ಅಪ್ರೆಂಟಿಶಿಪ್ ತರಬೇತಿಯಿಂದ ಉದ್ಯೋಗಕ್ಕೆ ಅನುಕೂಲ

ರಾಯಚೂರು,ಆ.೨೨-
ಐಟಿಐ ಪಾಸಾದ ವಿದ್ಯಾರ್ಥಿಗಳು ಅಪ್ರೆಮಟಿಶಿಪ್ ತರಬೇತಿಯನ್ನು ಕಡ್ಡಾಯವಾಗಿ ಪಡೆದಿದ್ದಲ್ಲಿ ಮುಂದಿನ ದಿನಗಳಲ್ಲಿ ಖಾಯಂ ನೌಕರರಾಗಿ ಆಯ್ಕೆಯಾಗಲು ಅನುಕೂಲವಾಗುತ್ತದೆ ಎಂದು ದೇವದುರ್ಗ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಚಾರ್ಯ ಶಿವಕುಮಾರ ಅವರು ಹೇಳಿದರು.
ದೇವದುರ್ಗ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ನಡೆದ ಅಪ್ರೆಂಟಿಶಿಪ್ ಮೇಳವನ್ನುದ್ದೇಶಿಸಿ ಮಾತನಾಡಿ, ಅಪ್ರೆಂಟಿಶಿಪ್ ತರಬೇತಿಯಿಂದ ಐಟಿಐ ವಿದ್ಯಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ಉದ್ಯೋಗ ಪಡೆಯಲು ಬಹಳ ಅನುಕೂಲವಾಗಲಿದ್ದು, ಉದ್ಯೋಗಕ್ಕಾಗಿ ವಿದ್ಯಾರ್ಥಿಗಳಿಗೆ ಸೇವಾನುಭವವನ್ನು ಪರಿಗಣಿಸುತ್ತಾರೆ. ಅಪ್ರೆಂಟಿಶಿಪ್ ಮಾಡುವುದರಿಂದ ಸೇವಾನುಭವವು ದೊರೆಯಲಿದ್ದು, ವಿದ್ಯಾರ್ಥಿಗಳ ಕಲಿಕೆಯಲ್ಲೂ ಹೆಚ್ಚಿನ ಅನುಕೂಲವಾಗಲಿದೆ ಎಂದು ತಿಳಿಸಿದರು.
ಇದೇ ವೇಳೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಭಾರ ಪ್ರಾಚಾರ್ಯರು ಹಾಗೂ ತರಬೇತಿ ಅಧಿಕಾರಿ ಚಂದ್ರಭಾನು ಅವರು ಮಾತನಾಡಿ, ಅಪ್ರೆಂಟಿಶಿಪ್ ತರಬೇತಿಯಿಂದ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ಹೆಚ್ಚಳವಾಗುವುದಲ್ಲದೇ ಉಜ್ವಲ ಭವಿಷ್ಯವು ರೂಪುಗೊಳ್ಳುತ್ತದೆ ಎಂದು ತಿಳಿಸಿದರು.
ಮೇಳದಲ್ಲಿ ೩೧ ವಿದ್ಯಾರ್ಥಿಗಳು ಪಾಲ್ಗೊಂಡಿದ್ದು, ೩ ಕಂಪನಿಗಳು ವಿದ್ಯಾರ್ಥಿಗಳನ್ನು ತರಬೇತಿಗಾಗಿ ಆಯ್ಕೆ ಮಾಡಿಕೊಂಡರು.
ಈ ಸಂದರ್ಭದಲ್ಲಿ ಸಂಸ್ಥೆಯ ಕಚೇರಿ ಅಧೀಕ್ಷಕಿ ಜಾನಕಿ ಬಾಯಿ, ತಾಲೂಕು ಪಂಚಾಯತಿ ವ್ಯವಸ್ಥಾಪಕ ನಾಗರಾಜ, ವಿವಿಧ ಕಂಪನಿಗಳ ಮುಖ್ಯಸ್ಥರಾದ ಸಹದೇವ ಹೆಚ್.ಆರ್, ಜಾನ್ಪಾಲ್, ಸಂತೋಷ ದೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.