ಅಪ್ರತಿಮ ವೈರಾಗ್ಯನಿಧಿ ಅಕ್ಕಮಹಾದೇವಿ

ಕಲಬುರಗಿ:ಮೇ.3:ಅಕ್ಕಮಹಾದೇವಿ ಜಗತ್ತು ಕಂಡ ಅಪರೂಪದ ಸ್ತ್ರೀ ತತ್ತ್ವಜ್ಞಾನಿ ಹನ್ನೆರಡನೆಯ ಶತಮಾನದಲ್ಲಿ ಶರಣರು ಸ್ತ್ರೀಯರಿಗೆ ಅತ್ಯಂತ ಗೌರವದ ಸ್ಥಾನವನ್ನು ನೀಡಿದಂತಹ ಸುವರ್ಣಯುಗ. ಶರಣ ಶಿವಯೋಗಿ ಸಿದ್ಧರಾಮೇಶ್ವರರು ಹೆಣ್ಣು ಹೆಣ್ಣಲ್ಲ ಹೆಣ್ಣ ಸಾಕ್ಷಾತ್ ಕಪಿಲ ಸಿದ್ಧಮಲ್ಲಿಕಾರ್ಜುನ ಎಂದು ಹೇಳಿ ಸ್ತ್ರೀಯನ್ನು ಅತ್ಯಂತ ಪೂಜ್ಯ ಭಾವದಿಂದ ಕಾಣುತ್ತಾರೆ.

ಕಲಬುರಗಿ ಬಸವ ಸಮಿತಿಯಲ್ಲಿ ರವಿವಾರ ಸಂಜೆ 6.00 ಗಂಟೆಗೆ ನಡೆದ 668ನೆಯ ಆನ್‍ಲೈನ ಅರಿವಿನ ಮನೆ ಕಾರ್ಯಕ್ರಮದಲ್ಲಿ ಅಕ್ಕಮಹಾದೇವಿ ಜಯಂತಿ ಪ್ರಯುಕ್ತ ಅನುಭಾವ ನೀಡಿದ ಬೀದರಿನ ಬಸವ ಗಿರಿಯ ಪೂಜ್ಯ ಅಕ್ಕ ಗಂಗಾಂಬಿಕಾ ಪಾಟೀಲ ಅವರು ವೈರಾಗ್ಯನಿಧಿ ಅಕ್ಕ ವಿಷಯದ ಮೇಲೆ ಮಾತನಾಡುತ್ತಾ ಹುಟ್ಟಿಸುವ ಬೀಜಗಳನ್ನು ಹೆಣ್ಣು ಹುಟ್ಟುವಾಗಲೆ ತೆಗೆದುಕೊಂಡು ಬರುತ್ತಾಳೆ ಸ್ತ್ರೀಯಂದರೆ ಪರಿಪೂರ್ಣ ಮಾನವ ಜೀವಿ. ಇಂತಹ ಸ್ತ್ರೀಯ ಮಹತ್ವವನ್ನು ಹನ್ನೆರಡನೆಯ ಶತಮಾನದ ಶರಣರು ಅರಿತವರಾಗಿದ್ದರು. ದೈಹಿಕವಾಗಿ ತನ್ನನ್ನು ರಕ್ಷಣೆ ಮಾಡಿಕೊಳ್ಳದೇ ದ್ವಾಪರಯುಗದಲ್ಲಿ ದ್ರೌಪದಿಯು ಶ್ರೀಕೃಷ್ಣನ ಮೊರೆ ಹೋಗುತ್ತಾಳೆ. ಆದರೆ ಹನ್ನೆರಡನೆಯ ಶತಮಾನದ ಅಕ್ಕ ಮಹಾದೇವಿ ಮಾನವನಿಗೆ ವಸ್ತ್ರವೆಂದರೆ ಅಭಿಮಾನವೆನ್ನುತ್ತಾಳೆ. ಈ ದೇಹದ ಬಗ್ಗೆ ನನಗೆ ಅಭಿಮಾನವಿಲ್ಲ. ಪ್ರಶ್ನೆ ಕೇಳಿದ ಅಲ್ಲಮ ಪ್ರಭುಗಳಿಗೆ ತಾನು ಕೇಶಾಂಬರಿಯಾದುದು ತನಗಾಗಿ ಅಲ್ಲ ನಿಮಗಾಗಿ ಎನ್ನುತಾಳೆ.

ಸರ್ವಶಕ್ತನಾದ ಭಗವಂತನು ಎಲ್ಲೆಡೆ ವ್ಯಾಪಿಸಿದ್ದಾನೆ. ಅವನು ಕಾಣದ ದೃಶ್ಯವಿಲ್ಲ. ನೋಡದ ತಾಣವಿಲ್ಲ. ಆದ್ದರಿಂದ ಈ ಬೇಹದ ಮೇಲಿನ ಮಮಕಾರ ಬಿಟ್ಟಿರುವೆನೆಂದು ಹೇಳುವಲ್ಲಿ ಅಕ್ಕನ ಅಪ್ರತಿಮ ವೈರಾಗ್ಯದ ನಿಲುವು ಶರಣರಿಗೆ ಗೊತ್ತಾಗುತ್ತದೆ. ಮರದ ಆಶ್ರಯದಲ್ಲಿ ಬಳ್ಳಿ ಬೆಳೆಯುವಂತೆ ಪುರುಷನ ಆಶ್ರಯದಲ್ಲಿ ಸ್ತ್ರೀ ಬೆಳೆಯಬೇಕೆಂಬುದು ನಮ್ಮ ದೇಶದ ಸಂಸ್ಕøತಿ. ಆದರೆ ಅಕ್ಕಮಹಾದೇವಿ ತಾನೇ ಮರವಾಗಿ ಬೆಳೆದು ನಿಲ್ಲುತ್ತಾಳೆ. ಸ್ತ್ರೀ ಲೋಕಕ್ಕೆ ಮಾದರಿಯಾಗುತ್ತಾಳೆ. ಸ್ತ್ರೀಯಿಂದ ಸ್ತ್ರೀ ಇರುವಳು. ಈ ಮನುಕುಲದ ಏಳ್ಗೆಗೂ ಅವಳು ಕಾರಣೀ ಭೂತಳಾಗಿದ್ದಾಳೆ. ಆದಿ ಕಾಲದ ಸ್ತ್ರೀ ಪರಾಧೀನೆಯಾಗಿದ್ದಳು. ಶರಣರ ಕಾಲದ ಸ್ತ್ರೀ ಸ್ವತಂತ್ರಳಾಗಿದ್ದಾಳೆ, ಧೀರಳಾಗಿದ್ದಾಳೆ. ಆದ್ದರಿಂದ ಅಕ್ಕ ಮಹಾದೇವಿಯೆಂದರೆ ಧೀರೆ, ತತ್ತ್ವ ಮತ್ತು ಆದರ್ಶವೆನ್ನುಬೇಕು. ಶಕ್ತಿಯಿದ್ದರನ್ನು ಈ ಲೋಕ ಹಂಗಿಸುತ್ತದೆ. ಅದೇ ಹೇಡಿಗೆ ಯಾರೂ ಏನೆನ್ನುವುದಿಲ್ಲ. ಸ್ತ್ರೀಗೆ ಸಾಮಥ್ರ್ಯವಿರುವುದರಿಂದ ಅವಳನ್ನು ಮೊದಲಿನಿಂದಲೂ ಟೀಕಿಸಿ ಈ ಲೋಕ ಹದ್ದು ಬಸ್ತಿನಲ್ಲಿಡಲು ಯತ್ನಿಸುವುದು ಆ ಸಾಮಥ್ರ್ಯವನ್ನು ಅಕ್ಕಮಹಾದೇವಿ ಸಕಾರತ್ಮಕವಾಗಿ ನಿರೂಪಿಸಿದ ರೀತಿ ಅನನ್ಯವಾದುದು. ತನ್ನ ಪತಿ ಚೆನ್ನಮಲ್ಲಿಕಾರ್ಜುನನೆಂದು ಅರಿತ ಮಹಾನುಭಾವಿ ಅಂದರೆ ಶೂನ್ಯವನ್ನೇ ತನ್ನ ಪತಿಯನ್ನಾಗಿ ಸ್ವೀಕರಿಸಿದ ಅಪ್ರತಿಮ ಅವಿರಳ ಜ್ಞಾನಿಯಾಗಿದ್ದವಳು. ಅರಿವಿನ ರೂಪದಲ್ಲಿ ತನ್ನನ್ನೇ ಸಾಕ್ಷಾತ್ಕರಿಸಿಕೊಂಡ ಚೈತನ್ಯದಾಯಿಯಾಗಿದ್ದಳು.

ಲೋಕದ ಚೇಷ್ಟೆಗೆ ರವಿ ಬೀಜವಾದಂತೆ ಕರಣಂಗಳ ಚೇಷ್ಟಗೆ ಮನವೇ ಬೀಜ ಎನ್ನುವುದು ಅಕ್ಕನ ದಾರ್ಶನಿಕ ನಿಲುವು. ಪುರುಷನಿಗೆ ಸ್ತ್ರೀ ಮಾಯೆಯಾದರೆ. ಸ್ತ್ರೀಗೆ ಪುರುಷನೇ ಮಾಯೆ ಇಲ್ಲಿ ವಿಷಯಂಗಳಿಗೆ ಗಂಡು-ಹೆಣ್ಣೆಂಬ ತಾರತಮ್ಯವಿಲ್ಲ ಎನ್ನುವ ಅಕ್ಕ ಸ್ತ್ರೀಯರಲ್ಲಿರುವ ಕೀಳರಿಮೆಯನ್ನು ಕಿತ್ತೊಗೆಯಲು ಯತ್ನಿಸುತ್ತಾಳೆ. ಎಂದು ಪೂಜ್ಯ ಡಾ. ಗಂಗಾಂಬಿಕ ಅಕ್ಕನವರು ಹೇಳಿದರು.