ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ – ಕೊಲೆ ; ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಲು ಆಗ್ರಹ

ಜಗಳೂರು.ಏ‌.೧:- ದಲಿತ ಬಾಲಕಿ ಕುಮಾರಿ ಪಲ್ಲವಿ ಎಂಬ ವಿದ್ಯಾರ್ಥಿ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಮಾಡಿರುವ ಪ್ರಕರಣವನ್ನು ಪೊಲೀಸ್ ಇಲಾಖೆ ಯಿಂದ ಸಿಬಿಐಗೆ ವರ್ಗಾಯಿಸಿ ಅತ್ಯಾಚಾರ ಮಾಡಿರುವ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಜಗಳೂರು ತಾಲೂಕು ಕರ್ನಾಟಕ ದಲಿತ ಸಂಘರ್ಷ ಸಮಿತಿ ಹೋರಾಟ ಪ್ರೊ. ಕೃಷ್ಣಪ್ಪ ಬಣದ ಪದಾಧಿಕಾರಿಗಳು ಪಟ್ಟಣದ ಪ್ರವಾಸಿ ಮಂದಿರದಿಂದ ತಾಲೂಕು ಕಚೇರಿಯವರಿಗೆ ಪ್ರತಿಭಟನೆ ನಡೆಸುವ ಮುಖಾಂತರ ತಹಶೀಲ್ದಾರ್ ಸಂತೋಷ್ ಕುಮಾರ್. ಜಿ ಇವರಿಗೆ ಮನವಿ ಸಲ್ಲಿಸಿದರು. ನಂತರ ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ಮಲೆ ಮಾಚಿಕೆರೆ ಸತೀಶ್.ಬಿ ಮಾತನಾಡಿ ಬೆಂಗಳೂರುನಲ್ಲಿ ವಾಸ ಮಾಡುತ್ತಿರುವ ಅಪ್ರಾಪ್ತ ದಲಿತ ಬಾಲಕಿ ಕುಮಾರಿ ಪಲ್ಲವಿ ಶಿವಾನಂದರವರು ಉತ್ತರ ಕರ್ನಾಟಕದ ಮೂಲದವರಾಗಿದ್ದು ಇವರ ತಂದೆ ಬೆಂಗಳೂರುನಲ್ಲಿ ಡ್ರೈವರ್ ಕೆಲಸ ಮಾಡುತ್ತಿದ್ದರು ಪಲ್ಲವಿ ಅಲ್ಲೇ ವಿದ್ಯಾಭ್ಯಾಸ ಮಾಡುತ್ತಿದ್ದರುಕುಮಾರಿ ಪಲ್ಲವಿ ಶಿವಾನಂದ್ ರವರು ಪ್ರಥಮ ಪಿಯುಸಿ ವಿದ್ಯಾ ಭ್ಯಾಸ ಮಾಡುತ್ತಿದ್ದರು ಎಂದಿನಂತೆ  25-3-2023 ಕಾಲೇಜ್ ಮುಗಿಸಿಕೊಂಡು ಮರಳಿ ಮನೆಗೆ ಬರುತ್ತಿರುವಾಗ ಆಪ್ತ ಸ್ನೇಹಿತರಿಂದಲೆ ನಿರ್ಜನ ಪ್ರದೇಶದಲ್ಲಿ ಸಾಮೂಹಿಕ ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಘಟನೆ ನಡೆದಿದೆ. ಮೃತ ಪಲ್ಲವಿ ಶಿವಾನಂದರವರ ಮೃತ ದೇಹವನ್ನು ತಾತಗುಣಿ ಎಸ್ಟೇಟ್ ಬಳಿ ಇರುವ ಕಾಡಿನಲ್ಲಿ ಶವವನ್ನು ಬಿಸಾಡಿ ಹೋಗಿರು ತ್ತಾರೆ ಈ ಘಟನೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತಾರ ವಾದ ನಂತರ ಸ್ಥಳೀಯ ಕಗ್ಗಲಿಪುರ ಠಾಣೆ ಪೊಲೀಸರು ಘಟನೆ ನಡೆದು ಮೂರು ನಾಲ್ಕು ದಿನಗಳ ನಂತರ ಆರೋಪಿ ಯನ್ನು ಪತ್ತೆ ಹಚ್ಚಿ ನಂತರ ಯಾವುದೇ ತನಿಖೆಯನ್ನು ಕ್ರಮ ಬದ್ಧವಾಗಿ ನಡೆಸಿ ರುವುದಿಲ್ಲ ಮತ್ತು ಆರೋಪಿಗಳು ತನಿಖಾಧಿಕಾರಿಗಳ ಮೇಲೆ ತಮ್ಮ ಆರ್ಥಿಕ ಮತ್ತು ರಾಜಕೀಯ ಪ್ರಭಾವವನ್ನು ಬೀರುತ್ತಿರುವುದು ಮೇಲ್ನೋಟಕ್ಕೆ ಸಂಶಯ ಉಂಟಾಗಿದೆ ಈ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸದೆ ಇದ್ದಲ್ಲಿ ಕರ್ನಾಟಕ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಾಗುವುದು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ದಲಿತ ಮುಖಂಡ ರಾಜನಟ್ಟಿ ಚಂದ್ರಪ್ಪ. ಸಾಗಲಗಟ್ಟಿ ತಿಮ್ಮಣ್ಣ. ಉಮೇಶ್. ಹನುಮಂತಪ್ಪ.ಕೆಚ್ಚೆನಹಳ್ಳಿ ರಾಕೇಶ ಎಂ. ಮರೇನಹಳ್ಳಿ ಸಂದೀಪ್.ಜೀವನ.ಹುಚ್ಚುವನಹಳ್ಳಿ ಶಿವಕುಮಾರ್. ಬಸವರಾಜ್.ನಾಗರಾಜ. ನಾಗಪ್ಪ. ಆಸಗೋಡು ಪರಶುರಾಮ.ದೇವಿಕೆರೆ ಮಧು.ಕುರಿ ಜಯಣ್ಣ. ತಾನಾಜಿ ಗೋಸಾಯಿ. ಇತರರಿದ್ದರು