ಅಪ್ರಾಪ್ತ ಮಕ್ಕಳ ದಯಾಮರಣಕ್ಕೆ ನೆದರ್‌ಲ್ಯಾಂಡ್ ಒಪ್ಪಿಗೆ

ನೆದರ್ಲ್ಯಾಂಡ್ಸ್, ಏ.೧೫-ಅಸಹನೀಯವಾಗಿ ಮತ್ತು ಗಂಭೀರ ಸ್ವರೂಪದ ಕಾಯಿಲೆಗೆ ತುತ್ತಾಗಿರುವ ಒಂದರಿಂದ ೧೨ ವರ್ಷದೊಳಗಿನ ಅಪ್ರಾಪ್ತ ಮಕ್ಕಳ ದಯಾಮರಣಕ್ಕೆ ನೆದರ್ಲ್ಯಾಂಡ್ಸ್ ಸರ್ಕಾರ ಅನುಮತಿ ನೀಡಿದೆ.

ಬೆಲ್ಜಿಯಂಗೆ ಮಾದರಿಯಲ್ಲಿ ಈಗ ನೆದರ್ಲ್ಯಾಂಡ್ಸ್ ಸರ್ಕಾರವು ನಿನ್ನೆ ೧೨ ವರ್ಷದೊಳಗಿನ ಮಕ್ಕಳಿಗೆ ದಯಾಮರಣಕ್ಕೆ ಹಸಿರು ನಿಶಾನೆ ತೋರಿದ್ದು, ಈ ಮೂಲಕ ಒಂದು ವರ್ಷದೊಳಗಿನ ಶಿಶುಗಳಿಗೆ ಕಾನೂನುಬದ್ಧವಾಗಿದ್ದು, ಪೋಷಕರ ಅನುಮತಿಯೂ ಬೇಕಾಗಿದೆ.

ದಯಾಮರಣಕ್ಕೆ ಪ್ರಸ್ತುತ ೧೨ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಿತಿಯನ್ನು ತರಬೇಕೆಂದು ಡಚ್ ವೈದ್ಯರು ಹಲವಾರು ವರ್ಷಗಳ ವಿನಂತಿಯ ನಂತರ ಸಚಿವ ಸಂಪುಟ ಸಭೆಯಲ್ಲಿ ಈನಿರ್ಧಾರ ಹೊರ ಬಿದ್ದಿದೆ.

ನಿಯಮ ಬದಲಾವಣೆಗೆ ಸರ್ಕಾರವು ಸಂಸತ್ತಿನ ಅನುಮೋದನೆಯ ಅಗತ್ಯವಿಲ್ಲದೇ ಅಸ್ತಿತ್ವದಲ್ಲಿರುವ ಸುತ್ತೋಲೆ ಅನ್ನು ಮಾರ್ಪಡಿಸುವ ಅಗತ್ಯವಿದೆ. ಅಸಹನೀಯವಾಗಿ ಮತ್ತು ಗಂಭೀರ ಸ್ವರೂಪದ ಕಾಯಿಲೆಯಿಂದ ಬಳಲುತ್ತಿರುವ ೧೨ ವರ್ಷದೊಳಗಿನ ಮಕ್ಕಳಿಗೆ ಜೀವಿತಾವಧಿ ಮುಕ್ತಾಯ ಯೋಜನೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಈಗಾಗಲೇ ಬೆಲ್ಜಿಯಂನಲ್ಲಿ ಈ ಕಾನೂನು ಚಾಲ್ತಿಯಲ್ಲಿದ್ದು, ೨೦೧೪ ರಲ್ಲಿ ಚಿಕ್ಕ ಮಕ್ಕಳಿಗೆ ದಯಾಮರಣವನ್ನು ಅನುಮತಿಸುವ ಕಾನೂನನ್ನು ಅಂಗೀಕರಿಸಿದ ವಿಶ್ವದ ಮೊದಲ ದೇಶವಾಯಿತ್ತು. ಅಲ್ಲಿ ಮಗುವಿನ ಒಪ್ಪಿಗೆಯೊಂದಿಗೆ ಸಾಧ್ಯವಾಗದಿದ್ದರೆ, ವೈದ್ಯರೊಂದಿಗೆ ಸಮಾಲೋಚಿಸಿ ಪೋಷಕರ ಅನುಮತಿಯೊಂದಿಗೆ ದಯಾಮರಣವನ್ನು ನಡೆಸಬಹುದಾಗಿದೆ.

ಸರ್ಕಾರಿ ಅಂಕಿಅಂಶಗಳ ಪ್ರಕಾರ ೨೦೨೨ ರಲ್ಲಿ ಈಗಾಗಲೇ ನೆದರ್ಲ್ಯಾಂಡ್ಸ್ ನಲ್ಲಿ ಕೆಲ ಪ್ರಕರಣಗಳಲ್ಲಿ ೮,೭೦೦ ಕ್ಕೂ ಹೆಚ್ಚು ಜನರನ್ನು ದಯಾಮರಣ ಮಾಡಲಾಗಿದೆ. ಅವರಲ್ಲಿ ಹೆಚ್ಚಿನವರು ಗುಣಪಡಿಸಲಾಗದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು ಎಂದು ಉಲ್ಲೇಖಿಸಲಾಗಿದೆ.