ಅಬಕಾರಿ ಅಧಿಕಾರಿಗಳು ದಾಳಿ: ಗಾಂಜಾ ವಶ

ಕೋಲಾರ,ಏ.೨೪: ಕೋಲಾರ ತಾಲೂಕಿನ ಕುರುಗಲ್ ಗೇಟ್ ಬಳಿ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಅಕ್ರಮವಾಗಿ ಗಾಂಜಾ ಸಾಗಾಣಿಕೆ ಮಾಡುತ್ತಿದ್ದ ಓರ್ವನನ್ನ ಬಂದಿಸಿದ್ದಾರೆ. ಅಕ್ರಮವಾಗಿ ಗಾಂಜಾ ಸಾಗಾಣಿಕೆ ಮಾಡಲಾಗುತ್ತಿದ್ದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಬಕಾರಿ ಅಧಿಕಾರಿಗಳು, ಓರ್ವನನ್ನ ಬಂಧಿಸಿದ್ದು, ಬಂಧಿತನಿಂದ ಸುಮಾರು ೮೦ ಸಾವಿರ ಮೌಲ್ಯದ ಒಂದೂವರೆ ಕೆಜಿ ಗಾಂಜಾವನ್ನ ವಶಕ್ಕೆ ಪಡೆಯಲಾಗಿದೆ. ಅಲ್ಲದೆ ಗಾಂಜಾ ಸಾಗಾಟಕ್ಕೆ ಬಳಕೆ ಮಾಡಲಾಗಿದ್ದ ದ್ವಿಚಕ್ರ ವಾಹನವನ್ನ ಜಪ್ತಿ ಮಾಡಲಾಗಿದ್ದು, ಬೈಕುಂತ ದಂಡ ಸೇನಾ ಎಂಬಾತನನ್ನ ಬಂದಿಸಲಾಗಿದೆ. ಇನ್ನು ಕಾರ್ಯಾಚರಣೆಯಲ್ಲಿ ಕೊಲಾರ ವಲಯದ ಅಬಕಾರಿ ನಿರೀಕ್ಷಕರಾದ ಅರುಣಾ, ಉಪನಿರೀಕ್ಷಕರಾದ ರವೀಂದ್ರ ಆರ್. ಸುವರ್ಣ ಬಿ. ಕೋಟಿ, ಅಬಕಾರಿ ಪೇದೆ ಮಂಜುನಾಥ್.ಎಂ, ಕೆಎಸ್‌ಅನಿಲ್ ಕುಮಾರ್, ಸಾಬು ಕಾತ್ರಾಳ ಹಾಗೂ ಕಂಪ್ಯೂಟರ್ ಆಪರೇಟರ್ ಅಂಜಲಿ ವಾಹನ ಚಾಲಕ ಜೈಸಿಂಗ್ ಭಾಗವಹಿಸಿದ್ದರು.