ಅಪ್ರಾಪ್ತ ಬಾಲಿಕಿಯನ್ನು ನಂಬಿಸಿ ನಿರಾಕರಿಸಿದ ಯುವಕನಿಗೆ ಪೋಕ್ಸ್ ಕಾಯ್ದೆಯಡಿ ಶಿಕ್ಷೆ

ಕಾರಟಗಿ:ನ:19:ಅಪ್ರಾಪ್ತ ಬಾಲಕಿಯೊಬ್ಬಳನ್ನು ಪ್ರೀತಿಸಿ ಮದುವೆಯಾಗುವದಾಗಿ ನಂಬಿಸಿ ಅಪ್ರಾಪ್ತ ಬಾಲಕಿಯೊಂದಿಗೆ ದೈಹಿಕ ಸಂಪರ್ಕ ಬೆಳಸಿದ ಅರೋಪಿ, ನಂತರ ಬಾಲಕಿಯನ್ನು ಮದುವೆಯಾಗಲು ನಿರಾಕರಿಸಿದ್ದರಿಂದ ಅರೋಪಿಗೆ ಪೋಕ್ಸೊ ಕಾಯ್ದೆಯಡಿ ಬಂಧಿಸಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 10 ವರ್ಷಗಳ ಕಠಿಣ ಕಾರಗೃಹವಾಸ, ಹಾಗೂ 25.000 ಸಾವಿರ ರೂ ದಂಡ ವಿಧಿಸಿರುತ್ತದೆ. ಮತ್ತು ದಂಡ ಕಟ್ಟುವದು ತಪ್ಪಿದ್ದಲ್ಲಿ 6 ತಿಂಗಳು ಸಾದಾ ಜೈಲು ಶಿಕ್ಷೆಯನ್ನು ನೀಡಿ ಅದೇಶಿಸಿರುತ್ತದೆ,
ದಿ.19.03.2016 ರಂದು ಅಪ್ರಾಪ್ತ ಬಾಲಕಿ ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ದೂರು ಸಲ್ಲಿಸಿದ್ದು. ಅರೋಪಿ ಹನುಮೇಶ ಸಾ:ವಡ್ಡರಹಟ್ಟಿ ಹಾಲಿವಸ್ತಿ ಲಕ್ಷೀ ಕ್ಯಾಂಪ್. ಟಾಟಾ ಮ್ಯಾಜಿಕ್ ವಾಹನ ಚಾಲಕನಾಗಿದ್ದು ಇತನು ತನ್ನನ್ನು ಹಿಂಬಾಲಿಸುತ್ತಾ. ಪ್ರೀತಿಸುವದಾಗಿ ಮತ್ತು ಮದುವೆಯಾಗುವದಾಗಿ ಹೇಳುತ್ತಾ, ಮನವೊಲಿಸಿ ಮದುವೆಯಾಗುವದಾಗಿ ನಂಬಿಸಿ ದೈಹಿಕ ಸಂಪರ್ಕ ಮಾಡಿರುತ್ತಾನೆ,
ನಂತರ ಅರೋಪಿ ಮದುವೆಯಾಗಲು ನಿರಾಕರಿಸಿದ್ದರಿಂದ ಅಪ್ರಾಪ್ತ ಬಾಲಕಿಯು ವಿಷ ಸೇವಿಸಿದ್ದು, ಈ ಬಗ್ಗೆ ಗಂಗಾವತಿ ಗ್ರಾಮೀಣ ಠಾಣೆ ಗುನ್ನೆ ನಂ.106/2016 ಕಲಂ 376 ಐ.ಪಿ.ಸಿ ಮತ್ತು ಕಲಂ. 4 ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆಕಾಯ್ದೆ 2012 ನೇದ್ದರಲ್ಲಿ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿರುತ್ತದೆ,
ನಂತರ ಗಂಗಾವತಿ ಗ್ರಾಮೀಣ ವೃತ್ತದ ಸಿಪಿಐ ಪ್ರಭಾಕರ್ ಧರ್ಮಟ್ಟಿರವರು ಪ್ರಕರಣ ತನಿಖೆಯನ್ನು ಕೈಗೊಂಡ ಅರೋಪಿತನ ವಿರುದ್ದ ಕಲಂ.376 ಐಪಿಸಿ ಮತ್ತು ಕಲಂ 4.6 ಪೋಕ್ಸೋ ಕಾಯ್ದೆ 2012 ರ ಅಡಿಯಲ್ಲಿ ಅರೋಪಿ ವೆಸಗಿದ್ದಾನೆಂದು ದೋಷಿಸಿ ಮಾನ್ಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ಪೋಕ್ಸೋ) ಕೊಪ್ಪಳರವರಲ್ಲಿ ದೋಷರೋಪಣ ಪತ್ರ ಸಲ್ಲಿಸಿದ್ದರು,
ಸದರ ಪ್ರಕರಣವನ್ನು ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ಪೋಕ್ಸೋ)ರವರಲ್ಲಿ ವಿಚಾರಣೆ ನಡೆಸಿದ್ದರು.ವಿಶೇಷ ಸರಕಾರಿ ಅಭಿಯೋಜಕರು ಮಾನ್ಯ ಗೌರಮ್ಮ ಎಲ್.ದೇಸಾಯಿ (ಪೋಕ್ಸೋ) ಕೊಪ್ಪಳರವರು ಸರಕಾರದ ಪರವಾಗಿ ವಾದ ಮಾಡಿದ್ದರು.
ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ಪೋಕ್ಸೋ)ದ ನ್ಯಾಯಾಧಿಶರಾದ ಶ್ರೀ ಶಂಕರ ಜಾಲವಾಡಿರವರು ವಿಚಾರಣೆ ನಡೆಸಿದ ಬಳಿಕ ಅರೋಪಿತನು ತಪ್ಪಿಸ್ಥತನೆಂದು ಕಂಡ ಬಂದ ಹಿನ್ನೆಲೆಯಲ್ಲಿ ದಿ.18.11.2020 ಅರೋಪಿತನಿಗೆ 10 ವರ್ಷಗಳ ಕಠಿಣ ಕಾರಗೃಹವಾಸ ಹಾಗೂ ರೂ.25000 ಗಳು ದಂಡ ವಿಧಿಸಿದ್ದು, ದಂಡ ಕಟ್ಟುವುದು ತಪ್ಪಿದಲ್ಲಿ 6 ತಿಂಗಳು ಸಾದಾ ಜೈಲು ಶಿಕ್ಷೆಯನ್ನು ನೀಡಿ ಅದೇಶಸಿರುತ್ತಾರೆ,