ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ: ಆರೋಪಿಗೆ 10 ವರ್ಷ ಜೈಲು ಶಿಕ್ಷೆ

ವಿಜಯಪುರ,ಏ.1-ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದ ಆರೋಪಿಗೆ ಇಲ್ಲಿನ ಪೋಸ್ಕೊ ನ್ಯಾಯಾಲಯ 10 ವರ್ಷ ಜೈಲು ಶಿಕ್ಷೆ ಮತ್ತು 1 ಲಕ್ಷ ರೂಪಾಯಿ ದಂಡ ವಿಧಿಸಿದೆ.
ಅಂಬಣ್ಣ ಮಹಾದೇವ ದೇವನೂರ ಶಿಕ್ಷೆಗೆ ಗುರಿಯಾದ ಆರೋಪಿ.
ಆರೋಪಿ ಬಾಲಕಿಯ ತಾಯಿ ಜೊತೆ ಸಹಮತದ ಸಂಬಂಧ ಹೊಂದಿದ್ದ. ಆಕೆಯ ಸಹೋದರ ಮತ್ತು ತಾಯಿಯೊಂದಿಗೆ ವಾಸವಿದ್ದ. ಬಾಲಕಿ ಬಹಿರ್ದೆಸೆಗೆ ಹೋದಾಗ ಆಕೆಯ ಮೇಲೆ ಅತ್ಯಾಚಾರವೆಸಗಿದ್ದ. ಬಾಲಕಿಯ ಸಾಕ್ಷಿ ಆಧಾರದ ಮೇಲೆ ಕೂಲಂಕುಷವಾಗಿ ವಿಚಾರಣೆ ನಡೆಸಿ ನ್ಯಾಯಾಧೀಶೆ ಸವಿತಾ ಕುಮಾರಿ ಅವರು ಆರೋಪಿಗೆ 10 ವರ್ಷ ಜೈಲು ಶಿಕ್ಷೆ ಮತ್ತು 1 ಲಕ್ಷ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಸಂತ್ರಸ್ತ ಬಾಲಕಿ ಪರ ಸರ್ಕಾರಿ ಅಭಿಯೋಜಕ ವಿ.ಜಿ.ಹಗರಗೊಂಡ ವಾದ ಮಂಡಿಸಿದ್ದರು.