
ಕಲಬುರಗಿ,ಸೆ 15: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಸಾಬೀತಾದ್ದರಿಂದ ಓರ್ವನಿಗೆ ಇಲ್ಲಿನ ಅಪರ ಜಿಲ್ಲಾ ಮತ್ತು ಸತ್ರ ( ವಿಶೇಷ ಪೋಕ್ಸೋ) ನ್ಯಾಯಾಲಯ-ಎಫ್.ಟಿ.ಎಸ್.ಸಿ 1 ನ್ಯಾಯಾಲಯ 10 ವರ್ಷ ಜೈಲುಶಿಕ್ಷೆ ಮತ್ತು 10 ಸಾವಿರ ರೂ ದಂಡ ವಿಧಿಸಿದೆ.
ಗಿರಿಸ್ವಾಮಿ ಯಂಕಪ್ಪ ಹೊನಗುಂಟಿ ಶಿಕ್ಷೆಯೊಳಗಾದ ವ್ಯಕ್ತಿ.ಅಪ್ರಾಪ್ತೆಯ ಸ್ನೇಹ ಬೆಳೆಸಿ,ಮದುವೆಯಾಗುವದಾಗಿ ನಂಬಿಸಿ ಒತ್ತಾಯದಿಂದ ರಾಜ್ಯದ ವಿವಿಧ ಊರುಗಳಿಗೆ ಕರೆದುಕೊಂಡು ಹೋಗಿ 2021 ರ ಸೆ. 20 ರಂದು ನಗರದ ಲಾಡ್ಜ್ ವೊಂದರಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ.ಯಾರಿಗಾದರೂ ಹೇಳಿದರೆ ನಿನ್ನ ಮರ್ಯಾದೆ ಹಾಳು ಮಾಡುತ್ತೇನೆ ಎಂದು ಬೆದರಿಸಿದ್ದ. ನಂತರ ಅವಳನ್ನು ಒತ್ತಾಯದಿಂದ ಮದುವೆ ಸಹ ಆಗಿದ್ದ.ಈ ಕುರಿತು ಆರ್‍ಜಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿ,ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲಾಗಿತ್ತು. ವಿಚಾರಣೆ ನಡೆಸಿದ ಅಪರ ಜಿಲ್ಲಾ ಮತ್ತು ಸತ್ರ ( ವಿಶೇಷ ಪೋಕ್ಸೋ) ನ್ಯಾಯಾಲಯ-ಎಫ್.ಟಿ ಎಸ್ ಸಿ 1 ನ್ಯಾಯಾಲಯದ ನ್ಯಾಯಾಧೀಶ ಯಮನಪ್ಪ ಬಮ್ಮಣಗಿ ಅವರು 10 ವರ್ಷ ಜೈಲು ಶಿಕ್ಷೆ 10 ಸಾವಿರ ರೂ ದಂಡ ವಿಧಿಸಿದ್ದಾರೆ.ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ಶಾಂತವೀರ ಬಿ.ತುಪ್ಪದ ಅವರು ವಾದ ಮಂಡಿಸಿದ್ದರು.