ಅಫಜಲಪುರ ತಹಶೀಲ್ದಾರರಿಂದ ಎಸ್.ಟಿ. ಪ್ರಮಾಣ ಪತ್ರ ವಿತರಣೆ

ಅಫಜಲಪುರ: ನ.10:ತಳವಾರ ಮತ್ತು ಪರಿವಾರ ಸಮುದಾಯದ ಜನತೆಗೆ ಎಸ್.ಟಿ ಪ್ರಮಾಣ ಪತ್ರ ನೀಡಬೇಕೆಂಬ ಸರ್ಕಾರದ ಆದೇಶದ ಹಿನ್ನೆಲೆ ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ಫಲಾನುಭವಿಗಳಿಗೆ ತಹಶೀಲ್ದಾರರು ಎಸ್.ಟಿ ಪ್ರಮಾಣ ಪತ್ರ ವಿತರಿಸಿದರು.

ಈ ವೇಳೆ ಸಮಾಜದ ಹಿರಿಯ ಮುಖಂಡ ಅವ್ವಣ್ಣ ಮ್ಯಾಕೇರಿ ಮಾತನಾಡುತ್ತಾ, ತಳವಾರ ಮತ್ತು ಪರಿವಾರ ಸಮುದಾಯದ ಬಹುದಿನಗಳ ಬೇಡಿಕೆಯನ್ನು ಈಡೇರಿಸಿದ ಬಿಜೆಪಿ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಕಳೆದ 30 ವರ್ಷಗಳಿಂದ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಬೇಕೆಂದು ಹಕ್ಕೋತ್ತಾಯ ಮಾಡುತ್ತಲೇ ಬಂದಿದ್ದೇವೆ. ಆದರೆ ಕೆಲವು ಸರ್ಕಾರಗಳು ನಮ್ಮ ಸಮಾಜದ ಜನರನ್ನು ಕೇವಲ ಓಟ್ ಬ್ಯಾಂಕ್ ಗಾಗಿ ಬಳಸಿಕೊಂಡು ದುರುಪಯೋಗ ಪಡಿಸಿಕೊಂಡಿದ್ದಾರೆ. ಅಲ್ಲದೆ ಚುನಾವಣೆ ಪೂರ್ವದಲ್ಲಿ ಬಿಜೆಪಿ ಸರ್ಕಾರ ಎಸ್ ಟಿ ಮಾಡುತ್ತೇವೆ ಎಂದು ಭರವಸೆ ನೀಡಿ ನುಡಿದಂತೆ ನಡೆದ ಸರ್ಕಾರಕ್ಕೆ ಹಾಗೂ ಮುಖ್ಯಮಂತ್ರಿಗಳಿಗೆ ಸಮಾಜದ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ತಹಸೀಲ್ದಾರ
ಸಂಜೀವಕುಮಾರ ದಾಸರ, ಗ್ರೇಡ್-2 ತಹಸೀಲ್ದಾರ ಪೃಥ್ವಿರಾಜ ಪಾಟೀಲ, ಪ್ರಮುಖರಾದ ಮಹಾರಾಯ ಅಗಸಿ, ಮಹಾಂತೇಶ ತಳವಾರ, ಅಶೋಕ ದುದ್ದಗಿ, ದಿಗಂಬರ ಕಾಡಪ್ಪಗೋಳ, ಗಿರಿಮಲ್ಲ ಉಡಗಿ, ಸಿದ್ದಪ್ಪ ದೊಡ್ಮನಿ, ಯಲ್ಲಪ್ಪ ಉಡಗಿ ಮುಂತಾದವರಿದ್ದರು.