
ಅಫಜಲಪುರ : ಮಾ.4:ಪಟ್ಟಣದ ಹೊರವಲಯದಲ್ಲಿನ ವಿಜಯಪುರ ರಸ್ತೆಯಲ್ಲಿರುವ ಜಾಗೀರದಾರ್ ಕ್ರೀಡಾಂಗಣದಲ್ಲಿ ಶುಕ್ರವಾರ ಸಂಜೆ ಜರುಗಿದ ವರ್ಣರಂಜಿತ ಸಮಾರಂಭದಲ್ಲಿ ದಿ. ಅಶೋಕ್ ಗುತ್ತೇದಾರ್ ಮತ್ತು ಪವರ್ ಸ್ಟಾರ್ ಡಾ. ಪುನೀತ್ ರಾಜಕುಮಾರ್ ಅವರ ಸ್ಮರಣಾರ್ಥವಾಗಿ ಪವರ್ ಕಪ್ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ದೊರಕಿತು.
ದಿ. ಅಶೋಕ್ ಗುತ್ತೇದಾರ್ ಅವರ ಪುತ್ರ ಡಾ. ಅಜಯ್ ಗುತ್ತೇದಾರ್ ಅವರು ಪಂದ್ಯಾವಳಿಯನ್ನು ಉದ್ಘಾಟಿಸಿದರು. ದಿವ್ಯ ಸಾನಿಧ್ಯವನ್ನು ವಹಿಸಿದ್ದ ಮಳೇಂದ್ರ ಮಠದ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರು ಮಾತನಾಡಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ನಿತಿನ್ ಗುತ್ತೇದಾರ್ ಅವರು ಒಳ್ಳೆಯ ಕಾರ್ಯವನ್ನು ಮಾಡುತ್ತಿದ್ದಾರೆ. ಕ್ರಿಕೆಟ್ ಎಂದರೆ ಪ್ರೀತಿ. ಪ್ರೀತಿಯಿಂದ ಆಡುವ ಆಟವಾಗಿದೆ. ಅಂತಹ ಕ್ರಿಕೆಟ್‍ನ್ನು ಏರ್ಪಡಿಸುವ ಮೂಲಕ ನಿತಿನ್ ಗುತ್ತೇದಾರ್ ಅವರು ಉತ್ತಮ ಕೆಲಸ ಮಾಡಿದ್ದಾರೆ. ತಾಲ್ಲೂಕಿನ ಎಲ್ಲ ಜಿಲ್ಲಾ ಪಂಚಾಯಿತಿ ಮತಕ್ಷೇತ್ರಗಳ ತಂಡಗಳು ಪಾಲ್ಗೊಂಡಿವೆ. ಕ್ರೀಡೆಗಳು ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಕ್ರೀಡೆಯಿಲ್ಲದ ಜೀವನ ಕೀಟ ಹತ್ತಿದ ಹಣ್ಣಿನಂತೆ. ಆದ್ದರಿಂದ ಕ್ರೀಡೆಗಳು ಅಗತ್ಯ ಎಂದರು.
ನಿತಿನ್ ಗುತ್ತೇದಾರ್ ಅವರು ಅವರ ತಂದೆ ದಿ. ವೆಂಕಯ್ಯ ಗುತ್ತೇದಾರ್ ಹಾಗೂ ಅವರ ಅಣ್ಣ ದಿ. ಅಶೋಕ್ ಗುತ್ತೇದಾರ್ ಅವರಂತಹ ಮನಸ್ಸು ಹೊಂದಿದ್ದಾರೆ. ಈ ಭಾಗದಲ್ಲಿ ನೀರಾವರಿ ಸೌಲಭ್ಯ ದೊರಕಲು ಅವರಿಬ್ಬರ ಪಾತ್ರ ಬಹಳವಾಗಿದೆ ಎಂದು ಹೇಳಿದ ಅವರು, ಕ್ರಿಕೆಟ್‍ನ್ನು ಸಂಭ್ರಮಿಸಿ ಎಂದು ಕರೆ ನೀಡಿದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ನಿತಿನ್ ಗುತ್ತೇದಾರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಯಾವುದೇ ರೀತಿಯಲ್ಲಿ ಜಗಳವಾಡದೇ, ವಿವಾದಕ್ಕೆ ಎಡೆ ಮಾಡಿಕೊಡದೇ ಸೌಹಾರ್ದತೆಯಿಂದ ಹಾಗೂ ಕ್ರೀಡಾ ಮನೋಭಾವನೆಯಿಂದ ಆಟವಾಡಿ ಎಂದು ಮನವಿ ಮಾಡಿದರು.
ಅಂಪೈರ್ ಅವರು ಕೊಟ್ಟ ತೀರ್ಪು ಅಂತಿಮವಾಗಿದೆ. ಇಂತಹ ಕ್ರಿಕೆಟ್ ಪಂದ್ಯಾವಳಿಯನ್ನು ತಾಲ್ಲೂಕು ಮಟ್ಟದಲ್ಲಿ ಪ್ರತಿ ವರ್ಷ ಆಚರಿಸಬೇಕು ಎಂಬ ನಿರ್ಧಾರ ಮಾಡಿದ್ದೇನೆ. ಅದಕ್ಕೆ ಯುವಕರ ಪೆÇ್ರೀತ್ಸಾಹ ಬೇಕು. ಯುವಕರು ಪೆÇ್ರೀತ್ಸಾಹ ಇರದೇ ಇದ್ದರೆ ಅಂತಹ ಆಟ ಯಶಸ್ವಿಯಾಗದು. ನಿಮ್ಮೆಲ್ಲರ ಸಹಕಾರ ಇರಲಿ. ಕ್ರಿಕೆಟ್‍ನ್ನು ಆಡಿ, ನೋಡಿ ಆನಂದಿಸಿ ಎಂದು ಅವರು ತಿಳಿಸಿದರು. ನ್ಯಾಯವಾದಿಗಳಾದ ಫಿರೋಜ್ ಜಹಾಗೀರದಾರ್, ಮುಶ್ರಫ್ ಜಹಾಗೀರದಾರ್, ಉದ್ಯಮಿ ಸಂತೋಷ್ ದಾಮಾ ಅವರು ಸಹ ಮಾತನಾಡಿದರು.
ಭೂಮಿ ಪೂಜೆಯನ್ನು ಪುರಸಭೆ ಸದಸ್ಯ ಮಹೇಂದ್ರ ಡಾಂಗೆ, ಭಾವಚಿತ್ರದ ಪೂಜೆಯನ್ನು ಅಲ್ತಾಫ್ ಪಟೇಲ್ ಅವರು ಮಾಡಿದರು. ಜ್ಯೋತಿಯನ್ನು ಮುಶ್ರಫ್ ಜಹಾಗೀರದಾರ್ ಅವರು ಬೆಳಗಿಸಿದರು. ಬಾಲರಾಜ್ ವಾಡೇಕರ್ ಅವರು ಕ್ರೀಡಾ ಧ್ವಜವನ್ನು ನೆರವೇರಿಸಿದರು.
ವೇದಿಕೆಯ ಮೇಲೆ ರವಿ ನಂದಿಗೌಡ, ಮಳೆಪ್ಪ ಡಾಂಗೆ, ಶಾಂತಯ್ಯ ಹಿರೇಮಠ್, ಪಾಶಾ ಮಣ್ಣೂರ್, ಡಾ. ಶಂಕರ್ ಮನ್ಮಿ, ರಾಜಶೇಖರ್ ಶ್ರೀಗಿರಿ, ಈರಣ್ಣ ಪಂಚಾಳ್, ಕಂಠೆಪ್ಪ ಬಳೂರ್ಗಿ, ಶಂಕರ್ ಮ್ಯಾಕೇರಿ, ಅಲ್ತಾಫ್ ಪಟೇಲ್, ಸಂತೋಷ್ ಧಾಮಾ, ಇಲಿಯಾಸ್ ಜಹಾಗೀರದಾರ್, ಧನರಾಜ್ ನೂಲಾ, ರಿಯಾಜ್ ಪಟೇಲ್, ಸಿದ್ದು ದಿಕ್ಸಂಗಿ, ಶರಣು ನಿಂಬಾಳ್, ಅಪ್ಪು ರಾಠೋಡ್, ರಫೀಕ್ ಮಣ್ಣೂರ್, ರಮೇಶ್ ಬಾಕೆ, ರಾಜಕುಮಾರ್ ಜಿಡ್ಡಿಗಿ, ಜ್ಯೋತಿಪ್ರಕಾಶ್ ಪಾಟೀಲ್, ಗುರು ಸಾಲಿಮಠ್, ಸಿದ್ದು ಬಿರಾದಾರ್ ಗೌಡಗಾಂವ್, ನೂರ್ ಅಹ್ಮದ್ ಭಾಗವಾನ್, ಸಾವಿರಪ್ಪ ಜಮಾದಾರ್, ಸಿದ್ದು ರಾಣೆ, ಶ್ರೀಮಂತ್ ಅಂಜುಟಗಿ, ರಾಚಯ್ಯಮಠ್, ತನ್ವೀರ್ ಮಣ್ಣೂರ್, ಅಶೋಕ್ ಗುತ್ತೇದಾರ್ ಅವರ ಇನ್ನೋರ್ವ ಪುತ್ರ ಅಕ್ಷಯ್ ಗುತ್ತೇದಾರ್ ಮುಂತಾದವರು ಉಪಸ್ಥಿತರಿದ್ದರು.