ಅಪ್ರಾಪ್ತೆ ಅಪಹರಿಸಿದ ಆರೋಪಿ ಬಂಧನ. 


ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಜ. 17 :- ಕುರಿಗಳ ಹಟ್ಟಿಯಲ್ಲಿದ್ದ ಅಪ್ರಾಪ್ತೆಯನ್ನ ಅಪಹರಿಸಿಕೊಂಡು ಹೋಗಿದ್ದಾನೆಂದು ಆಕೆಯ ತಂದೆ ನೀಡಿದ ದೂರಿನಂತೆ ತನಿಖೆ ಕೈಗೊಂಡ ಕೂಡ್ಲಿಗಿ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಡೇಲಡಕು ದೊಡ್ಡಗೊಲ್ಲರಹಟ್ಟಿಯ ಗೋವಿಂದಪ್ಪ (22) ಬಂಧಿತ ಆರೋಪಿಯಾಗಿದ್ದಾನೆ. ಈತನು ತಾಲೂಕಿನ ಭತ್ತನಹಳ್ಳಿ ಗ್ರಾಮದಿಂದ ಅಕ್ಕಾಪುರದವರೆಗೆ ಕುರಿಹಟ್ಟಿ ಮಾಡಿಕೊಂಡು ಇದ್ದು ಅಲ್ಲಿದ್ದ 17ವರ್ಷದ ಅಪ್ರಾಪ್ತೆ ಮಗಳನ್ನು ಪುಸಲಾಯಿಸಿ ಸೆಪ್ಟೆಂಬರ್ 30ರಂದು ಭತ್ತನಹಳ್ಳಿ ಕ್ರಾಸ್ ಹತ್ತಿರದ ಕುರಿಹಟ್ಟಿಯಿಂದ ಅಪಹರಿಸಿಕೊಂಡು ಹೋಗಿದ್ದು ಅವರನ್ನು ಎಲ್ಲಾ ಕಡೆ ಹುಡುಕಾಡಿದರೂ ಸಿಗದೇ ಇದ್ದು ಠಾಣೆಗೆ ದೂರು ಕೊಡಲು ಮುಂದಾದಾಗ ಗ್ರಾಮದಲ್ಲಿ ಹಿರಿಯರ ಸಮ್ಮುಖದಲ್ಲಿ ನಡೆದ ಪಂಚಾಯತಿಯಲ್ಲಿ ದೂರು ನೀಡಬೇಡಿ ಹುಡುಕಿಕೊಂಡು ಬರುವುದಾಗಿ ಹೇಳಿದ ಅವನ ಸಂಬಂದಿಕರು ಹುಡುಕಿಕೊಡದೆ ಇದ್ದುದರಿಂದ ನವೆಂಬರ್ 8ರಂದು ಅಪ್ರಾಪ್ತೆ ತಂದೆ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದ್ದು ಈ ಪ್ರಕರಣವನ್ನು ಬೆನ್ನತ್ತಿದ ಪಿಎಸ್ಐ ಹಾಗೂ ಸಿಬ್ಬಂದಿ ತನಿಖಾ ಕಾರ್ಯಾಚರಣೆ ಕೈಗೊಂಡಿದ್ದರೂ ಮರೆಮಾಚಿಕೊಂಡು ಹೋಗಿ ಉಡುಪಿ ಭಾಗದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಮಾಹಿತಿ ಆಧಾರಿಸಿದ ಕೂಡ್ಲಿಗಿ ಪೊಲೀಸ್ ಸಿಬ್ಬಂದಿ ಅಂಜಿನಪ್ಪ ಹಾಗೂ ಮಹಿಳಾ ಪೊಲೀಸ್ ಸಿಬ್ಬಂದಿ ಮಹಾಲಕ್ಷ್ಮಿ ಅಪ್ರಾಪ್ತೆ ಅಪಹರಿಸಿದ ಆರೋಪಿಯನ್ನು ಕೂಡ್ಲಿಗಿ ಡಿವೈಎಸ್ ಪಿ ಹರೀಶರೆಡ್ಡಿ, ಕೂಡ್ಲಿಗಿ ಸಿಪಿಐ ವಸಂತ ವಿ ಅಸೋದೆ ಹಾಗೂ ಕೂಡ್ಲಿಗಿ ಪಿಎಸ್ಐ ಧನುಂಜಯ ಅವರ ಮಾರ್ಗದರ್ಶನದಲ್ಲಿ ಬಂಧಿಸಲಾಗಿದೆ ಎಂದು ತಿಳಿದಿದೆ.