ಅಪ್ರತಿಮ ಜನನಾಯಕ ಬಾಬು ಜಗಜೀವನರಾಮ್

ಇಂಡಿ:ಎ.6: ಬಾಬು ಜಗಜೀನರಾಮ್ ಅವರು ಪ್ರತಿಯೋಂದು ಹಂತದಲ್ಲಿಯೂ ಹೋಸ ಹೋಸ ವಿವಾರಗಳನ್ನು ಕಂಡುಕೋಂಡವರು ಅವರ ಕ್ರಾಂತಿಕಾರಿ ಹೇಜ್ಜೆಗಳು ಇಂದಿನ ಯುವ ಪಿಳ್ಳಿಗೆಗೆ ಮಾದರಿಯಾಗಿದೆ. ಉಪ ಪ್ರಧಾನಿಯಾಗಿ ರೈತರ,ಬಡವರಿಗಾಗಿ, ತಮ್ಮ ಅಮೂಲ್ಯವಾದ ಸೇವೆ ಸಲ್ಲಿಸುವುದರ ಮೂಲಕ ದೇಶ ಕಂಡ ಅಪ್ರತಿಮ ಜನನಾಯಕ ಜನ ಮಾನಸದಲ್ಲಿ ಅಚ್ಚಳಿಯದೇ ಉಳಿದುಕೋಡಿದ್ದಾರೆಂದು ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ನಗರದ ಮಿನಿ ವಿಧಾನ ಸೌದಾದಲ್ಲಿ ಹಮ್ಮಿ ಕೋಂಡಿದ ತಾಲೂಕಾ ಆಡಳಿತ ವತಯಿಂದ ಡಾ|| ಬಾಬು ಜಗಜೀವನರಾಮ್ ಅವರ 114ನೇ ಜಯಂತಿಯನ್ನು ಅತ್ಯಂತ ಸರಳವಾಗಿ ಆಚರಿಸಲಾಯಿತು. ಅವರು ಕೃಷಿ ಮಂತ್ರಿಯಾಗಿದ್ದಾಗ ತಗೆದುಕೊಂಡ ನಿರ್ಣಾಯಗಳು ಜಾರಿಗೆ ತಂದ ಯೋಜನೆಗಳು ರೈತರಿಗೆ ಅನುಕೂಲವಾಗಿದ್ದವು. ಕೃಷಿಯ ಜೊತೆಗೆ ನಿರಾವರಿ ಷಢತ್ರದಲ್ಲಿಯೂ ಅವರು ಸೇವೆ ಸಲ್ಲಿಸಿದ್ದರು ರೈತರಿಗೆ ಬೆನ್ನೆಲುಬಾಗಿ ನಿಂತ ಅವರು ರಾಷ್ಟ್ರಭಿವೃದ್ಧಿಗೆ ನೀಡಿದ ಕೊಡುಗೆ ಅಪಾರ ಎಂದು ಅವರು ಹೇಳಿದರು.

ಉಪ ವಿಭಾಗಾಧಿಕಾರಿ ರಾಹುಲ ಸಿಂಧೆ, ತಾಲೂಕಾ ಪಂಚಾಯತ ಅಧ್ಯಕ್ಷ ಅಣ್ಣಾರಾಯ ಬಿದರಕೊಟಿ, ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಸುನಿಲ ಮುದ್ದಿನ, ಸಂಜಯ ಖಡೇಕರ, ತಹಶೀಲ್ದಾರ ಸಿ, ಎಸ್, ಕುಲಕರ್ಣಿ, ಪುರಸಭೆ ಮುಖ್ಯಾಧಿಕಾರಿ ಶಿವಾನಂದ ಪೂಜಾರಿ, ಸಿ,ಪಿ,ಆಯ್, ರಾಜಶೇಖರ ಬಡೆದೇಸಾರ, ಮನೋಜಕುಮಾರ ಗಡಬಳ್ಳಿ, ಕಾಸುಗೌಡ ಬಿರಾದಾರ, ಶ್ರೀಸೈಲ ಪೂಜಾರಿ, ಸೆರಿದಂತೆ ಅನೆಕ ಜನರು ಉಪಾಸ್ಥಿತರಿದ್ದರು.