ಅಫಜಲಪುರದಲ್ಲಿ ನೀರಾವರಿ ಕ್ರಾಂತಿ:ಎಂವೈ

ಅಫಜಲಪುರ:ಏ.10: ನೀರು ಇಲ್ಲದೇ ಬದುಕು ನಡೆಸಲು ಸಾಧ್ಯವಿಲ್ಲ ಹೀಗಾಗಿ ಅಫಜಲಪುರ ಮತಕ್ಷೇತ್ರದಲ್ಲಿ ನೀರಾವರಿ ಕ್ರಾಂತಿ ಮಾಡುವ ಗುರಿ ಹೊಂದಿದ್ದೇನೆ ಆದರೆ ರೈತಾಪಿವರ್ಗ ಹಾಗೂ ಜನರ ಸಹಕಾರ ಬಹಳ ಅತ್ಯಗತ್ಯವಾಗಿದೆ ಎಂದು ಶಾಸಕ ಎಂ.ವೈ.ಪಾಟೀಲ್ ಹೇಳಿದರು.
ತಾಲೂಕಿನ ಮಣ್ಣೂರ ಭೀಮಾ ನದಿ ಹತ್ತಿರ ಏತ ನೀರಾವರಿ ಯೋಜನೆ ನಿರ್ವಿುಸಿ ಮಾಶಾಳ ಗ್ರಾಮದ ಮೂರು ಮತ್ತು ಕರಜಗಿ ಗ್ರಾಮದ ಒಂದು ಕೆರೆ ತುಂಬಿಸುವ ಯೋಜನೆಯ ಮಾಶಾಳ ಗ್ರಾಮದಲ್ಲಿ ಅಡಿಗಲ್ಲು ಸಮಾರಂಭ ನೆರವೇರಿಸಿ ಮಾತನಾಡಿದ ಅವರು ಭೀಮಾ ನದಿಯಿಂದ 18 ಕೆರೆಗಳಿಗೆ ನೀರು ತುಂಬಿಸುವ ಕಾರ್ಯನಡೆಯುತ್ತಿದ್ದು ರೈತರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು. ನಮ್ಮ ಪ್ರದೇಶ ಬಿಸಿಲು ನಾಡುಯಾಗಿದ್ದು ರೈತರ ಮುಖದಲ್ಲಿ ಮಂದಹಾಸ ಮೂಡಿಸಲು ಭೀಮಾ ನದಿಯಿಂದ ಸುಮಾರು 18 ಕಿ.ವೀು ರಸ್ತೆ ಮೂಲಕ ಪೈಪ್ ಲೈನ್ ಅಳವಡಿಸಿ ಕೆರೆ ತುಂಬಿಸುವುದರಿಂದ ಈ ಭಾಗದ ಅಂತರ್ಜಲ ಮಟ್ಟದ ಕೊರತೆಯನ್ನು ನೀಗಿಸಲು ಮತ್ತು ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಮತ್ತು ಕುಡಿಯುವ ನೀರಿನ ಅಭಾವವನ್ನು ನೀಗಿಸಲು ಈ ಕೆರೆ ತುಂಬುವ ಯೋಜನೆ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದ ಅವರು ಮಾಶಾಳ ಗ್ರಾಮಕ್ಕೆ ಸುಮಾರು 10 ಕೋಟಿ ಅನುದಾನ ತರುವ ಮೂಲಕ ಅಭಿವೃದ್ಧಿಯ ಹೊಳೆಹರಿಸಿದ್ದೇನೆ ಎಂದು ತಿಳಿಸಿದರು.
ಜಿಪಂ ಸದಸ್ಯ ಅರುಣಕುಮಾರ ಪಾಟೀಲ್ ಮಾತನಾಡಿ ನನ್ನ ತಂದೆಯವರು ಶಾಸಕರಾಗುವ ಕಿಂತ ಮುಂಚೆ ಈ ಭಾಗದಲ್ಲಿ ಕೆರೆ ತುಂಬಿಸುವ ಮೂಲಕ ನೀರಾವರಿ ಕ್ಷೇತ್ರವನ್ನಾಗಿ ಮಾಡಬೇಕೆಂಬ ಬಹಳ ವರ್ಷಗಳ ಕನಸಾಗಿತ್ತು ಹೀಗಾಗಿ ಶಾಸಕರಾದ ನಂತರ ಸತತ ಪ್ರಯತ್ನ ಪಟ್ಟು ಸರ್ಕಾರ ಬದಲಾದರೂ ಸಹ ಅನುದಾನ ತಂದು ಕೆರೆ ತುಂಬಿಸುವ ಮೂಲಕ ಕನಸು ನನಸಾಗಿದೆ.ವಿಶೇಷವಾಗಿ ನನಗೆ ಕಷ್ಟದ ಸಂದರ್ಭದಲ್ಲಿ ಈ ಮಾಶಾಳ ಜಿಪಂ ಕ್ಷೇತ್ರ ರಾಜಕೀಯ ಜನ್ಮ ನೀಡಿದ ಕ್ಷೇತ್ರವಾಗಿದೆ ಯಾವುದೇ ಕಾರಣಕ್ಕೂ ನನ್ನ ಜೀವ ಇರುವ ತನಕ ಮರೆಯುವುದಿಲ್ಲ.ನನ್ನ ಹಾಗೂ ನಮ್ಮ ತಂದೆಯವರ ಶಾಸಕರ ಸಾಕಷ್ಟು ಅನುದಾನ ಈ ಕ್ಷೇತ್ರಕ್ಕೆ ತಂದಿದ್ದೇನೆ ಹೀಗಾಗಿ ಮುಂದೆ ಸಹ ನಿಮ್ಮೆಲ್ಲರ ಸಹಕಾರ ಇದ್ದರೆ ಇನ್ನಷ್ಟು ಹೆಚ್ಚಿನ ಅನುದಾನ ತಂದು ಅಭಿವೃದ್ಧಿ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಜಿಪಂ ಸದಸ್ಯರಾದ ಪ್ರಕಾಶ ಜಮಾದಾರ,ತುಕರಾಮಗೌಡ ಪಾಟೀಲ್ ಮಾತನಾಡಿ ಈ ಭಾಗದ ರೈತರ ಜವೀುನುಗಳು ಬಹಳಷ್ಟು ಫಲವತ್ತಾಗಿವೆ ಆದರೆ ನೀರಿನ ಸಮಸ್ಯೆಯಿಂದ ರೈತರು ಸಂಕಷ್ಟ ಅನುಭವಿಸುತ್ತಿದ್ದನ್ನು ಮನಗೊಂಡು ನಮ್ಮ ಶಾಸಕರು ಬಿಜೆಪಿ ಸರಕಾರ ಇದ್ದರೂ ಸಹ 2500 ಕೋಟಿ ಅನುದಾನ ತಂದು ಈ ಅಫಜಲಪುರ ಮತಕ್ಷೇತ್ರವನ್ನು ಅಭಿವೃದ್ಧಿ ಪಥದತ್ತ ಒಯ್ಯುತ್ತಿದ್ದಾರೆ.ಜನರು ಹಾಗೂ ರೈತಾಪಿವರ್ಗದವರು ಈ ಎಲ್ಲ ಯೋಜನೆಗಳ ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ ಸದೃಢವಾಗಬೇಕು ಎಂದು ಹೇಳಿದರು.
ಅಫಜಲಪುರ ಮತಕ್ಷೇತ್ರವನ್ನು ಶಾಸಕ ಎಂ.ವೈ.ಪಾಟೀಲ್ ಹಾಗೂ ಜಿಪಂ ಸದಸ್ಯ ಅರುಣಕುಮಾರ ಪಾಟೀಲ್ ಅವರು ಅಭಿವೃದ್ಧಿಗಾಗಿ ರಾತ್ರಿ-ಹಗಲೆನ್ನದೆ ಶ್ರಮಿಸುತ್ತಿದ್ದಾರೆ ಹೀಗಾಗಿ ಕ್ಷೇತ್ರ ಮತದಾರರ ಆಶೀರ್ವಾದ ಇದೇ ರೀತಿ ಮುಂದೆ ಇರಬೇಕು.ಸುಮಾರು 2500 ಕೋಟಿ ಅನುದಾನ ಈ ಕ್ಷೇತ್ರಕ್ಕೆ ತಂದಿದ್ದಾರೆ. -ಶರಣು ಕುಂಬಾರ ಕಾಂಗ್ರೇಸ್ ಪ್ರಧಾನ ಕಾರ್ಯದರ್ಶಿ
ಕಾರ್ಯಕ್ರಮದ ಸಾನಿಧ್ಯವನ್ನು ಶ್ರೀ ಕೇದಾರ ದೇವರು ವಹಿಸಿದರು,ಅಧ್ಯಕ್ಷತೆಯನ್ನು ಗ್ರಾಪಂ ಅಧ್ಯಕ್ಷೆ ಸುಗಲಾಬಾಯಿ ಹತ್ತಳ್ಳಿ,ಜಿಪಂ ಸದಸ್ಯ ಭೌರಮ್ಮಾ ಕರೂಟಿ,ತಾಪಂ ಅಧ್ಯಕ್ಷೆ ರುಕ್ಮಿಣಿ ಹೊನ್ನಕೇರಿ,ಗ್ರಾಪಂ ಉಪಾಧ್ಯಕ್ಷೆ ಶರೀಪಾಬಿ ಪಠಾಣ,ಸಮಾಜ ಸೇವಕ ಜೆ.ಎಂ.ಕೊರಬು,ರಾಜೇಂದ್ರ ಪಾಟೀಲ್ ರೇವೂರ,ಪಪ್ಪು ಪಟೇಲ್,ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಮಹಾಂತೇಶ ಪಾಟೀಲ್,ಜಿಪಂ ಮಾಜಿ ಸದಸ್ಯ ಸಿದ್ಧಾರ್ಥ ಬಸರೀಗಿಡ,ಶೀವಾನಂದ ಗಾಡಿಸಾಹುಕಾರ,ಮುಖಂಡರಾದ ಬಾಬಾಸಾಹೇಬಗೌಡ ಪಾಟೀಲ್,ಬಿಲ್ಲಮರಾಜ್ ಮ್ಯಾಳೇಸಿ,ಕರಜಗಿ ಗ್ರಾಪಂ ಅಧ್ಯಕ್ಷ ವಿಠೋಬಾ ಪುಜಾರಿ,ತಾಪಂ ಸದಸ್ಯ ರಾಜಕುಮಾರ ಬಬಲಾದ,ನಾನಾಸಾಹೇಬಗೌಡ ಪಾಟೀಲ್,ಶಿವಪುತ್ರಪ್ಪ ಜಿಡ್ಡಗಿ,ಜ್ಞಾನೇಶ್ವರಿ ಪಾಟೀಲ್,ರಾಜಶೇಖರ ಪಾಟೀಲ್,ರವಿ ನಂದಶೇಟ್ಟಿ,ಚಂದು ದೇಸಾಯಿ,ಚೀದಾನಂದ ಮಠ,ರಮೇಶ ಪುಜಾರಿ,ಶರಣು ಕುಂಬಾರ ಹಾಗೂ ಅಧಿಕಾರಿ ಮಲ್ಲಿಕಾರ್ಜುನ ಜಾಕಾ ಇದ್ದರು.