ಅಪ್ ಗ್ರೇಡ್ ಕಾಣದ ಕೂಡ್ಲಿಗಿ ಪೊಲೀಸ್ ಠಾಣೆ.ಅಪರಾಧ ನಿಯಂತ್ರಣಕ್ಕಿಲ್ಲಿ ಸಿಬ್ಬಂದಿ ಕೊರತೆ.


ಬಿ. ನಾಗರಾಜ.ಕೂಡ್ಲಿಗಿ.
ಕೂಡ್ಲಿಗಿ. ಮೇ.27  :-  ಪಟ್ಟಣದಲ್ಲಿ ಹಾಡುಹಗಲೇ ಮನೆಗಳ್ಳತನ ಸರಣಿ  ಪ್ರಕರಣಗಳು ಜರುಗುತ್ತಿದ್ದು ಕೆಳದಿನಗಳಿಂದ ಜನರು ಭಯಭೀತರಾಗಿ ಪೋಲೀಸರ ಮೊರೆ ಹೋಗಿದ್ದು  ಕಳ್ಳತನ ಸೇರಿದಂತೆ ಇತರೆ ಅಪರಾಧ ಪ್ರಕರಣಗಳ ನಿಯಂತ್ರಣ ಮಾಡಲು ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ  ಸಿಬ್ಬಂದಿ ಕೊರತೆ ಎದ್ದುಕಾಣುತ್ತಿದೆ ಎಂದು ಹೇಳಬಹುದಾಗಿದೆ.
ಕೂಡ್ಲಿಗಿ ಪಟ್ಟಣದ ಚೋರುನೂರು ರಸ್ತೆ, ರಾಜೀವಗಾಂಧಿ ನಗರ, ಹೊಸಪೇಟೆ ರಸ್ತೆ ಸೇರಿದಂತೆ ಇತರೆಡೆ ಮನೆಗಳ್ಳತನ ಪ್ರಕರಣಗಳು ಜರುಗಿದ್ದು ನಗದು, ಒಡವೆಗಳು ಕಳ್ಳತನವಾಗಿರುವ ಬಗ್ಗೆ ಪ್ರಕರಣ ಸಹ ದಾಖಲಾಗಿವೆ ಅದರಲ್ಲಿ ಚೋರುನೂರು ರಸ್ತೆ ಪಕ್ಕದ ಲೋಕೋಪಯೋಗಿ ಇಲಾಖೆಯ ನೌಕರಾದ ಹೈದರ್ ಹಾಗೂ ಸೋಮಶೇಖರ್ ಎನ್ನುವವರ ಮನೆಗಳು ಹಾಗೂ ಹೊಸಪೇಟೆ ರಸ್ತೆಯ ಪಕ್ಕದ ಅಂಬಾಲಿ ನಾಗರಾಜ ಎನ್ನುವವರ ಮನೆಗಳಿಗೆ ಹಾಡುಹಗಲೇ ಮನೆಬೀಗ ಮುರಿದು ಗಾಡ್ರೆಜ್ ಲಾಕಾರ್ ಮುರಿದು ನಗದು, ಬಂಗಾರ, ಬೆಳ್ಳಿ ಒಡವೆ ಕಳುವು ಮಾಡಿ ಪರಾರಿಯಾಗುತ್ತಿದ್ದ ಬಗ್ಗೆ ಪ್ರಕರಣ ದಾಖಲಾಗಿದ್ದು ಪ್ರಕರಣದ ಬೆನ್ನತ್ತಿದ ಪೊಲೀಸರಿಗೆ ಕಳ್ಳರು ಚಳ್ಳೆಹಣ್ಣು ತಿನ್ನಿಸುತ್ತಿದ್ದೂ ಅಲ್ಲದೆ ಅವರ ಸುಳಿವು ಸಹ ಸಿಗದಂತೆ ಹಾಡುಹಗಲೇ ಕಳ್ಳತನದ ಚಾಣಾಕ್ಷಾತನ ತೋರುತ್ತಿದ್ದಾರೆ ಜನತೆ ಸರಣಿಗಳ್ಳತನ ಸುದ್ದಿಯಿಂದ ಭಯಭೀತಾರಾಗಿದ್ದಾರೆ ಇದಕ್ಕೆ ಪೊಲೀಸರು ಅಲ್ಲಲ್ಲಿ ಅಪರಿಚಿತ ಮುಖಗಳು ಕಂಡುಬಂದರೆ  ಅವರ ಬಗ್ಗೆ ಪೊಲೀಸರಿಗೆ ಸುಳಿವು ನೀಡುವಂತೆ ಪೊಲೀಸರು ಸಾರ್ವಜನಿಕರಿಗೆ ಕರಪತ್ರ ಹಂಚುವ ಮೂಲಕ ಧ್ವನಿವರ್ಧಕದ ಮೂಲಕ ಜನತೆಗೆ ಎಚ್ಚರಿಕೆಯ ಜಾಗೃತಿ ಮೂಡಿಸುತ್ತಿದ್ದೂ ಆದರೂ ಚಾಣಕ್ಷ ಕಳ್ಳರು ಪೋಲೀಸರ ದಿಕ್ಕು ತಪ್ಪಿಸಿ ಕಳ್ಳತನ ಮಾಡುತ್ತಿದ್ದಾರೆ ಎಂದು ಹೇಳಬಹುದಾಗಿದೆ.
ಪೊಲೀಸ್ ಸಿಬ್ಬಂದಿ ಕೊರತೆ : ದಿನೇ ದಿನೇ ಕಳ್ಳತನ ಪ್ರಕರಣ, ರಾಷ್ಟ್ರೀಯ ಹೆದ್ದಾರಿಯಲ್ಲಾಗುವ ಅಪಘಾತ ಪ್ರಕರಣ ಸೇರಿದಂತೆ ಜಾತ್ರೆ ಹಬ್ಬಗಳ ಬಂದೋಬಸ್ತ್ ಗಳಿಗೆ ಪೊಲೀಸರನ್ನು ನಿಯೋಜಿಸಲಾಗುತ್ತಿದ್ದೂ ಕಳೆದ ಎಳೆಂಟು ದಶಕ ಕಳೆದರೂ ಅಂದಿರುವ ಸಿಬ್ಬಂದಿಗಳ ಸಂಖ್ಯೆ ಇಂದಿಗೂ ಇದ್ದಾರೆ. 19 ಮಂದಿ ಪೊಲೀಸರು ಅದರಲ್ಲಿ ಡಿವೈಎಸ್ ಪಿ ಕಚೇರಿಗೆ ನಾಲ್ಕೈದು  ಮಂದಿ, ಸಿಪಿಐ ಕಚೇರಿಗೆ ಇಬ್ಬರು ಸೇರಿದಂತೆ ಉಳಿದ ಹನ್ನೆರಡು ಮಂದಿ ಉಳಿದವರು ಠಾಣೆಯ  ಕರ್ತವ್ಯ ನಿರ್ವಹಿಸುತ್ತಿದ್ದು,17ಮುಖ್ಯಪೇದೆ, ಐವರು ಎಎಸ್ ಐ ಗಳಿದ್ದು ಅದರಲ್ಲಿ ಒಬ್ಬ ಮಹಿಳಾ ಸಿಬ್ಬಂದಿ ಮತ್ತು ಓರ್ವ ಎಎಸ್ ಐ  ಓಓಡಿ ಹೋಗಿದ್ದಾರೆಂದು ತಿಳಿದಿದೆ. ದಿನದಿಂದ ದಿನಕ್ಕೆ ವರ್ಷದಿಂದ ವರ್ಷಕ್ಕೆ ಜನಸಂಖ್ಯೆ ಹೆಚ್ಚಾಗುತ್ತಿದ್ದೂ ಪೊಲೀಸ್ ಠಾಣೆ ಆರಂಭವಾದಾಗಿನಿಂದ ಇಂದಿನವರೆಗೂ ಅದೇ ಹಳೇ ಸಿಬ್ಬಂದಿಗಳಿಂದ ಕೂಡಿದ್ದು ಅಪರಾಧ ತಡೆಯುವಲ್ಲಿ ಸಿಬ್ಬಂದಿ ಕೊರತೆ ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಕಾಣುತ್ತಿದೆ.
ಹಂದಿಕಳ್ಳರ ಹಾವಳಿ ಪೊಲೀಸರ ನಡುವೆ ಸಂಘರ್ಷ ಪೊಲೀಸರಿಗೆ ಗಾಯ  : ಮನೆಗಳ್ಳತನ ಪ್ರಕರಣ ಜಾಸ್ತಿಯಾಗುತ್ತಿರುವ ನಿಟ್ಟಿನಲ್ಲಿ ಇರುವ ಸಿಬ್ಬಂದಿಯಲ್ಲೇ ಕ್ರೈಮ್ ನಿಯಂತ್ರಣಕ್ಕೆ ಮುಂದಾಗಿ ಪ್ರತಿ ಓಣಿಗಳಲ್ಲಿ ಬಿಗಿ ಬಂದೋಬಸ್ತ್ ಮಾಡಲು ಮುಂದಾಗಿದ್ದು ಇದರ ಮಧ್ಯದಲ್ಲಿ ಆಗಾಗ ಹಂದಿಕಳ್ಳರ ಹಾವಳಿ ಈಗ ಪಟ್ಟಣದಲ್ಲಿ ಜೋರಾಗಿದೆ ಶನಿವಾರ ರಾತ್ರಿ ಪಟ್ಟಣದ ಬಾಪೂಜಿ ನಗರದ  ಶಾರದಾ ಸ್ಕೂಲ್ ಹತ್ತಿರದಲ್ಲಿ 11ಗಂಟೆ ಸುಮಾರಿಗೆ ಹಂದಿಯನ್ನು ಕಳ್ಳತನ ಮಾಡಿಕೊಂಡು ಹೋಗುವವರು ವಾಹನವೊಂದು ನಿಲ್ಲಿಸಿ ಸುತ್ತಾಡುತ್ತಿದ್ದಾಗ ಅದರಲ್ಲಿ ಹಂದಿ ಬಲೆ ಸಹ ಇದೆ ಇದರಿಂದ ನಿಯಂತ್ರಣ ಮಾಡಲು ಮುಂದಾಗುವ ಪೋಲೀಸರ ಮೇಲೆ ವಾಹನ ಹರಿದುಬಿಡುವ ಬಗ್ಗೆ ಹೆದರಿಸುತ್ತಿದ್ದಾರೆ ಅಲ್ಲದೆ ಕೆಲವರ್ಷಗಳ ಹಿಂದಿನಿಂದಲೂ ಹಂದಿಗಳ್ಳರ ಹಾಗೂ ಪೊಲೀಸರ ನಡುವೆ ಸಂಘರ್ಷ ನಡೆಯುತ್ತಿದ್ದೂ ಕಳೆದ ರಾತ್ರಿ ಶಾರದಾ ಶಾಲೆ ಹತ್ತಿರದಲ್ಲಿ ಹಂದಿಹಿಡಿಯಲು ಮುಂದಾದವರನ್ನು ಮನೆಗಳ್ಳರು ಇರಬಹುದೆಂದು ಪೊಲೀಸರಿಗೆ ಅಲ್ಲಿನ ಜನರು ವಿಷಯ ತಿಳಿಸಲಾಗಿ ಅಲ್ಲಿಗೆ ಬಂದ ಪೊಲೀಸರನ್ನು ಕಂಡ ಹಂದಿಗಳ್ಳರು ಪೊಲೀಸರ ಕಡೆ ಕಲ್ಲು ತೂರಿದ ಪ್ರಸಂಗದಲ್ಲಿ  ಕ್ರೈಮ್ ಪಿಎಸ್ಐ ಸೇರಿ  ಮೂರ್ನಾಕು ಪೊಲೀಸರಿಗೆ ಗಾಯಗಳಾಗಿವೆ ಎಂದು ತಿಳಿದಿದೆ ಇಂತಹ ಘಟನೆ ಹೊಸದೇನು ಅಲ್ಲ ಆದರೆ ಇದು ಮುಂದುವರೆದರೆ ಪೋಲೀಸರ ಕುಟುಂಬಕ್ಕೂ ನೆಮ್ಮದಿ ಇಲ್ಲದ ಪರಿಸ್ಥಿತಿ ಎದುರಾಗಬಹುದು ಇದರಿಂದಾಗಿ ಸಂಬಂದಿಸಿದ ಜಿಲ್ಲಾ ಪೊಲೀಸ್ ಅಧೀಕ್ಷಕರು ಹಾಗೂ ಕೂಡ್ಲಿಗಿ ಶಾಸಕರು ಗೃಹ ಸಚಿವರೊಂದಿಗೆ ಚರ್ಚೆ ನಡೆಸಿ ಕೂಡ್ಲಿಗಿ ಪೊಲೀಸ್ ಠಾಣೆ ಆಪ್ಗ್ರೇಡ್ ಮಾಡುವ ಮೂಲಕ ಪಿಐ ಠಾಣೆ ಮಾಡಿ  ಸಿಬ್ಬಂದಿ ಹೆಚ್ಚಳ ಮಾಡುವುದರಿಂದ ಇಂತಹ ಅನೇಕ ಪ್ರಕರಣವನ್ನು ನಿಯಂತ್ರಿಸಬಹುದಾಗಿದೆ.
ಶಾಸಕರು ಮತ್ತು ಗೃಹ ಸಚಿವರೊಂದು ಮನವಿ : ಕೂಡ್ಲಿಗಿ ಪೊಲೀಸ್ ಠಾಣೆ ಬಹಳಷ್ಟು ಹಳೆಯ ಠಾಣೆಯಾಗಿದೆ ಅಲ್ಲದೆ ಮಳೆ ನೀರಿನಿಂದ ಸೊರಟದಿಂದ ಕೂಡಿದ ಹಳೇ ಕಟ್ಟಡಕ್ಕೆ ಮುಕ್ತಿ ಕೊಟ್ಟು ನೂತನ ಕಟ್ಟಡಕ್ಕೆ ನಾಲ್ಕು ಕೋಟಿ ರೂ ಅನುದಾನ ಬಿಡುಗಡೆ ಮಾಡಿರುವುದು ಸಂತಸದ ವಿಷಯವಾಗಿದ್ದು ಕೂಡ್ಲಿಗಿ ಪೊಲೀಸ್ ಠಾಣೆ ಆರಂಭದ ಕಾಲದಿಂದಲೂ ಅಂದಿನ ಜನಸಂಖ್ಯೆಗನುಗುಣವಾಗಿ ಅಂದು ಸಿಬ್ಬಂದಿ ನಿಯೋಜನೆ ಮಾಡಿದಂತೆ ಇಂದಿಗೂ ಜನಸಂಖ್ಯೆ ದುಪ್ಪಟ್ಟು ಆಗಿದ್ದು ಪಟ್ಟಣ ಅಭಿವೃದ್ಧಿ ಹೊಂದುತ್ತ ಇದ್ದರೂ ಕೂಡ್ಲಿಗಿ ಪೊಲೀಸ್ ಸಿಬ್ಬಂದಿ ಮಾತ್ರ ಹೆಚ್ಚಾಗದೆ ಹಾಗೇ ಇದೆ ಇದರಿಂದ ಕೂಡ್ಲಿಗಿ ಶಾಸಕರಿಗೆ ಜನತೆ ಮಾಡುವಂತೆ ಕೂಡ್ಲಿಗಿ ಪೊಲೀಸ್ ಠಾಣೆಯನ್ನು ಆಪ್ಗ್ರೇಡ್ ಮಾಡಿ ಪಿಐ ಠಾಣೆ ಮಾಡಿದಲ್ಲಿ ಸಿಬ್ಬಂದಿ ಹೆಚ್ಚಳವಾಗುತ್ತದೆ ಅಲ್ಲದೆ ಅಪರಾಧ ತಡೆಗೂ ಅನುಕೂಲವಾಗಲು ಗೃಹ ಸಚಿವರಾದ ಡಾ ಜಿ ಪರಮೇಶ್ವರ್ ಅವರು ಕೂಡ್ಲಿಗಿ ಪೊಲೀಸ್ ಠಾಣೆ ಆಪ್ಗ್ರೇಡ್ ಮಾಡುವಂತೆ ಕೂಡ್ಲಿಗಿ ಪ್ರಜ್ಞಾವಂತರು ಪತ್ರಿಕೆಗಳ  ಮನವಿ ಮಾಡಿದ್ದಾರೆ.