ಅಪ್ರಾಪ್ತ ಬಾಲಕಿ, ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ

ಚಿಂಚೋಳಿ,ಆ.22-ತಾಲ್ಲೂಕಿನ ತಾಂಡಾವೊಂದರಲ್ಲಿ 8 ವರ್ಷದ ಬಾಲಕಿ ಹಾಗೂ 5 ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪದಡಿ ಸಚಿನ್ ಡಾಕು ಚವ್ಹಾಣ್ (21) ಎಂಬಾತನನ್ನು ಪೆÇಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಬಾಲಕಿ ಮತ್ತು ಬಾಲಕನಿಗೆ ಚಾಕೊಲೇಟ್ ಕೊಡಿಸುವುದಾಗಿ ಹೇಳಿ ಆರೋಪಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಎಂದು ಆರೋಪಿಸಲಾಗಿದೆ.
ಬೆಳಕಿಗೆ ಬಂದಿದ್ದು ಹೇಗೆ?
ಒಮ್ಮೆ ತನ್ನ ತಾಯಿ ಬಳಿಯಿದ್ದ ಬಾಲಕನಿಗೆ ಆರೋಪಿ ಚಾಕೊಲೇಟ್ ಕೊಡಿಸುತ್ತೇನೆ ಬರುವಂತೆ ಕರೆದಿದ್ದಾನೆ. ಆಗ ಬಾಲಕ ನಿರಾಕರಿಸಿದಾಗ ತಾಯಿ ಮಗುವಿಗೆ ಮಾಮಾ ಚಾಕೊಲೇಟ್ ಕೊಡಿಸುತ್ತಾನಂತೆ ಹೋಗು ಎಂದಿದ್ದಾಳೆ. ಆಗ ಬಾಲಕ ನಡೆದ ಘಟನೆ ವಿವರಿಸಿದ್ದಾನೆ. ಬಾಲಕಿಯೂ ತನಗೂ ಆರೋಪಿ ಹೀಗೆ ಕರೆದೊಯ್ದು ದೌರ್ಜನ್ಯ ಎಸಗಿದ್ದಾನೆ ಎಂದು ತಾಯಿ ಬಳಿ ಹೇಳಿಕೊಂಡಿದ್ದಾಳೆ ಎನ್ನಲಾಗಿದೆ. ಮಕ್ಕಳ ಹೇಳಿಕೆ ಆಧರಿಸಿ ಕುಂಚಾವರಂ ಠಾಣೆಗೆ ದೂರು ನೀಡಲಾಗಿದೆ. ಬಾಲಕ ಮತ್ತು ಬಾಲಕಿಯನ್ನು ಕುಂಚಾವರಂ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ ಎಂದು ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ ತಿಳಿಸಿದ್ದಾರೆ.
ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಡಿವೈಎಸ್ಪಿ ಕೆ ಬಸವರಾಜ ತಿಳಿಸಿದ್ದಾರೆ.
ತಹಶೀಲ್ದಾರ ಸುಬ್ಬಣ್ಣ ಜಮಖಂಡಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗುರುಪ್ರಸಾದ, ಡಿವೈಎಸ್ಪಿ ಕೆ. ಬಸವರಾಜ, ಸರ್ಕಲ್ ಇನ್‍ಸ್ಪೆಕ್ಟರ್ ಅಂಬಾರಾಯ ಕಮಾನಮನಿ, ಸಬ್ ಇನ್ಸಪೆಕ್ಟÀರ್ ವೆಂಕಟೇಶ ನಾಯಕ ಭೇಟಿ ನೀಡಿ ಮಾಹಿತಿ ಪಡೆದರು.