ಅಪ್ರಾಪ್ತ ಬಾಲಕನ ಬ್ಲಾಕ್‌ಮೇಲ್:ನಾಲ್ವರು ಖದೀಮರ ಬಂಧನ

ಬೆಂಗಳೂರು,ಏ.೩೦-ಪಬ್‌ಜೀ ಹಾಗೂ ಡ್ರೀಮ್-೧೧ ಗೇಮ್‌ಗಳ ಚಟ ಅಂಟಿಸಿಕೊಂಡ ಅಪ್ರಾಪ್ತ ಬಾಲಕನನ್ನು ಬ್ಲಾಕ್ ಮೇಲ್ ಮಾಡಿ ನಗದು, ಚಿನ್ನ ಸೇರಿ ೪೧.೫೦ ಲಕ್ಷ ಮೌಲ್ಯದ ವಸ್ತುಗಳನ್ನು ಪಡೆದಿದ್ದ ನಾಲ್ವರು ಖತರ್ನಾಕ್ ಖದೀಮರನ್ನು ರಾಜರಾಜೇಶ್ವರಿನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಗಂಗಾವತಿಯ ಅರ್ಹಾಳ್ ರಸ್ತೆಯ ಕಾರ್ತಿಕ್ ಕುಮಾರ್ (೪೨)ಸಿಬಿಎಸ್ ವೃತ್ತದ ಸುನೀಲ್(೩೦)ರಾಜರಾಜೇಶ್ವರಿನಗರದ ವೆಮನ್ (೧೯)ಕೆಂಗೇರಿ ಉಪನಗರದ ವಿವೇಕ್(೧೯)ಬಂಧಿತ ಆರೋಪಿಗಳಾಗಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಬಂಧಿತರಲ್ಲಿ ಇಬ್ಬರಿಂದ ಚಿನ್ನದ ವಡವೆಗಳನ್ನು ಕರಗಿಸಿದ್ದ ೩೦೨ ಗ್ರಾಂ ತೂಕದ ೨ ಚಿನ್ನದ ಗಟ್ಟಿ ಹಾಗೂ ಮತ್ತಿಬ್ಬರಿಂದ ಚಿನ್ನವನ್ನು ಮಾರಾಟ ಮಾಡಿ ಗಳಿಸಿದ್ದ ೨೩,೫೦ ಲಕ್ಷ ನಗದು ಸೇರಿ ೪೧.೫೦ ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದರು.ರಾಜರಾಜೇಶ್ವರಿನಗರದ ಐಡಿಯಲ್ ಹೋಮ್ಸ್ ನ ನಿವಾಸಿಯೊಬ್ಬರು ಕಳೆದ ಏ.೧೫ ರಂದು ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿದ್ದು,ಅದರಲ್ಲಿ ಅವರ ಮಗ ಹಾಗೂ ಆತನ ಸ್ನೇಹಿತರಿಬ್ಬರು ಒಂದೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಎಲ್ಲರೂ ಅಪ್ರಾಪ್ತ ವಯಸ್ಸಿನವರಾಗಿರುತ್ತಾರೆ.ದೂರುದಾರರ ಪುತ್ರ ಮೊಬೈಲ್‌ನಲ್ಲಿ ಆನ್‌ಲೈನ್ ಮುಖಾಂತರ ಬಿಜಿಎಂಐ, ಪಬ್‌ಜೀ ಮತ್ತು ಡ್ರೀಮ್-೧೧ ಗೇಮ್‌ಗಳನ್ನು ಆಟವಾಡುತ್ತಿರುವುದನ್ನು ಗಮನಿಸಿ ಈ ಬಗ್ಗೆ ಆತನ ತಂದೆ-ತಾಯಿಗೆ ತಿಳಿಸುವುದಾಗಿ ಸ್ನೇಹಿತರಿಬ್ಬರು ಬೆದರಿಸಿದ್ದರು.

ಇದರ ಬಗ್ಗೆ ಸುಮ್ಮನಿರಲು ಹಣ ನೀಡಬೇಕೆಂದು ಕೇಳಿದ್ದು ದೂರುದಾರರ ಪುತ್ರ ತನ್ನ ಬಳಿ ಹಣವಿಲ್ಲವೆಂದು ತಿಳಿಸಿದಾಗ ಸ್ನೇಹಿತರಿಬ್ಬರು, ಮನೆಯಲ್ಲಿರುವ ಚಿನ್ನದ ಆಭರಣಗಳನ್ನು ತಂದು ಕೊಡುವಂತೆ ಕೇಳಿ ಬೆದರಿಸಿದ್ದರು.ಹೆದರಿದ ದೂರುದಾರರ ಪುತ್ರ ಮನೆಯಲ್ಲಿದ್ದ ಸುಮಾರು ೬೦೦-೭೦೦ ಗ್ರಾಂ ಚಿನ್ನದ ಆಭರಣಗಳನ್ನು ತಂದು ಸ್ನೇಹಿತರಿಬ್ಬರಿಗೆ ನೀಡಿರುವುದನ್ನು ದಾಖಲಿಸಲಾಗಿತ್ತು.ಪ್ರಕರಣದ ತನಿಖೆಯನ್ನು ಮುಂದುವರೆಸಿ, ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕರಿಂದ ಮಾಹಿತಿಯನ್ನು ಸಂಗ್ರಹಿಸಿ, ದೂರುದಾರನ ಪುತ್ರ ಮತ್ತವನ ಸ್ನೇಹಿತರಿಬ್ಬರಿಗೂ ಚಿನ್ನದ ಆಭರಣಗಳನ್ನು ತಂದು ಒಪ್ಪಿಸಿದನ್ನು ಸ್ನೇಹಿತರಿಬ್ಬರು ಒಪ್ಪಿಕೊಂಡಿರುತ್ತಾರೆ.ಆ ಚಿನ್ನದ ವಡವೆಗಳನ್ನು ಅವರಿಗೆ ಪರಿಚಯವಿರುವ ನಾಲ್ವರಿಗೆ ನೀಡಿದ್ದಾಗಿ ತಿಳಿಸಿದ್ದು,ಈ ಸಂಬಂಧ ಕಾರ್ಯಾಚರಣೆ ಕೈಗೊಂಡು ಕಳೆದ ಏ.೧೮ ರಂದು ಗಂಗಾವತಿಯ ಸಿಬಿಎಸ್ ಸರ್ಕಲ್ ಬಳಿ ಕಾರ್ತಿಕ್ ಹಾಗೂ ಸುನೀಲ್ ನನ್ನು ಬಂಧಿಸಿ ಅವರಿಬ್ಬರೂ ವಿಚಾರಣೆಯಲ್ಲಿ ನೀಡಿದ ಮಾಹಿತಿಯನ್ನು ಆಧರಿಸಿ ರಾಜರಾಜೇಶ್ವರಿನಗರದಲ್ಲಿ ವೆಮನ್ ಮತ್ತು ಕೆಂಗೇರಿಯಲ್ಲಿ ವಿವೇಕ್ ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಹತ್ತು ದಿನಗಳ ಕಾಲ ಕಸ್ಟಡಿಗೆ ತೆಗೆದುಕೊಂಡು ತನಿಖೆಯನ್ನು ಮುಂದುವರೆಸಿ, ನಾಲ್ವರಿಂದ ಚಿನ್ನದ ವಡವೆಗಳನ್ನು ಕರಗಿಸಿದ್ದ ೩೦೨ ಗ್ರಾಂ ತೂಕದ ೨ ಚಿನ್ನದ ಗಟ್ಟಿ ೨೩,೫೦ ಲಕ್ಷ ನಗದು ಸೇರಿ ೪೧.೫೦ ಲಕ್ಷ ಮೌಲ್ಯದ .

ಆರ್. ಆರ್. ನಗರ ಪೊಲೀಸರು ಆರೋಪಿತನಿಂದ ವಶಪಡಿಸಿಕೊಂಡು ನಗದು, ಚಿನ್ನಾಭರಣಗಳನ್ನು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಅವರು ಪರಿಶೀಲನೆ ನಡೆಸಿದರು. ಪೊಲೀಸ್ ಅಧಿಕಾರಿಗಳು ಇದ್ದಾರೆ.

ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದರು.ಪಶ್ಚಿಮ ವಿಭಾಗದ ಉಪ ಪೊಲೀಸ್ ಆಯುಕ್ತ ಗಿರೀಶ್ ಎಸ್,ಎಸಿಪಿ ಭರತ್.ಎಸ್.ರೆಡ್ಡಿ ಅವರ ಮಾರ್ಗದರ್ಶನದಲ್ಲಿ ರಾಜರಾಜೇಶ್ವರಿನಗರ ಪೊಲೀಸ್ ಪೊಲೀಸ್ ಇನ್ಸ್ ಪೆಕ್ಟರ್ ಮತ್ತವರ ಸಿಬ್ಬಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ಕಮೀಷನರ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತರಾದ ಸತೀಶ್ ಕುಮಾರ್, ರಮಣ್ ಗುಪ್ತ, ಚಂದ್ರಗುಪ್ತ ಅವರಿದ್ದರು.