ಅಪ್ಪ ಬೇಗ ವಾಪಸ್ ಬನ್ನಿ ವಾರ್ನರ್ ಪುತ್ರಿಯ ಮೊರೆ


ನವದೆಹಲಿ, ಮೇ ೫- ಆಪ್ಪ ದಯವಿಟ್ಟು ವಾಪಸ್ ಬನ್ನಿ.ಈ ರೀತಿ ಇನ್ ಸ್ಟಾಗ್ರಾಂನಲ್ಲಿ ಗೋ ಗರೆದವರು ಬೇರೆ ಯಾರೂ ಅಲ್ಲ.ಸನ್ ರೈಸರ್ಸ್ ಪರ ಆಡುತ್ತಿರುವ ಡೇವಿಡ್ ವಾರ್ನರ್ ಪುತ್ರಿ.
ಐಪಿಎಲ್ ನಲ್ಲಿ ಭಾಗವಹಿಸಿದ್ದ ಫ್ರಾಂಚೈಸಿಗಳ ಪೈಕಿ ನಾಲ್ಕು ಫ್ರಾಂಚೈಸಿ ಗಳ ಬಯೋಬಬಲ್ನಲ್ಲಿ ಇದ್ದರೂ ನಾಲ್ವರಿಗೆ ಸೋಂಕು ಕಾಣಿಸಿಕೊಂಡ ಬಳಿಕ ಅನಿರ್ದಿಷ್ಟಾವಧಿಗೆ ೧೪ ನೇ ಆವೃತ್ತಿಯನ್ನು ಮುಂದೂಡಿದ ಬಳಿಕ ವಾರ್ನರ್ ಪುತ್ರಿ ತನ್ನ ತಂದೆ ಮಾಡಿಕೊಂಡ ಕಳಕಳಿಯ ಮನವಿ ನಿಜಕ್ಕೂ ದೇಶದಲ್ಲಿ ಕಾಣಿಸಿಕೊಂಡ ಕೊರೊನಾ ಕ್ರೂರತೆಗೆ ಹಿಡಿದ ಕೈಗನ್ನಡಿಯಾಯಿತು.
ಆಟಗಾರರ ಸುರಕ್ಷತೆ ವಿಚಾರದಲ್ಲಿ ಬಿಸಿಸಿಐ ರಾಜಿ ಮಾಡಿಕೊಳ್ಳಲು ಸುತರಾಂ ಇಷ್ಟವಿಲ್ಲದ ಕಾರಣ ಐಪಿಎಲ್ ಪಂದ್ಯವನ್ನು ರದ್ದುಪಡಿಸುವ ನಿರ್ಧಾರವನ್ನು ಪ್ರಕಟಿಸಿದೆ. ಇದರೊಂದಿಗೆ ಪ್ರಸಕ್ತ ಸಾಲಿನ ೨೦೨೧ ಐಪಿಎಲ್ ಅಧ್ಯಾಯಕ್ಕೆ ಪೂರ್ಣ ವಿರಾಮ ಬಿದ್ದಿದೆ.
ಹೇಗಾದರೂ ಮಾಡಿ ಐಪಿಎಲ್ ಮುಗಿಸಬೇಕೆಂಬ ಧಾವಂತದಲ್ಲಿದ್ದ ಬಿಸಿಸಿಐಗೆ ಕೊರೊನಾ ತಣ್ಣೀರು ಎರಚಿದೆ. ಆಟಗಾರರು ಹಾಗೂ ಟೂರ್ನಿ ಸಂಘಟಕರ ಸುರಕ್ಷತೆಯ ದೃಷ್ಟಿಯಿಂದ ಟೂರ್ನಿ ರದ್ದುಪಡಿಸುವ ತೀರ್ಮಾನ ಕೈಗೊಂಡಿದೆ.
೨೪ ದಿನಗಳಲ್ಲಿ ೨೯ ಪಂದ್ಯಗಳು ನಡೆದಿದ್ದವು. ಇನ್ನೇನೂ ಟೂರ್ನಿ ಆರ್ಧದತ್ತ ದಾಪುಗಾಲು ಹಾಕಿತ್ತು. ಆಟಗಾರರಿಗೆ ಸೋಂಕು ತಗುಲಿದ ಬಳಿಕ ಬಿಸಿಸಿಐಗೆ ಐಪಿಎಲ್ ರದ್ದುಪಡಿಸುವುದನ್ನು ಬಿಟ್ಡರೆ ಬೇರೆ ಆಯ್ಕೆಯೇ ಇರಲಿಲ್ಲ.
ಕೊರೊನಾ ಕರಿ ನೆರಳಿನ ಭಯದಲ್ಲೇ ಆಡುತ್ತಿದ್ದ ವಿದೇಶಿ ಆಟಗಾರರು ನೆಮ್ಮದಿಯ ನಿಟ್ಟುಸಿರು ಬಿಟ್ಟು ತಮ್ಮ ಪ್ರೀತಿ ಪಾತ್ರರಾದ ಕುಟುಂಬ ಸದಸ್ಯರನ್ನು ಸೇರಿಕೊಳ್ಳಲು ಸಜ್ಜಾಗಿದ್ದಾರೆ.
ಆದರೂ ಟೂರ್ನಿ ಯನ್ನು ಬಿಸಿಸಿಐ ಅಧಿಕೃತವಾಗಿ ರದ್ದುಪಡಿಸಿಲ್ಲ. ಟಿ- ವಿಶ್ವಕಪ್ ಗೂ ಮುನ್ನ ಐಪಿಎಲ್ ಪೂರ್ಣಗೊಳಿಸುವ ಬಗ್ಗೆಯೂ ಚಿಂತನೆ
ನಡೆಸಿದೆ. ಆದರೆ ದೇಶದಲ್ಲಿ ಸೋಂಕಿನ ಅಬ್ಬರ ಕಡಿಮೆಯಾದರಷ್ಟೇ ಟೂರ್ನಿ ನಡೆಸಲು ಅವಕಾಶವಾಗಲಿದೆ.
ಮೂಲಗಳ ಪ್ರಕಾರ ಟಿ- ೨೦ ವಿಶ್ವಕಪ್ ಯುಎಇಗೆ ಸ್ಥಳಾಂತರಿಸುವ ಸಾಧ್ಯತೆ ಇದೆ ಎಂದು ಈ ಹಿಂದೆ ಬಿಸಿಸಿಐ ಸುಳಿವು ನೀಡಿತ್ತು. ಹೀಗಾಗಿ ಐಪಿಎಲ್ ನಡೆಸುವುದು ದೂರದ ಮಾತು ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ.
ಐಪಿಎಲ್ ನಡೆಸಬೇಕೆ ಬೇಡವೆ ಎಂಬುದನ್ನು ನಂತರದ ದಿನಗಳಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಐಪಿಎಲ್ ಆಧ್ಯಕ್ಷ ಬ್ರಿಜೇಶ್ ಪಟೇಲ್ ಹೇಳಿದ್ದಾರೆ.
ಪ್ರತಿಯೊಂದು ತಂಡಕ್ಕೂ ನಾಲ್ಕು ಬಯೋಬಬಲ್ ಅಧಿಕಾರಿಗಳು ಬಿಸಿಸಿಐ ನೇಮಕ ಮಾಡಿದೆ. ಆದರೂ ಆಟಗಾರರಿಗೆ ಸೋಂಕು ತಗುಲಿರುವುದು ಐಪಿಎಲ್ ಗೆ ಕೊರೊನಾ ಕರಿ ನೆರಳು ಆವರಿಸಿದೆ.
ಚಕ್ರವರ್ತಿ ಅಹಮದಾಬಾದ್ ನ ಅಪಲೊ ಆಸ್ಪತೆಗೆ ಸ್ಕ್ಯಾನಿಂಗ್ ಗೆ ತೆರಳಿದ ವೇಳೆ ಹೋಟೆಲ್ ಮತ್ತು ಆಸ್ಪತ್ರೆ ನಡುವೆ ಇದ್ದ ಹಸಿರು ಕಾರಿಡಾರ್ ಉಲ್ಲಂಘನೆಯಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಆದರೆ ಈ ಬಗ್ಗೆ ಫ್ರಾಂಚೈಸಿಯ ಮ್ಯಾನೇಜರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ರೀತಿಯ ಹತ್ತು ಹಲವು ಪ್ರಶ್ನೆಗಳು ಉದ್ಬವವಾಗುವುದು ಸಹಜ. ಇವೆಲ್ಲ ಅಡೆ ತಡೆಗಳು ಎದುರಾಗುತ್ತವೆ ಎಂಬ ಕಾರಣಕ್ಕೆ ಕಳೆದ ಬಾರಿಯ ಐಪಿಎಲ್ ಟೂರ್ನಿಯನ್ನು ಯುಎಇಗೆ ಸ್ಥಳಾಂತರಿಸಿ ಯಶಸ್ವಿಯಾಗಿ ಪೂರ್ಣಗೊಳಿಸಿತ್ತು.