ಅಪ್ಪು ಹ್ಯಾಟ್ಸ್ ಆಫ್ ರಸಮಂಜರಿ ಕಾರ್ಯಕ್ರಮ

ಬೆಂಗಳೂರು,ಮಾ.೨೫-ನಗರದ ಜೆಸಿರಸ್ತೆಯ ಪುರಭವನದಲ್ಲಿ ನಾಳೆ(ಮಾ.೨೬)ಮಧ್ಯಾಹ್ನ ಡಾ.ರಾಜ್ ಕುಮಾರ್ ಹಾಗೂ ಪುನೀತ್ ರಾಜ್‌ಕುಮಾರ್ ಅವರ ಆಯ್ದ ಗೀತೆಗಳ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.
ಮಧ್ಯಾಹ್ನ ೩ ರಿಂದ ರಾತ್ರಿ ೧೦ ರವರೆಗೆ ನಡೆಯುವ ಅಪ್ಪು ಹ್ಯಾಟ್ಸ್ ಆಫ್ ಬೃಹತ್ ರಸಮಂಜರಿ ಕಾರ್ಯಕ್ರಮವು ಅಶಕ್ತ ಕಲಾವಿದರಿಗೆ ಸಹಾಯಾರ್ಥವಾಗಿ ಆಯೋಜನೆಗೊಂಡಿದೆ.
ಜೀ ಕನ್ನಡ ಹಾಗೂ ಕಲರ್ಸ್ ಕನ್ನಡದ ಖ್ಯಾತ ಕಲಾವಿದರಾದ ನಾದಿರಾ ಬಾನು,ಪೊಲೀಸ್ ಸುಬ್ರಮಣಿ,ಭೂಮಿಕಾ ಎಸ್.ಕುಂದಗೋಡು,
ದೀಪಿಕಾ,ಹೃತಿಕ್,ಶೃತಿ ಬಿಡೆ ಅವರು ಪಾಲ್ಗೊಳ್ಳಲಿದ್ದಾರೆ.