ಅಬಕಾರಿ ಅಕ್ರಮದ ಆರೋಪಿಗಳಿಂದ ಮುಚ್ಚಳಿಕೆ ಸ್ವೀಕಾರ

ಮಾಲೂರು,ಮಾ.೩-ಸಾರ್ವತ್ರಿಕ ವಿಧಾನಸಭೆ ಚುನಾವಣೆ ನಿಮಿತ್ತ ಹಿಂದೆ ಅಬಕಾರಿ ಅಕ್ರಮಗಳಲ್ಲಿ ಪಾಲ್ಗೊಂಡಿದ್ದ ಆರೋಪಿಗಳಿಂದ ದಂಢಾಧಿಕಾರಿ ಮುಚ್ಚಳಿಕೆ ಸ್ವೀಕರಿಸಿದರು ಎಂದು ಅಬಕಾರಿ ಇಲಾಖೆ ನಿರೀಕ್ಷಕಿ ಶಶಿಕಲಾ ತಿಳಿಸಿದರು.
ಮುಂಬರುವ ವಿಧಾನ ಸಭಾ ಸಾರ್ವಜನಿಕ ಚುನಾವಣೆಯ ನಿಮಿತ್ತ ಅಬಕಾರಿ ಜಂಟಿ ಆಯುಕ್ತರು ಬೆಂಗಳೂರು ರವರ ಸೂಚನೆಯಂತೆ, ಕೋಲಾರ ಅಬಕಾರಿ ಉಪ ಆಯುಕ್ತರ ಸೂಚನೆಯಂತೆ ಅಬಕಾರಿ ಉಪ ಆಯುಕ್ತರು ಕೋಲಾರ ರವರ ನಿರ್ದೇಶನದಂತೆ ಉಪ ಅಧಿಕ್ಷರ ಮಾರ್ಗದರ್ಶನ ದಂತೆ ಮಾಲೂರು ತಾಲೂಕಿನಲ್ಲಿ ಈ ಹಿಂದೆ ಅಬಕಾರಿ ಅಕ್ರಮಗಳಲ್ಲಿ ಭಾಗಿಯಾಗಿದ್ದ ಆರೋಪಿ ಗಳನ್ನು ಫೆ ೨೮ರಂದು ಕರೆದು ಸಿ ಆರ್. ಪಿ ಸಿ ೧೦೯/೧೧೦ರಂತೆ ಸದ್ಬರ್ತನೆ ಗಾಗಿ ತಾಲೂಕು ದಂಢಾಧಿಕಾರಿ ಮಲ್ಲಿಕಾರ್ಜುನ ರವರ ಮುಂದೆ ಹಾಜರುಪಡಿಸಿ ಆರೋಪಿಗಳಿಂದ ೫೦,೦೦೦ ಸಾವಿರರೂ ಗಳ ಮುಚ್ಚಳಿಕೆ ಪಡೆಯಲಾಯಿತು ಎಂದರು.