ಅಫಜಲಪೂರ ತಾಲೂಕಿನಲ್ಲಿ ಕೊರೊನಾ ಜಾಗೃತಿ ಅಭಿಯಾನ

ಕಲಬುರಗಿ:ಮೇ.14: ನಗರದ ಗುಲಬರ್ಗಾ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಕೋಶದ ವತಿಯಿಂದ ಅಫಜಲಪೂರ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಕೊರೊನಾ ಜಾಗೃತಿ ಅಭಿಯಾನವನ್ನು ಆಯೋಜಿಸಲಾಗಿತ್ತು.

ಶರಣ ಸಿರಸಗಿ, ಗೊಬ್ಬರ (ಕೆ), ಗೊಬ್ಬುರ (ಬಿ), ಗೊಬ್ಬುರ ತಾಂಡಾ, ಚೌಡಾಪುರ, ಚೌಡಾಪುರ ತಾಂಡಾ, ಗಾಣಗಾಪೂರ, ತೆಲ್ಲೂರ, ಬಿಲ್ವಾಡ, ಅಫಜಲಪೂರ, ಬಳೂರ್ಗಿ, ಬಡದಾಳ, ರೇವೂರ, ಚಿಂಚೋಳಿ (ಕೆ), ಮಲ್ಲಾಬಾದ, ಬಾದನಹಳ್ಳಿ, ದನ್ನೂರ ಗ್ರಾಮಗಳಲ್ಲಿ ಅಭಿಯಾನ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಎನ್ ಎಸ್ ಎಸ್ ಕೋಶದ ಸಂಯೋಜಕರಾದ ಪ್ರೊ. ರಮೇಶ ಲಂಡನಕರ್ ಅವರು, ಕೊರೊನಾ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದು, ಜನರು ಸೂಕ್ತ ‌ಮುನ್ನೆಚ್ಚರಿಕೆ ವಹಿಸಿಕೊಳ್ಳಬೇಕು. ಮಾಸ್ಕ್, ಸ್ಯಾನಿಟೈಸರ್, ಸೂಕ್ತ ಅಂತರವನ್ನು ಕಾಯ್ದುಕೊಳ್ಳಬೇಕು. ಜ್ವರ, ತಲೆನೋವು ಇಂತಹ ಲಕ್ಷಣಗಳು ಸತತವಾಗಿ ಕಾಣಿಸಿಕೊಂಡರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು ಎಂದರು.