ಅಪ್ರಾಪ್ತೆ ಮೇಲೆ ಯುವಕನ ಅತ್ಯಾಚಾರ-ದೂರು.

ಕೂಡ್ಲಿಗಿ.ಡಿ.21:- ನೀರು ತರಲೋದ 16ವರ್ಷದ ಅಪ್ರಾಪ್ತೆ ಬಾಯಿಗೆ ಬಟ್ಟೆ ತುರುಕಿ ಅಲ್ಲೇ ಇದ್ದ ಕೋಳಿಫಾರಂಗೆ ಕರೆದೊಯ್ದ 20 ವರ್ಷದ ಯುವಕ ಅತ್ಯಾಚಾರವೆಸಗಿರುವ ಘಟನೆ ತಾಲೂಕಿನ ಅಮಲಾಪುರದಲ್ಲಿ ಶನಿವಾರ ಮಧ್ಯಾಹ್ನ ನಡೆದಿರುವ ಬಗ್ಗೆ ತಡವಾಗಿ ಬೆಳಕಿಗೆ ಬಂದಿದೆ. ಅಮಲಾಪುರದ ಓಬಳೇಶ(20)ಎಂಬ ಯುವಕನೇ ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ ಆರೋಪಿಯೆಂದು ಹೇಳಲಾಗುತ್ತಿದ್ದು ತಲೆಮರೆಸಿಕೊಂಡಿದ್ದಾನೆಂದು ಹೇಳಲಾಗುತ್ತಿದೆ ಬಳ್ಳಾರಿಯ ಮದರಸಾದಲ್ಲಿ ಓದುತಿದ್ದ 16ವರ್ಷದ ಮಗಳನ್ನು ಕೊರೋನಾ ಮಹಾಮಾರಿಯಿಂದ ಶಾಲಾಕಾಲೇಜ್ ಬಂದ್ ಮಾಡಿದ್ದರಿಂದ ಅಮಲಾಪುರದ ತೋಟದಲ್ಲಿ ಕೂಲಿಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ ತಂದೆ ತಾಯಿ ಕರೆದುಕೊಂಡು ಬಂದು ಅವರ ಹತ್ತಿರ ಇಟ್ಟುಕೊಂಡಿದ್ದು ಶನಿವಾರ ಮಧ್ಯಾಹ್ನ 3ಗಂಟೆ ಸಮಯದಲ್ಲಿ ನೀರಿನ ತೊಟ್ಟಿಯಿಂದ ಒಮ್ಮೆ ನೀರು ತಂದು ಇನ್ನೊಮ್ಮೆ ತರಲು ಹೋದ ಮಗಳು ಗಂಟೆಯಾದರೂ ಮನೆಗೆ ಬರದಿದ್ದರಿಂದ ಮಗಳನ್ನು ಹುಡುಕಿಕೊಂಡು ಹೋದಾಗ ಅಲ್ಲಿರುವ ಓರ್ವ ವ್ಯಕ್ತಿ ನಿನ್ನ ಮಗಳನ್ನು ಕೋಳಿ ಫಾರಂ ಕಡೆ ಓಬಳೇಶನು ಕರೆದುಕೊಂಡು ಹೋಗಿರುವುದಾಗಿ ತಿಳಿಸಿದ್ದರಿಂದ ಅಲ್ಲಿಗೆ ಹೋಗಿ ನೋಡಲಾಗಿ ಓಬಳೇಶನು ಅಲ್ಲಿಂದ ತಪ್ಪಿಸಿಕೊಂಡು ಹೋಗಿದ್ದು ಮಗಳ ಬಾಯಿಗೆ ಬಟ್ಟೆ ಕಟ್ಟಿದ್ದು ನಂತರ ತಂದೆ ತಾಯಿ ಬಟ್ಟೆ ತೆಗೆದು ಕೇಳಲಾಗಿ ನನ್ನನ್ನು 5ತಿಂಗಳಿಂದ ಸನ್ನೆಮಾಡಿ ಕರೆಯುತ್ತಿದ್ದು ಇಂದು ನೀರಿಗೆ ಹೋದ ನನಗೆ ಬಾಯಿಗೆ ಬಟ್ಟೆ ಕಟ್ಟಿ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆಂದು ಮಗಳು ಹೇಳಿದಂತೆ ಅಪ್ರಾಪ್ತೆಯ ತಾಯಿ ಶನಿವಾರ ರಾತ್ರಿ ನೀಡಿದ ದೂರಿನಂತೆ ಹೊಸಹಳ್ಳಿ ಪೊಲೀಸ್ ಠಾಣೆಯ ಪಿಎಸ್ಐ (ಅಪರಾಧ )ನಾಗರತ್ನ ಪ್ರಕರಣ ದಾಖಲಿಸಿಕೊಂಡಿದ್ದು ತಲೆಮರೆಸಿಕೊಂಡ ಆರೋಪಿ ಪತ್ತೆ ಕಾರ್ಯ ನಡೆಯುತ್ತಿರುವ ಬಗ್ಗೆ ಪೊಲೀಸರು ತಿಳಿಸಿದ್ದಾರೆ.