ಕಲಬುರಗಿ:ಜೂ.19:ಎಲ್ಲ ಮಕ್ಕಳಿಗೂ ಅಪ್ಪನೆಂದರೆ ಅಚ್ಚುಮೆಚ್ಚು. ಅಪ್ಪ ಎಂದರೆ ಭಾವನೆಗಳ ಮೂಟೆ. ಮಕ್ಕಳ ಜೀವನದಲ್ಲಿ ಅಪ್ಪಂದಿರ ಪಾತ್ರ ಬಹುದೊಡ್ಡದು ಎಂದು ಉಪನ್ಯಾಸಕ, ಚಿಂತಕ ದೇವಿಂದ್ರಪ್ಪ ವಿಶ್ವಕರ್ಮ ಹೇಳಿದರು. ಅವರು ಜೇವರ್ಗಿ ನಗರದ ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ವಿಶ್ವ ಅಪ್ಪಂದಿರ ದಿನಾಚಾರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದ ಅವರು ಬಸವೇಶ್ವರ ಶಿಕಣ ಮಹಾವಿದ್ಯಾಲಯದಲ್ಲಿ ಓದು-ಬರಹದ ಜೊತೆಗೆ ಸಂಸ್ಕಾರದ ಶಿಕ್ಷಣ ಸಿಗುತ್ತಿದೆ. ಉತ್ತಮ ವಾತಾವರಣವಿದೆ. ಮಕ್ಕಳಲ್ಲಿ ನಾಯಕತ್ವ ಗುಣ ಬೆಳೆಸಲು ಇಂತಹ ಕಾರ್ಯಕ್ರಮಗಳು ಅಗತ್ಯ ಎಂದರು. ಬೇರೆ ಬೇರೆ ದೇಶದಲ್ಲಿ ಅಪ್ಪಂದಿರ ದಿನಾಚಾರಣೆ ಆಚರಿಸಲಾಗುತ್ತದೆ. ತಂದೆಯ ತ್ಯಾಗ, ಪ್ರೀತಿ, ಪ್ರೇಮ ಮರೆಯಬಾರದು. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ತನ್ನತನವನ್ನು ತೊರೆದು, ಎಲ್ಲವೂ ಮಕ್ಕಳಿಗಾಗಿ ದಾರೆಯೆರೆಯುವ ಮೂಲಕ ಮಕ್ಕಳ ಭವಿಷ್ಯವನ್ನು ನಿರ್ಮಿಸುವ ಶಿಲ್ಪಿ ತಂದೆಯಾಗಿದ್ದಾನೆ. ಆದರೆ ಇತ್ತೀಚಿನ ವರ್ಷಗಳಲ್ಲಿ ನಮ್ಮ ದೇಶದಲ್ಲೂ ಅಪ್ಪಂದಿರ ದಿನ ಆಚರಿಸಲಾಗುತ್ತಿದೆ. ಅಪ್ಪಂದಿರ ನಿರ್ಲಕ್ಷ್ಯ ಸರಿಯಲ್ಲ. ಮಕ್ಕಳಿಗೆ ಅಪ್ಪಂದಿರ ಬಗ್ಗೆ ಪ್ರೀತಿ, ವಿಶ್ವಾಸ, ಗೌರವ ಹೆಚ್ಚಾಗಲು ಇಂತಹ ಕಾರ್ಯಕ್ರಮ ಅರ್ಥಪೂರ್ಣವಾಗಿದೆ. ಪಾಲಕರು ಮಕ್ಕಳ ಬಗ್ಗೆ ಕಾಳಜಿ ತೋರಬೇಕು. ಮಕ್ಕಳು ಏನು ಮಾಡುತ್ತಿದ್ದಾರೆಂದು ತಿಳಿಯಬೇಕು. ಎಂದರು. ಈ ಸಂದರ್ಭದಲ್ಲಿ ಪ್ರಶಿಕ್ಷಣಾರ್ಥಿಗಳಾದ ಐಶು, ಸವಿತಾ ಎಮ್, ರಾಜಶ್ರೀ, ಸವಿತಾ ಕೆ, ಲಕ್ಷ್ಮೀ ಪಿ, ಬಸಮ್ಮಾ ಆರ್, ದಾನೇಶ್ವರಿ, ರೇಣುಕಾ, ದಾನಮ್ಮ, ಮಹಾಂತೇಶ್, ಮಂಜುನಾಥ್, ಶರಣಗೌಡ ಸೇರಿ ಮುಂತಾದವರು ಹಾಜರಿದ್ದರು.