ಅಫಜಲಪುರದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯುತ್ಸವ ಅದ್ದೂರಿ ಸಂಭ್ರಮ

(ಸಂಜೆವಾಣಿ ವಾರ್ತೆ)
ಅಫಜಲಪುರ : ಮಾ.3:ಹಿಂದೂ ಧರ್ಮದ ರಕ್ಷಕ ರಾಷ್ಟ್ರ ಪ್ರೇಮದಿಂದ ಸ್ವದೇಶಿ ಸಾಮ್ರಾಜ್ಯವನ್ನು ನಿರ್ಮಿಸುವ ಮೂಲಕ ನೆಲದ ಧರ್ಮ ಮತ್ತು ಸಂಸ್ಕøತಿಗಳ ರಕ್ಷಕ ಛತ್ರಪತಿ ಶಿವಾಜಿ ಮಹಾರಾಜರ 395ನೇ ಜಯಂತ್ಯುತ್ಸವವನ್ನು ಪ್ರಥಮ ಬಾರಿಗೆ ಸ್ನೇಹಿತರ ಬಳಗದಿಂದ ಪುರಸಭೆ ಸದಸ್ಯ ಮಳೇಂದ್ರ ಡಾಂಗೆ ಅವರ ನೇತೃತ್ವದಲ್ಲಿ ಗುರುವಾರ ಪಟ್ಟಣದಲ್ಲಿ ಅದ್ದೂರಿಯಿಂದ ಆಚರಿಸಲಾಯಿತು.
ಮಧ್ಯಾಹ್ನ 3 ಗಂಟೆಗೆ ಬಸವೇಶ್ವರ್ ವೃತ್ತದಿಂದ ಪಟ್ಟಣದ ಪ್ರಮುಖ ಬೀದಿಗಳಾದ ಅಂಬೇಡ್ಕರ್ ವೃತ್ತ, ಬಸ್ ನಿಲ್ದಾಣದ ಮಾರ್ಗವಾಗಿ ಚೌಡಿ, ಬಜಾರ್ ಗಲ್ಲಿ, ಲಕ್ಷ್ಮೀದೇವಸ್ಥಾನದ ಮುಖಾಂತರ ಪುನ: ಬಸವೇಶ್ವರ್ ವೃತ್ತದಲ್ಲಿ ಸೇರಿ ಸಮಾರೋಪಗೊಂಡಿತು.
ಜಯಂತ್ಯುತ್ಸವದಲ್ಲಿ ಪಕ್ಷ ಬೇಧ ಮರೆತು ಎಲ್ಲ ರಾಜಕೀಯ ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು. ಮಾಜಿ ಸಚಿವ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಮಾಲಿಕಯ್ಯ ಗುತ್ತೇದಾರ್, ಅವರ ಪುತ್ರರಾದ ಕುಶಾಲ್ ಗುತ್ತೇದಾರ್, ರಿತೇಶ್ ಗುತ್ತೇದಾರ್, ಮನೀಶ್ ಗುತ್ತೇದಾರ್, ಸಹೋದರ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ನಿತಿನ್ ಗುತ್ತೇದಾರ್ ಸೇರಿದಂತೆ ಹಲವು ಮುಖಂಡರು ಹಾಗೂ ಯುವಕರು ಪಾಲ್ಗೊಂಡಿದ್ದರು.
ಜೊತೆಗೆ ಶಾಸಕ ಎಂ.ವೈ. ಪಾಟೀಲ್ ಅವರ ಪುತ್ರರಾದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅರುಣಕುಮಾರ್ ಎಂ.ವೈ. ಪಾಟೀಲ್, ಡಾ. ಸಂಜೀವಕುಮಾರ್ ಪಾಟೀಲ್ ಅವರೂ ಸಹ ಜಯಂತ್ಯುತ್ಸವದದಲ್ಲಿ ಪಾಲ್ಗೊಂಡು ಗಮನಸೆಳೆದರು. ನೂರಾರು ಸಂಖ್ಯೆಯಲ್ಲಿ ಮುಖಂಡರು, ವಿವಿಧ ಪಕ್ಷದ ನಾಯಕರು, ಮುಖಂಡರು,ಯುವಕರು ಹಾಗೂ ಮಹಿಳೆಯರು ಭಾಗವಹಿಸಿ ಸಂಭ್ರಮಿಸಿದರು.