ಚಿತ್ತೂರು(ಆಂಧ್ರಪ್ರದೇಶ),ಏ.೨-ಗಂಗವರಂ ಮಂಡಲ್ ಪ್ರದೇಶದಲ್ಲಿ ಅಪ್ರಾಪ್ತ ವಿದ್ಯಾರ್ಥಿನಿಯನ್ನು ಮದುವೆಯಾಗಿ ವಂಚಿಸಿದ ಖತರ್ನಾಕ್ ಶಿಕ್ಷಕನನ್ನು ಬಂಧಿಸಲಾಗಿದೆ.ಆರೋಪಿ ಶಿಕ್ಷಕ ಚಲಪತಿ (೩೩) ವಿರುದ್ಧ ಮಕ್ಕಳ ಲೈಂಗಿಕ ಅಪರಾಧಗಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ, ಆರೋಪಿಯು ಖಾಸಗಿ ಅಂತರ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದಾನೆ.
ಆರೋಪಿಗೆ ಈಗಾಗಲೇ ಮದುವೆಯಾಗಿದ್ದು, ಓರ್ವ ಮಗಳಿದ್ದಾಳೆ. ೧೨ನೇ ತರಗತಿಯಲ್ಲಿ ಓದುತ್ತಿರುವ ೧೭ ವರ್ಷದ ಬಾಲಕಿಯೊಂದಿಗೆ ಈತ ಮದುವೆಯಾಗಿದ್ದಾನೆ.
ಬಾಲಕಿಗೆ ಅಂತಿಮ ಪರೀಕ್ಷೆ ಮುಗಿದ ಬಳಿಕ ಆರೋಪಿ ಚಲಪತಿ ಸುಳ್ಳು ಹೇಳಿ ಬಾಲಕಿಯನ್ನು ತಿರುಪತಿಗೆ ಕರೆದುಕೊಂಡು ಹೋಗಿದ್ದ. ಆರೋಪಿಯು ಬಾಲಕಿಗೆ ತಾನು ಪ್ರಾಮಾಣಿಕನಾಗಿದ್ದು, ತನ್ನನ್ನು ನಂಬುವಂತೆ ಆಕೆಯನ್ನು ಕೇಳಿಕೊಂಡಿದ್ದಾನೆ. ನಂತರ, ಅವರಿಬ್ಬರೂ ಅಲ್ಲಿರುವ ದೇವಸ್ಥಾನದಲ್ಲಿ ಮದುವೆಯಾದರು. ನಂತರ, ಹುಡುಗಿ ಚಲಪತಿಯ ವರ್ತನೆಯಲ್ಲಿ ಬದಲಾವಣೆಯನ್ನು ಗಮನಿಸಿದಳು. ನಂತರ ಹುಡುಗಿ ತನ್ನ ಪೋಷಕರಿಗೆ ಸಂಪೂರ್ಣ ಘಟನೆಯ ಬಗ್ಗೆ ತಿಳಿಸಿದಳು. ಮೊನ್ನೆ ರಾತ್ರಿ ತನ್ನ ಹೆತ್ತವರೊಂದಿಗೆ ಬಾಲಕಿ ಗಂಗವರಂ ಪೊಲೀಸ್ ಠಾಣೆಗೆ ತಲುಪಿ ಎಫ್‌ಐಆರ್ ದಾಖಲಿಸಿದ್ದಾಳೆ.ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.