ಅಫ್ಘಾನ್ ಭಾರತೀಯ ನಿವಾಸಿಗಳ ಪಾಕ್ ಕೆಂಗಣ್ಣು


ಲೋಕಸಭೆಯಲ್ಲಿ ಕೇಂದ್ರ ಹೇಳಿಕೆ


ನವದೆಹಲಿ, ಸೆ.21-ಅಫಘಾನಿಸ್ತಾನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಭಾರತೀಯರನ್ನು ಗುರಿಯಾಗಿರಿಸಿಕೊಂಡು ಪಾಕಿಸ್ತಾನ ದಾಳಿ ನಡೆಸುತ್ತಿದೆ ಎಂದು ಕೇಂದ್ರ ಸರ್ಕಾರ, ಸಂಸತ್ತಿಗೆ ಮಾಹಿತಿ ತಿಳಿಸಿದೆ.

ಅಫ್ಘಾನಿಸ್ತಾನದಲ್ಲಿ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ನಾಲ್ವರು ಭಾರತೀಯರನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ದಾಳಿ ನಡೆಸಿದೆ ಎಂದು ವಿದೇಶಾಂಗ. ವ್ಯವಹಾರಗಳ ರಾಜ್ಯ‌ಸಚಿವ ವಿ.‌ಮುರುಳೀಧರನ್ ತಿಳಿಸಿದ್ದಾರೆ.

ಕಳೆದ 12 ವರ್ಷಗಳ ಅವಧಿಯಲ್ಲಿ ಅಫಘಾನಿಸ್ತಾನದಲ್ಲಿ ವಿವಿಧ ವೃತ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅನೇಕ ಭಾರತೀಯರನ್ನು ಆಪಾದಿಸಲಾಗಿದೆ ಜೊತೆಗೆ ಅವರ ಮೇಲೆ ದಾಳಿ ನಡೆಸಲಾಗಿದೆ ಎಂದು ಸಂಸತ್ತಿಗೆ ನೀಡಿರುವ ಹೇಳಿಕೆಯಲ್ಲಿ ಅವರು ತಿಳಿಸಿದ್ದಾರೆ.

ಲೋಕಸಭೆಯಲ್ಲಿ ಗೆ ಲಿಖಿತ ಹೇಳಿಕೆ ನೀಡಿರುವ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ ಮುರಳೀಧರನ್ ಕಳೆದ ಸೆಪ್ಟೆಂಬರ್ ನಿಂದ ಇಲ್ಲಿಯವರೆಗೆ ನಾಲ್ವರು ಭಾರತೀಯರ ಮೇಲೆ ಮತ್ತು ದಾಳಿ ನಡೆಸಲಾಗಿದೆ 1267ರ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿಯಮಕ್ಕೆ ವಿರುದ್ಧವಾದದ್ದು ಎಂದು ಅವರು ತಿಳಿಸಿದ್ದಾರೆ

ವಿಶ್ವಸಂಸ್ಥೆಯ ಸಾವಿರದ 267 ನೇ ನಿರ್ಣಯಕ್ಕೆ ವಿರುದ್ಧವಾಗಿ ಪಾಕಿಸ್ತಾನ ನಡೆದುಕೊಳ್ಳುತ್ತಿದೆ ಅಪಘಾನಿಸ್ತಾನದಲ್ಲಿ ವಿವಿಧ ವೃತ್ತಿ ಮತ್ತು ಯೋಜನೆಗಳಲ್ಲಿ ಕೆಲಸ ಮಾಡುತ್ತಿರುವ‌ ಭಾರತೀಯರನ್ನೇ ಗುರಿಯಾಗಿಸಿಕೊಂಡು ದಾಳಿ ಅಲ್ಲೇ ಸೇರಿದಂತೆ ಇನ್ನಿತರ ಕೃತಿಗಳನ್ನು ಎಸಗುತ್ತಿದೆ ಇದು ನಿಜಕ್ಕೂ ಸಹಿಸಲು ಅಸಾಧ್ಯ ಎಂದು ಹೇಳಿದ್ದಾರೆ

ಭದ್ರತೆಗೆ ಮನವಿ:

ಅಫಘಾನಿಸ್ತಾನದಲ್ಲಿ ಸರ್ಕಾರಿ ಹಾಗೂ ಸರ್ಕಾರೇತರ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಭಾರತೀಯರ ನೌಕರರಿಗೆ ರಕ್ಷಣೆ ನೀಡುವಂತೆ ಕೇಂದ್ರ ಸರ್ಕಾರ ಅಫ್ಘಾನಿಸ್ತಾನ ಸರ್ಕಾರಕ್ಕೆ ಮನವಿ ಮಾಡಿದೆ . ಅಲ್ಲಿರುವ ಭಾರತೀಯರ ಹಿತ ಕಾಪಾಡಲು ಸಿದ್ದವಿರುವುದಾಗಿ ತಿಳಿಸಿದ್ದಾರೆ.
ಉಗ್ರರ ವಶದಲ್ಲಿರುವ ಭಾರತೀಯರನ್ನು ಸುರಕ್ಷಿತವಾಗಿ ಬಿಡಿಸಿಕೊಂಡು ಬರುವ ನಿಟ್ಟಿನಲ್ಲಿ ಅಪಘಾನಿಸ್ತಾನ ಸರ್ಕಾರದ ಜೊತೆ ನಿರಂತರ ಮಾತುಕತೆ ನಡೆಸಲಾಗುತ್ತಿದೆ. ಜೊತೆಗೆ‌ ಈ ಕೆಲಸದ ಉಸ್ತುವಾರಿಯನ್ನು ಅಲ್ಲಿನ ಭಾರತೀಯ ರಾಯಭಾರಿ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ

7 ಇಂಜಿನಿಯರ್ ಅಪಹರಣ:

ಅಫಘಾನಿಸ್ತಾನದಲ್ಲಿ ವಿವಿಧ ಯೋಜನೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಏಳು ಮಂದಿ ಇಂಜಿನಿಯರ್ ಗಳನ್ನು‌ ಅಪಹರಿಸಲಾಗಿತ್ತು ಕಳೆದ ತಿಂಗಳು ಅಪಘಾನಿಸ್ತಾನ ಮತ್ತು ಕಥಾ ನಡುವೆ ನಡೆದ ಮಾತುಕತೆಯ ಭಾಗವಾಗಿ ಭಾರತೀಯರನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಪಾಕ್‌ ವಿರುದ್ದ ವಾಗ್ದಾಳಿ:
ಪಾಕಿಸ್ತಾನ ಸರ್ಕಾರ ಭಯೋತ್ಪಾದನಾ ಚಟುವಟಿಕೆಗೆಳಿಗೆ ಉತ್ತೇಜನ ನೀಡುತ್ತಿದೆ ಎಂದು ವಿ.ಮುರಳೀಧರನ್ ಆರೋಪಿಸಿದ್ದಾರೆ.
ಭಾರತದಲ್ಲಿ ಉಗ್ರ ಚಟುವಟಿಕೆ ನಡೆಸಲು ಜಮಾತ್-ಉದ್-ದಾವಾ, ಜೈಶ್-ಇ-ಮೊಹಮ್ಮದ್, ಹಿಜ್ಬುಲ್ ಮುಜಾಹಿದೀನ್, ಲಸ್ಕರ್ ಇ ತೊಯ್ಬಾ ಸೇರಿದಂತೆ ವಿವಿಧ ಭಯೋತ್ಪಾದಕ ಚಟುವಟಿಕೆಗಳನ್ನು ಬಳಸಿಕೊಂಡು ದಾಳಿಗೆ ಸಂಚು ರೂಪಿಸುತ್ತಿದೆ ಇದಕ್ಕೆ ಪ್ರತಿಯಾಗಿ ಕೇಂದ್ರ ಸರ್ಕಾರವು ಅದರಲ್ಲೂ ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ ನೀಡುತ್ತಿದೆ ಎಂದು ಅವರು ಹೇಳಿದ್ದಾರ

2019ರ ಫೆಬ್ರವರಿಯಲ್ಲಿ ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಯನ್ನು ವಿಶ್ವ ಸಮುದಾಯ ತೀವ್ರವಾಗಿ ಖಂಡಿಸುತ್ತದೆ ಪಾಕಿಸ್ತಾನ ಮತ್ತು ಉಗ್ರ ಚಟುವಟಿಕೆಗಳಿಗೆ ಯಾವುದೇ ಪ್ರೋತ್ಸಾಹ ನೀಡದಂತೆ ಕಟ್ಟಪ್ಪಣೆ ಹೊರಡಿಸಿದೆ.