ಅಫಜಲಪುರ ಪುರಸಭೆಯಿಂದ ಮಾ. 13 ರಂದು ಬಜೆಟ್ ಸಭೆ

(ಸಂಜೆವಾಣಿ ವಾರ್ತೆ)
ಅಫಜಲಪುರ : ಮಾ.11:ಪುರಸಭೆಯ ವತಿಯಿಂದ ಮಾರ್ಚ್ 13 ರಂದು ಬಜೆಟ್ ಸಭೆ ಕರೆಯಲಾಗಿದೆ ಎಂದು ಮುಖ್ಯಾಧಿಕಾರಿ ಶ್ರೀಮತಿ ಪಂಕಜಾ ರಾವೂರ್ ಅವರು ತಿಳಿಸಿದ್ದಾರೆ.
ಪುರಸಭೆಯ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಮಾರ್ಚ್ 13 ರಂದು ಪುರಸಭೆ ಕಾರ್ಯಾಲಯದ ಸಭಾಂಗಣದಲ್ಲಿ ಬೆಳಿಗ್ಗೆ 11 ಗಂಟೆಗೆ 2023-2024ನೇ ಸಾಲಿನ ಆಯವ್ಯಯ ಸಭೆಯನ್ನು ಆಯೋಜಿಸಿದ್ದು, ಸದರಿ ಸಭೆಗೆ ಸರ್ವ ಸದಸ್ಯರು ಹಾಜರಾಗಲು ಅವರು ಹೇಳಿಕೆಯಲ್ಲಿ ಕೋರಿದ್ದಾರೆ.