ಅಫಜಲಪೂರ ಆಸ್ಪತ್ರೆಗಳಿಗೆ 3 ನೂತನ ಅಂಬುಲೇನ್ಸ್ ಗಳುಬಡರೋಗಿಗಳಿಗೆ ತುರ್ತು ಸೇವೆಯ ಚಿಕಿತ್ಸೆ ಸಿಗುವಂತಾಗಲಿ ಶಾಸಕ ಎಂ.ವೈ.ಪಾಟೀಲ್

ಅಫಜಲಪೂರ: ನ.4:ಬಡಜನರಿಗೆ ಅನಕೂಲವಾಗುವ ನಿಟ್ಟಿನಲ್ಲಿ ತಾಲ್ಲೂಕಿಗೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅನುದಾನದ ಅಡಿಯಲ್ಲಿ ಶಾಸಕ ಎಂ.ವೈ.ಪಾಟೀಲ್ ಅವರು ಪಟ್ಟಣದ ಸರಕಾರಿ ಸಾರ್ವಜನಿಕ ಆಸ್ಪತ್ರೆಗೆ ನೂತನವಾಗಿ ಮೂರು ಅಂಬುಲೇನ್ಸ್ ಗಳನ್ನು ನೀಡಿ ಚಾಲನೆ ನೀಡಿ ಮಾತನಾಡಿದ ಅವರು ತಾಲ್ಲೂಕಿನ ಬಡಜನರ ಆರೋಗ್ಯದ ಹಿತದೃಷ್ಠಿಯಿಂದ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಭಾಗದ ಬಡರೋಗಿಗಳಗೋಸ್ಕರ್ ತುರ್ತು ಸೇವೆ ಸಿಗುವಂತನ್ನಾಗಲಿ ಕರೋನಾ ಸಂದರ್ಭದಲ್ಲಿ ಸರಿಯಾದ ಸಮಯಕ್ಕೆ ಅಂಬುಲೇನ್ಸ್ ಇಲ್ಲದೇ ಬಡರೋಗಿಗಳು ತೋಂದರೆಯನ್ನು ಅನುಭವಿಸಿದ್ದಾರೆ.
ಗ್ರಾಮೀಣ ಭಾಗದಲ್ಲಿ ಬಡರೋಗಿಗಳಿಗೆ ತುರ್ತು ಸೇವೆಯನ್ನು ಸಿಗಲಿ ಎನ್ನುವ ದೃಷ್ಠಿಯಿಂದ ಜಿಲ್ಲೆಯಲ್ಲೇ ಮೊದಲು ಬಾರಿಗೆ ಹೈಟೆಕ್ ಅಂಬುಲೇನ್ಸ್ ಗಳನ್ನು ತಂದಿದ್ದೇನೆ. ತಾಲ್ಲೂಕಿನ ಸರಕಾರಿ ಆಸ್ಪತ್ರೆಗಳಾದ ದೇವಲ ಗಾಣಗಾಪೂರಕ್ಕೆ 1 ಸ್ಟೇಷನ ಗಾಣಗಾಪೂರ 1ಹಾಗೂ ಪಟ್ಟಣದ ಸಾರ್ವಜನಿಕರ ಆಸ್ಪತ್ರೆಗೆ 1 ಹೀಗೆ ಒಟ್ಟಾರೆ 3 ಹೊಸದಾಗಿ ಅಂಬುಲೇನ್ಸ್ ಗಳು ನೀಡಲಾಗಿದ್ದು ಇದನ್ನು ಸಾರ್ವಜನಿಕರ ಆರೋಗ್ಯದ ದೃಷ್ಠಿಯಿಂದ ನೀಡಿದ್ದು ಇದನ್ನು ಆಸ್ಪತ್ರೆಯ ವೈದ್ಯರಾದವರು ಬಡರೋಗಿಗಳಿಗೆ ಒಳ್ಳೆಯ ಗುಣಮಟ್ಟದ ಚಿಕಿತ್ಸೆಯನ್ನು ನೀಡಬೇಕು. ಅಲ್ಲದೇ ತಾಲ್ಲೂಕಿನ ಆಸ್ಪತ್ರೆಗಳಿಗೆ ಬೇಕಾಗುವ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಲು ನಾನು ಸಿದ್ದನಿದ್ದೇನೆ. ತಾಲ್ಲೂಕಿನ ವೈದ್ಯರು ಹಾಗೂ ಬಡರೋಗಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಹಾಗೂ ತಾಲ್ಲೂಕಿನ ಆಸ್ಪತ್ರೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ತಕ್ಷಣವೇ ಭರ್ತಿ ಮಾಡಲು ಸರಕಾರದ ಗಮನಕ್ಕೆ ತರಲಾಗುವುದೆಂದು ಶಾಸಕರು ಭರವಸೆಯನ್ನು ನೀಡಿದರು. ಈ ಸಂದರ್ಭದಲ್ಲಿ ಮುಖಂಡರಾದ ಚಂದ್ರಶೇಖರ ಕರಜಗಿ, ನಾಗಪ್ಪ ಆರೇಕರ್, ರಮೇಶ ಪೂಜಾರಿ, ಎಸ್.ಕೆ.ಸುಧಾಕರ, ಶರಣು ಕುಂಬಾರ, ಮಹಾನಿಂಗ ಅಂಗಡಿ ಹಾಗೂ ತಾ.ಪಂ.ಅಧಿಕಾರಿ ರಮೇಶ ಸುಲ್ಪಿ, ಕ್ಷೇತ್ರ ಶಿಕ್ಷಣಾಧಿಕಾರಿಯಾದ ಮಾರುತಿ ಹುಜುರತಿ, ತಾಲ್ಲೂಕಾ ಆರೋಗ್ಯ ಇಲಾಖೆಯ ನೋಡಲ್ ಅಧಿಕಾರಿಯಾದ ಸುರೇಶ ಮೆಕ್ಕಿನ್, ಮುಖ್ಯ ವೈದ್ಯಾಧಿಕಾರಿಯಾದ ವಿನೋದ ರಾಠೋಡ್, ತಾಲ್ಲೂಕಾ ವೈದ್ಯಾಧಿಕಾರಿ ರವಿಕಿರಣ್, ವೈದ್ಯರಾದ ಡಾ.ಸಂಗಮೇಶ ಟಕ್ಕಳಕಿ, ಡಾ.ಭುವನೇಶ್ವರಿ, ಡಾ.ಮುಸ್ತಫಾ, ಡಾ.ರಾಜೇಶ್ವರಿ, ಡಾ.ನಾಗೇಶ ಹಾಗೂ ಡಾ.ವಿನಾಯಕ ಜೋಷಿ ಉಪಸ್ಥಿತರಿದ್ದರು.