ಅಬಕಾರಿ ಅಕ್ರಮ: ಕಂಟ್ರೋಲ್ ರೂಮ್

ಚಾಮರಾಜನಗರ, ಏ.25- ಕೋವಿಡ್ ತಡೆ ಹಿನ್ನೆಲೆಯಲ್ಲಿ ವಾರಾಂತ್ಯ ಕಪ್ರ್ಯೂ ಜಾರಿಯಲ್ಲಿರುವ ಏಪ್ರಿಲ್ 23ರ ಶುಕ್ರವಾರ ರಾತ್ರಿ 9 ಗಂಟೆಯಿಂದ ಏಪ್ರಿಲ್ 26ರ ಸೋಮವಾರ ಬೆಳಿಗ್ಗೆ 6 ಗಂಟೆಯವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ.
ಅಕ್ರಮವಾಗಿ ಮದ್ಯ ಮಾರಾಟ, ದಾಸ್ತಾನು, ತಯಾರಿಕೆ, ಸಾಗಾಣಿಕೆ, ಸರಬರಾಜು ಕಂಡುಬಂದಲ್ಲಿ ಅಬಕಾರಿ ಇಲಾಖೆ ಜಿಲ್ಲಾಮಟ್ಟದಲ್ಲಿ ತೆರೆದಿರುವ ಕಂಟ್ರೋಲ್ ರೂಂ ಗೆ ಮಾಹಿತಿ ನೀಡುವಂತೆ ಕೋರಲಾಗಿದೆ.
ನಗರದ ಅಬಕಾರಿ ಉಪ ಆಯುಕ್ತರ ಕಚೇರಿಯಲ್ಲಿ ಕಂಟ್ರೋಲ್ ರೂಂ ತೆರೆಯಲಾಗಿದ್ದು, ಇದರ ಸಂಖ್ಯೆ : 08226-224776 ಆಗಿದೆ. ಯಾವುದೇ ಅಕ್ರಮ ಮದ್ಯ ಮಾರಾಟ, ದಾಸ್ತಾನು, ತಯಾರಿಕೆ, ಸಾಗಾಣಿಕೆ, ಸರಬರಾಜು ಕಂಡುಬಂದಲ್ಲಿ ದಿನದ 24 ಗಂಟೆಯ ಅವಧಿಯಲ್ಲೂ ಕಾರ್ಯನಿರ್ವಹಿಸುವ ಕಂಟ್ರೋಲ್ ರೂಂ ಗೆ ದೂರವಾಣಿ ಮಾಡಿ ಮಾಹಿತಿ ನೀಡುವಂತೆ ಜಿಲ್ಲಾ ಅಬಕಾರಿ ಉಪ ಆಯುಕ್ತರು ಪ್ರಕಟಣೆಯಲ್ಲಿ ಕೋರಿದ್ದಾರೆ.