ಅಪ್ರೆಂಟಿಸ್ ತರಬೇತಿಗೆ ಒಟ್ಟು 50 ಜನ ಅಭ್ಯರ್ಥಿಗಳು ಆಯ್ಕೆ

ಕಲಬುರಗಿ.ಮಾ,26:ಬಳ್ಳಾರಿಯ ತೋರಣಗಲ್ಲು ಜೆ.ಎಸ್.ಡಬ್ಲ್ಯೂ. ಸ್ಟೀಲ್ ಲಿಮಿಟೆಡ್ ಕಾರ್ಖಾನೆಯಲ್ಲಿ ಒಂದು ವರ್ಷದ ಅವಧಿಗೆ ಅಪ್ರೆಂಟಿಸ್ ತರಬೇತಿಗಾಗಿ ಶುಕ್ರವಾರ ಕಲಬುರಗಿ (ಮಹಿಳಾ) ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಕರೆದ ಕ್ಯಾಂಪಸ್ ಸಂದರ್ಶನದಲ್ಲಿ ಐಟಿಐ ಪಾಸಾದ ಒಟ್ಟು 50 ಜನ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.

ಕಲಬುರಗಿ ಉಪ ಕಾರ್ಮಿಕ ಆಯುಕ್ತರಾದ ಡಿ.ಜಿ. ನಾಗೇಶ ಅವರು ಈ ಕ್ಯಾಂಪಸ್ ಸಂದರ್ಶನವನ್ನು ಉದ್ಘಾಟಿಸಿದರು. ಬಳ್ಳಾರಿಯ ತೋರಣಗಲ್ಲು ಜೆ.ಎಸ್.ಡಬ್ಲ್ಯೂ. ಹಿರಿಯ ಅಧಿಕಾರಿ ಅನೀಲಕುಮಾರ ಬಿ.ಸಿ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಬೆಂಗಳೂರಿನ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ಆಯುಕ್ತಾಲಯದ (ಆಡಳಿತ) ಜಂಟಿ ನಿರ್ದೇಶಕ ನಾಗೇಶ, ಕಲಬುರಗಿಯ (ತರಬೇತಿ) ಜಂಟಿ ನಿರ್ದೇಶಕ ರವೀಂದ್ರನಾಥ ಬಾಳಿ, ಕಲಬುರಗಿ ವಿಭಾಗೀಯ ಕಚೇರಿಯ (ಶಿಶಿಕ್ಷು) ಸಹಾಯಕ ನಿರ್ದೇಶಕ ಡಾ.ಶರಣಬಸಪ್ಪಾ ಸಡ್ಡು, ಕಲಬುರಗಿ ಸರ್ಕಾರಿ (ಮಹಿಳಾ) ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ಡಾ. ರುಬೀನಾ ಪರ್ವಿನ್ ಹಾಗೂ ಕೈಗಾರಿಕಾ ತರಬೇತಿ ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.