ಅಪ್ರಾಪ್ತೆಗೆ ನಂಬಿಸಿ ಅತ್ಯಾಚಾರ -ದೂರು.

ಕೂಡ್ಲಿಗಿ.ನ. 15:- ಮದುವೆಯಾಗುವುದಾಗಿ ನಂಬಿಸಿ ಅರಿಶಿನ ತಾಳಿ ಕಟ್ಟಿ ಸಂಬಂದಿಕರ ಮನೆಗೆ ಕರೆದೊಯ್ದ 20 ವರ್ಷದ ಯುವಕನೋರ್ವ ಅತ್ಯಾಚಾರವೆಸಗಿದ್ದಾನೆಂದು ನೊಂದ 16ವರ್ಷದ ಅಪ್ರಾಪ್ತೆ ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದಂತೆ ಶನಿವಾರ ಪ್ರಕರಣ ದಾಖಲಾಗಿದೆ.
ಪಟ್ಟಣದ ರಾಜೀವಗಾಂಧಿ ನಗರದ ಅಪ್ರಾಪ್ತೆ ಅತ್ಯಾಚಾರಕ್ಕೊಳಗಾದವಳಾಗಿದ್ದಾಳೆ ಈಕೆ ನೀಡಿದ ದೂರಿನಂತೆ ಶುಕ್ರವಾರ ಸಂಜೆ ಪಟ್ಟಣದ 20ವರ್ಷದ ಚೌಡಪ್ಪ ಎಂಬ ಯುವಕನು ನಿನ್ನನ್ನು ಪ್ರೀತಿಸುತ್ತೇನೆ ಬಿಟ್ಟು ಇರಲು ಆಗುತ್ತಿಲ್ಲ ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿ ರಾಜೀವಗಾಂಧಿ ನಗರದ ಬಸ್ ನಿಲ್ದಾಣಕ್ಕೆ ಕರೆದು ಅಲ್ಲಿಂದ ಬಸ್ಸಿನಲ್ಲಿ ಹನುಮನಹಳ್ಳಿಗೆ ಕರೆದುಕೊಂಡು ಹೋಗಿ ಅಲ್ಲಿನ ಸಮೀಪದ ಶ್ರೀ ಗಾಳೆಮ್ಮನ ದೇವಸ್ಥಾನದಲ್ಲಿ ಅರಿಶಿನದ ತಾಳಿಕಟ್ಟಿ ನಂತರ ನಾಗೇನಹಳ್ಳಿಯಲ್ಲಿ ಅವನ ಸಂಬಂದಿಕರ ಮನೆಗೆ ಕರೆದೊಯ್ದು ಅತ್ಯಾಚಾರವೆಸಗಿದ್ದಾನೆಂದು ಅಪ್ರಾಪ್ತೆ ಯುವಕನ ಮೇಲೆ ಶನಿವಾರ ಸಂಜೆ ನೀಡಿದ ದೂರಿನಂತೆ ಕೂಡ್ಲಿಗಿ ಠಾಣಾ ಪಿಎಸ್ಐ ತಿಮ್ಮಣ್ಣ ಚಾಮನೂರ್ ಪ್ರಕರಣ ದಾಖಲಿಸಿಕೊಂಡಿದ್ದರೆಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.