ಅಪ್ರಾಪ್ತ ಬಾಲಕಿಯ ಬಲತ್ಕಾರ ಕೊಲೆ:ಆರೋಪಿಗಳ ಬಂಧನಕ್ಕೆ ಆಗ್ರಹ

ಬಸವನಬಾಗೇವಾಡಿ:ಮಾ.31:ರಾಮನಗರ ಜಿಲ್ಲೆಯ ಬೇಡ್ ಸಮುದಾಯದ ಅಪ್ರಾಪ್ತ ವಿದ್ಯಾರ್ಥಿನಿ ನಿರ್ಭಯಳ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಕೊಲೆ ಮಾಡಿದ ಘಟನೆಯನ್ನು ತಾಲೂಕಾ ಬೇಡ ಜಂಗಮಭಿವೃದ್ದಿ ಸಂಘದ ಪದಾಧಿಕಾರಿಗಳು ತಹಶೀಲ್ದಾರ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.
ರಾಮನಗರ ಉಪವಿಭಾಗದ ಕಗ್ಗಲಿಪುರ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ವಿದ್ಯಾರ್ಥಿನಿ ನಿರ್ಭಯಳ ಅತ್ಯಾಚಾರ ಎಸಗಿ,ಕೊಲೆ ಸಂಭಂದಿಸಿ ಕುರಿತು ಪ್ರಕರಣ ದಾಖಲಾಗಿದೆ.ಅಪ್ರಾಪ್ತ ನಿರ್ಭಯಳ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಆರೋಪಿಗಳ ಶೀಘ್ರವಾಗಿ ಬಂಧಿಸಿ ಉಗ್ರ ಶೀಕ್ಷೆ ಗುರಿಪಡಿಸಬೇಕು.ಆರೋಪಿಗಳನ್ನು ಜಾಮಿನಿನ ಮೇಲೆ ಹೊರ ಬರದಂತೆ ಸರ್ಕಾರ ನೋಡಿಕೊಂಡು ನಿರ್ಭಳ ಕುಟುಂಬದವರಿಗೆ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಈ ಸಂದರ್ಬದಲ್ಲಿ ಸ್ಥಳೀಯ ವಿರಕ್ತಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ, ರುದ್ರಮುನಿ ಸಾರಂಗಮಠ,ಪಂಚಾಕ್ಷರಿ ಕಾಳಹಸ್ತೇಶ್ವರಮಠ,ಶಿವಲಿಂಗಯ್ಯ ತೆಗ್ಗಿನಮಠ,ಎಂ ಕೆ ಮಠ,ಎಸ್ ಆರ್ ಮಠ,ಪಿ ಎಲ್ ಹಿರೇಮಠ,ಸುಬಾಸ ಪುರಾಣಿಕಮಠ,ಸುಬಾಸ ಗಣಾಚಾರಿ,ಬಳಬಟ್ಟಿ ಸ್ವಾಮಿ ಸೇರಿದಂತೆ ಮುಂತಾದವರು ಇದ್ದರು.