ.ಡಿ. ಮೋಹನ್‍ಕುಮಾರ್, ಅಬಕಾರಿ ನಿರೀಕ್ಷಕಿ ಮೀನಾ, ಕೆ.ಎಸ್.ಬಿ.ಸಿ.ಎಲ್ ಡಿಪೋ ವ್ಯವಸ್ಥಾಪಕ ಬಸವರಾಜು, ಅಬಕಾರಿ ನಿರೀಕ್ಷಕ ಗುರುನಾಥಶೆಟ್ಟಿ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.