ಅಫಜಲಪುರದಿಂದ ಸಂಜೆ 7 ಕ್ಕೆ ಉಡಚಾಣ ಮಾರ್ಗವಾಗಿ ಮಿರಗಿ ಗ್ರಾಮಕ್ಕೆ ಬಸ್ ಸೌಲಭ್ಯ

ಇಂಡಿ:ಮಾ.31:ತಾಲೂಕಿನ ಮಿರಗಿ ಗ್ರಾಮಕ್ಕೆ ಅಫಜಲಪೂರ ಘಟಕದಿಂದ ನಿತ್ಯ ಬಸ್ ಸಂಚಾರ ಆರಂಭಗೊಂಡಿದೆ.ಪ್ರತಿನಿತ್ಯ ಅಫಜಲಪೂರದಿಂದ ಸಂಜೆ 7 ಗಂಟೆಗೆ ಹೊರಡುವ ಬಸ್ ಕರಜಗಿ,ಉಡಚಣ,ರೋಡಗಿ,ಶಿವಪೂರ,ಗೋಳಸಾರ ಮಾರ್ಗವಾಗಿ ಸಂಜೆ 8.30 ಕ್ಕೆ ಮಿರಗಿ ಗ್ರಾಮಕ್ಕೆ ತಲುಪುತ್ತದೆ.ಮರುದಿನ ಬೆಳಿಗ್ಗೆ 6 ಗಂಟೆಗೆ ಹೋರಡುವ ಬಸ್ ಗೋಳಸಾರ,ಉಡಚಣಾ,ಕರಜಗಿ ಮಾರ್ಗವಾಗಿ ಅಫಜಲಪೂರ ತಲುಪುತ್ತದೆ. ಬಸ್ ಸಂಚಾರದ ಸದುಪಯೋಗವನ್ನು ಪ್ರಯಾಣಿಕರು ಪಡೆದುಕೊಳ್ಳಬೇಕು ಘಟಕ ವ್ಯವಸ್ಥಾಪಕರು ತಿಳಿಸಿದ್ದಾರೆ.
ಅಭಿನಂದನೆಗಳು:
ಅಫಜಲಪುರ ಬಸ್ ಘಟಕದಿಂದ ಮಿರಗಿ ಗ್ರಾಮಕ್ಕೆ ವಸತಿ ಬಸ್ ಕಲ್ಪಿಸಲು ಶ್ರಮಿಸಿದ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಹಾಗೂ ವಿಜಯಪುರ ಸಂಚಾರಿ ನಿಂತ್ರಣಾಧಿಕಾರಿ ಡಿ.ಎ.ಬಿರಾದಾರ ಹಾಗೂ ಅಫಲಪುರ ಘಟಕ ವ್ಯವಸ್ಥಾಪಕ ಭೋವಿ ಅವರನ್ನು ಮಿರಗಿ,ಗೋಳಸಾರ,ರೋಡಗಿ,ಶಿವಪೂರ ಗ್ರಾಮಸ್ಥರ ಪರವಾಗಿ ಅಭಿನಂದಿಸುವುದಾಗಿ ದೇವೆಂದ್ರ ಬರಡೋಲ, ಚಂದುಸಾಹುಕಾರ ಸೊನ್ನ, ಶಿವಪ್ಪ ತೊನಶ್ಯಾಳ, ಶ್ರೀಮಂತ ಖಸ್ಕಿ, ಮಲ್ಲುಗೌಡ ಬಿರಾದಾರ, ಸಂಗಣ್ಣ ಅತನೂರ, ಸಂಪತ್ತ ಹೊನ್ನಳ್ಳಿ, ಗಿರಮಲ್ಲಪ್ಪ ತಾಂಬೆ ಮೊದಲಾದವರು ತಿಳಿಸಿದ್ದಾರೆ.