ಅಪ್ಪ ಅಮ್ಮ ಇಲ್ಲದ ಯನಗುಂದಾದ ಪ್ರತಿಭಾವಂತ ಬಾಲೆಗೆ ಬೇಕಿದೆ ಪ್ರಜ್ಞಾವಂತರ ಆಶ್ರಯ

ಔರಾದ :ಮೇ.16: ನಮ್ಮ ಯನಗುಂದಾ ಸರಕಾರಿ ಪ್ರೌಢ ಶಾಲೆಯ ಅಪ್ಪ ಅಮ್ಮ ಇಲ್ಲದ ವಿದ್ಯಾರ್ಥಿ ಬಸವಜ್ಯೋತಿ ಬಾಬುಗೊಂಡ ಹತ್ತನೇ ತರಗತಿಯಲ್ಲಿ ಪ್ರತಿಶತ 92.48%ರಷ್ಟು ಫಲಿತಾಂಶದ ಮೂಲಕ ಅಗ್ರಶ್ರೇಣಿಯಲ್ಲಿ ಉತ್ತೀರ್ಣಳಾಗಿದ್ದಾಳೆ, ಪ್ರತಿಭಾವಂತ ವಿದ್ಯಾರ್ಥಿ ಆಗಿದರೂ ಕೌಟುಂಬಿಕ ಸಮಸ್ಯೆ ಹಾಗೂ ಬಡತನದ ಕಾರಣ ಮುಂದಿನ ವ್ಯಾಸಂಗದ ದಿಕ್ಕು ತೋಚದಂತಾಗಿದೆ.

ಬಸವಜ್ಯೋತಿಗೆ ತಾನು ಚೆನ್ನಾಗಿ ಓದಬೇಕು, ಉನ್ನತ ಹುದ್ದೆ ಪಡೆದು ಸಮಾಜ ಸೇವೆ ಸಲ್ಲಿಸಬೇಕು ಎನ್ನುವ ಕನಸಿದೆ ಆದರೂ ಸಧ್ಯ ಆಕೆಗೆ ತನ್ನ ಮುಂದಿನ ವಿದ್ಯಾಭ್ಯಾಸದ ಹೇಗೆ ಎನ್ನುವುದೇ ದೊಡ್ಡ ಚಿಂತೆಯಾಗಿ ಕಾಡುತ್ತಿದೆ.

ಆಕೆಯ ಮನೆಯ ಪರಿಸ್ಥಿತಿ ಸರಿಯಿಲ್ಲ, ಕಾಲೇಜ ಫೀ ಕಟ್ಟಲಾಗದ ಸ್ಥಿತಿ ಆಕೆಗೆ ದಿನನಿತ್ಯದ ಬದುಕು ನಡೆದರೆ ಸಾಕು ಎನ್ನುವ ದಯನೀಯ ಸ್ಥಿತಿ ಈಕೆಗೆ ಇದೆ. ಬಸವಜ್ಯೋತಿ ಗರ್ಭದಲ್ಲಿ ಇರುವಾಗಲೇ ತಂದೆಯನ್ನು ಕಳೆದುಕೊಂಡಳು, ತಾಯಿ ಮಗಳನ್ನು ಅಜ್ಜಿ ಜ್ಞಾನಬಾಯಿ ಅಜ್ಜ ಜ್ಞಾನಗೊಂಡ ಅವರಲ್ಲಿ ಬಿಟ್ಟು ಹೋಗಿದ್ದಾಳೆ, ಸಧ್ಯ ಬಸವಜ್ಯೋತಿಯ ಪಾಲಿಗೆ ಅಜ್ಜ,ಅಜ್ಜಿಯೇ ತಂದೆ ತಾಯಿ. ವಯಸ್ಸಾದ ಜೀವಕ್ಕೆ ಮೊಮ್ಮಗಳು ಪ್ರತಿಭಾವಂತೆ ಆಗಿದರೂ ಮುಂದೆ ವಿದ್ಯಾಭ್ಯಾಸ ಮಾಡಿಸಲಾಗದ ಅಸಹಾಯಕ ಪರಿಸ್ಥಿತಿ.

ಬಸವಜ್ಯೋತಿಯ ಅಜ್ಜ ಜ್ಞಾನಗೊಂಡ ಅವರ ಆರ್ಥಿಕ ಪರಿಸ್ಥಿತಿ ಅಷ್ಟೇನು ಸರಿಯಿಲ್ಲ. ಹೊಟ್ಟೆ ತುಂಬಿದರೆ ಸಾಕು ಎನ್ನುವ ಬಡತನ ಯಾವುದೇ ಆಸ್ತಿ ಇಲ್ಲ, ವಯಸ್ಸಿನ ಕಾರಣ ದುಡಿಯಲು ಶಕ್ತಿ ಇಲ್ಲದ ಸ್ಥಿತಿ, ಗ್ರಾಮದ ಹೊರ ವಲಯದಲ್ಲಿ ಗುಡಿಸಲು ಹಾಕಿಕೊಂಡು ವಾಸವಾಗಿದ್ದಾರೆ, ಅಜ್ಜನಿಗೆ ಮೊಮ್ಮಗಳದೇ ಚಿಂತೆ. ಸಧ್ಯ ಪ್ರತಿಭಾವಂತ ವಿದ್ಯಾರ್ಥಿ
ಬಸವಜ್ಯೋತಿ ವಿಧ್ಯಾಭ್ಯಾಸಕ್ಕೆ ಸಮಾಜದ ಪ್ರಜ್ಞಾವಂತರ ಆಶ್ರಯದ ಅವಶ್ಯಕತೆ ಇದೆ.

ಬಸವಜ್ಯೋತಿ ಪ್ರತಿಭಾವಂತ ಮಗಳು, ಉತ್ತಮ ಸ್ವಭಾವ ಮತ್ತು ಅಧ್ಯಯನಶಿಲತೆ ಮೈಗೂಡಿಸಿಕೊಂಡ ಈಕೆಗೆ ಪ್ರಜ್ಞಾವಂತರು ಸಹಾಯ ಮಾಡಿದ್ದರೆ ಭವಿಷ್ಯದಲ್ಲಿ ಉನ್ನತ ಸಾಧನೆ ಮಾಡುತ್ತಾಳೆ ಎನ್ನುವ ವಿಶ್ವಾಸ ವ್ಯಕ್ತ ಪಡಿಸುತ್ತಾರೆ ಮುಖ್ಯಗುರು ಶಾಮಸುಂದರ ಖಾನಪೂರಕರ್.

ಯನಗುಂದಾ ಶಾಲೆ ಅನೇಕ ರಚನಾತ್ಮಕ ಚಟುವಟಿಕೆಯಿಂದ ರಾಜ್ಯದ ಗಮನ ಸೇಳೆಸಿದೆ. ಶಾಲೆಯ ಬಗ್ಗೆ ಸಮಾಜದಲ್ಲಿ ಸದ್ಭಾವನೆಯಿದೆ. ಶಾಲೆಯ ಅನೇಕ ಕಾರ್ಯಚಟುವಟಿಗೆ ಗ್ರಾಮಸ್ಥರು, ಶಾಲೆಯ ಹಿತೈಸಿಗಳು ಸಹಾಯ ಹಸ್ತಾ ನೀಡಿರುವುದು ಇಲ್ಲಿ ಸ್ಮರಿಸಬಹುದು. ಸಧ್ಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಡತನ ಮತ್ತು ಕೌಟುಂಬಿಕ ಸಮಸ್ಯೆ ಅಡ್ಡಿ ಆಗಬಾರದು, ಸಮಾಜದ ಪ್ರಜ್ಞಾವಂತರು, ದಾನಿಗಳು ಸಹಾಯ ಹಸ್ತ ನೀಡಿದ್ದರೆ ಈ ಮಗಳ ಭವಿಷ್ಯ ಉಜ್ವಲವಾಗಲಿದೆ.

ಪ್ರತಿವರ್ಷ ಉತ್ತಮ ಫಲಿತಾಂಶ ಪಡೆದ ಮಕ್ಕಳಿಗೆ ಪೆÇ್ರೀತ್ಸಾಹ ಧನ ನೀಡುವ ಕಾರ್ಯ ಗ್ರಾಮದ ಮುಖಂಡರಾದ ಗುಂಡಯ್ಯ ಸ್ವಾಮಿ, ವೈಜಿನಾಥ ಯನಗುಂದೆ, ಹಾಗೂ ಸುಂಧಾಳ ಗ್ರಾಮ ಪಂಚಾಯತ್ ಮಾಡಿಕೊಂಡು ಬರುತ್ತಿರುವುದು ಸ್ವಲ್ಪಮಟ್ಟಿಗೆ ಸಹಾಯವಾಗಲಿದೆ. ಗಣರಾಜ್ಯೋತ್ಸವಕ್ಕೆ ಅತಿಥಿಯಾಗಿ ಆಗಮಿಸಿದ ವಚನ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷೆ ಲಿಂಗಾರತಿ ಅಲ್ಲಮಪ್ರಭು ಅವರು ಮಗಳಿಗೆ ಸಹಾಯ ಮಾಡುವದಾಗಿ ತಿಳಿಸಿದ್ದಾರೆ.

ಶಾಲಾ ಸಿಬಂದ್ದಿ ವರ್ಗದವರು, ಹಳೆಯ ವಿದ್ಯಾರ್ಥಿಗಳು ಹಾಗೇ ಮೀತ್ರರು ಸಹಾಯ ನೀಡಲಿದ್ದಾರೆ. ತಾವು ಸಹ ಅಗತ್ಯ ಸಹಾಯ ಮಾಡುವ ಮೂಲಕ ಮಗಳ ಬದುಕಿಗೆ ಆಶಾಕಿರಣ ಮೂಡಿಸಲು ಬಸವಜ್ಯೋತಿ ಬಾಬುಗೊಂಡ ಇವರ ಬ್ಯಾಂಕ್ ಖಾತೆ ಸಂಖ್ಯೆ – 62374226920
SBI AURAD. (ಎಸ್‍ಬಿಐ ಔರಾದ)
IFSC CODE(ಐಎಫ್‍ಎಸ್‍ಸಿ ಕೋಡ್ – 0020240 ಹಣಕಾಸಿನ ನೇರವು ನೀಡಬಹುದು. ಮಗಳೊಂದಿಗೆ ಮಾತನಾಡಲು ದೂರವಾಣಿ ಸಂಖ್ಯೆ 9353419036 ಗೆ ಕರೆ ಮಾಡಬಹುದು.