ಅಪ್ರಾಪ್ತ ಬಾಲಕಿಯರನ್ನು ಅತ್ಯಾಚಾರ ವೆಸಗಿ ಕೊಲೆ ಮಾಡಿದ ಆರೋಪಿಗಳನ್ನು ಬಂಧಿಸುವಂತೆ ದಸಂಸ ರಾಜ್ಯಪಾಲರಿಗೆ ಮನವಿ ಸಲ್ಲಿಕೆ

ಸಿಂದಗಿ, ಮೇ.19-ಬಸನಬಾಗೇವಾಡಿ ತಾಲೂಕಿನ ಕುದರಸಾಲೋಡಗಿ ಗ್ರಾಮದ ರೇಣುಕಾ ಹಾಗೂ ಪ್ರೀತಿ ಎಂಬ ಅಪ್ರಾಪ್ತ ಬಾಲಕಿಯರನ್ನು ಯಾವದೋ ದುಷ್ಕರ್ಮಿಯರು ಅತ್ಯಾಚಾರ ವೆಸಗಿ ಕೊಲೆ ಮಾಡಿದ ಆರೋಪಿಗಳನ್ನು ಬಂಧಿಸಿ ಸಾಮೂಹಿಕ ಗಲ್ಲಿಗೇರಿಸುವಂತೆ ಆಗ್ರಹಿಸಿ ಕರ್ನಾಟಕ ದಲಿ ಸಂಘರ್ಷ ಸಮಿತಿ (ಸಾಗರಬಣ)ಯ ಪದಾಧಿಕಾರಿಗಳು ತಹಶೀಲ್ದಾರ ಕಾರ್ಯಾಲಯದ ಶಿರಸ್ತೆದಾರರ ಜಿ..ಎಸ್ ರೋಡಗಿ ಅವರ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ವಿದ್ಯಾರ್ಥಿ ಘಟಕದ ಸಂಚಾಲಕ ವೈ.ಸಿ.ಮಯೂರ ಮಾತನಾಡಿ, ಬಸನಬಾಗೇವಾಡಿ ತಾಲೂಕಿನ ಕುದರಸಾಲೋಡಗಿ ಗ್ರಾಮದ ರೇಣುಕಾ ಹಾಗೂ ಪ್ರೀತಿ ಎಂಬ ಅಪ್ರಾಪ್ತ ಬಾಲಕಿಯರನ್ನು ಅತ್ಯಾಚಾರ ವೆಸಗಿ ಕೊಲೆ ಮಾಡಿ ಯಾಳವಾರ ಗ್ರಾಮದ ಬಾವಿವೊಂದರಲ್ಲಿ ಶವಗಳನ್ನು ಬಿಸಾಕಿ ಪರಾರಿಯಾಗಿದ್ದು ಬೆಳಿಕಿಗೆ ಬಂದಿದೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕೊಲೆ ಮಾಡಿದ ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಗುರಿ ಪಡಿಸಿ ಗಲ್ಲು ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿದರು.
ಕೊಲೆಗಿಡಾದ ಬಾಲಕಿಯರ ಕುಟುಂಬಕ್ಕೆ ಪ್ರತ್ಯಕವಾಗಿ ರೂ.50ಲಕ್ಷ ರೂಪಾಯಿ ಸಹಯಾಧನ ಘೋಷಿಸಬೇಕು ಮತ್ತು ಇಬ್ಬರ ಕುಟುಂಬದ ಓರ್ವ ಸದಸ್ಯನಿಗೆ ಸರಕಾರಿ ನೌಕರಿ ಒದಗಿಸಿ ಸರಕಾರದಿಂದ ಸಿಗುವ ಸಹಾಯ ಸೌಲಭ್ಯಗಳನ್ನು ಮಂಜೂರು ಮಾಡಬೇಕು, ಅಲ್ಲದೆ ಸದರಿ ಕುಟುಂಬದ ಉಪಜೀವನಕ್ಕೆ 5 ಎಕರೆಯಂತೆÉ ಸರಕಾರಿ ಗೋಮಾಳ ಜಮೀನು ಮಂಜೂರಿಸಿ ಕೊಡಬೇಕು ಮತ್ತು ನೊಂದ ಕುಟುಂಬಕ್ಕೆ ಹಾಗೂ ದಲಿತರಿಗೆ ಸೂಕ್ತ ರಕ್ಷಣೆ ನೀಡಬೇಕು. ಸರಕಾರ ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ಕಠಿಣ ಕಾನೂನು ರೂಪಿಸಬೇಕು ಇಲ್ಲದಿದ್ದರೆ ರಾಜ್ಯವ್ಯಾಪಿ ಉಗ್ರವಾದ ಹೋರಾಟ ರೂಪಿಸುವುದು ಅನಿವಾರ್ಯವಾಗುತ್ತದೆ ಎಂದು ಏಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಶರಣು ಚಲವಾದಿ, ನೀಲಕಂಠ ಹೊಸಮನಿ, ಶಿವಪುತ್ರ ಮೇಲಿನಮನಿ, ಜೈಭೀಮ ತಳಕೇರಿ, ಗುಂಡು ಬಾಣಿ ಸೇರಿದಂತೆ ಅನೇಕರಿದ್ದರು.