ಅಪ್ರತಿಮ ದೇಶಭಕ್ತ ಸುಭಾಷ್ ಚಂದ್ರ ಬೋಸ್ : ಪತ್ರಕರ್ತ ಎಂ. ರವೀಂದ್ರನಾಥ್

ಸಂಜೆವಾಣಿ ವಾರ್ತೆ

ಹಿರಿಯೂರು: ಜ.26; ನೇತಾಜಿ ಸುಭಾಷ್ ಚಂದ್ರ ಬೋಸ್ ರವರು ಅಪ್ರತಿಮ ದೇಶಭಕ್ತರು ಅವರ ದೇಶಭಕ್ತಿ ದೇಶಪ್ರೇಮ ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದೆ ಎಂದು ಹಿರಿಯ ಪತ್ರಕರ್ತರಾದ ಎಂ. ರವೀಂದ್ರನಾಥ್ ಹೇಳಿದರು. ನಗರದ ರವಿಕಿರಣ್ ನ್ಯೂಸ್ ಕಚೇರಿ ಆವರಣದಲ್ಲಿ ನಡೆದ ಸುಭಾಷ್ ಚಂದ್ರ ಬೋಸ್ ರವರ 127ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಇಂದಿನ ಯುವ ಪೀಳಿಗೆ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಂತೆ ದೇಶಭಕ್ತಿ ದೇಶಪ್ರೇಮ ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ವೃತ್ತಿಯಲ್ಲಿ ಟೈಲರ್ ಆಗಿರುವ ಮಂಜುನಾಥ್ ರವರು ಸುಭಾಷ್ ಚಂದ್ರ ಬೋಸ್ ರವರ ವೇಷಧರಿಸಿ ಕಳೆದ 24 ವರ್ಷಗಳಿಂದ ಸುಭಾಷ್ ಚಂದ್ರ ಬೋಸ್ ರವರ ಜನ್ಮದಿನಾಚರಣೆ ಆಚರಿಸುತ್ತಾ ಬಂದಿದ್ದೇನೆ. ನನ್ನ ಮಕ್ಕಳಿಗೆ ಜಾನ್ಸಿ ರಾಣಿ ಲಕ್ಷ್ಮೀಬಾಯಿ ಹಾಗೂ ಅನಿತಾ ಬೋಸ್ ಎಂದು ನಾಮಕರಣ ಮಾಡಿದ್ದೇನೆ ಎಂದರು. ಈ ಸಂದರ್ಭದಲ್ಲಿ  ಹಿರಿಯ ಪತ್ರಕರ್ತರಾದ ಎಂ ಕಿರಣ್ ಮಿರಜ್ಕರ್ , ಪ್ರಕಾಶ್ ಮಿರಜ್ಕರ್ ಮತ್ತಿತರು ಉಪಸ್ಥಿತರಿದ್ದರು